ಕೆಪಿಎಲ್ ಫಿಕ್ಸಿಂಗ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್; ಹನಿಟ್ರ್ಯಾಪ್‌ ಮೂಲಕ ಆಟಗಾರರಿಗೆ ಬ್ಲ್ಯಾಕ್‌ಮೇಲ್

ಈಗಾಗಲೇ 7 ಮಂದಿಯನ್ನು ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಬಹಳಷ್ಟು ಆಟಗಾರರಿಗೆ ಹನಿ ಟ್ರ್ಯಾಪಿಂಗ್ ನಡೆಸಲಾಗಿದೆ. ಆರೋಪಿಗಳು ಎಲ್ಲೇ ಇದ್ದರೂ ಅವರನ್ನು ನಾವು ಬಂಧಿಸುತ್ತೇವೆ ಎಂದು ಭಾಸ್ಕರ್ ರಾವ್ ಹೇಳಿಕೆ ನೀಡಿದ್ದಾರೆ.

news18-kannada
Updated:November 20, 2019, 12:36 PM IST
ಕೆಪಿಎಲ್ ಫಿಕ್ಸಿಂಗ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್; ಹನಿಟ್ರ್ಯಾಪ್‌ ಮೂಲಕ ಆಟಗಾರರಿಗೆ ಬ್ಲ್ಯಾಕ್‌ಮೇಲ್
ಈಗಾಗಲೇ 7 ಮಂದಿಯನ್ನು ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಬಹಳಷ್ಟು ಆಟಗಾರರಿಗೆ ಹನಿ ಟ್ರ್ಯಾಪಿಂಗ್ ನಡೆಸಲಾಗಿದೆ. ಆರೋಪಿಗಳು ಎಲ್ಲೇ ಇದ್ದರೂ ಅವರನ್ನು ನಾವು ಬಂಧಿಸುತ್ತೇವೆ ಎಂದು ಭಾಸ್ಕರ್ ರಾವ್ ಹೇಳಿಕೆ ನೀಡಿದ್ದಾರೆ.
  • Share this:
ಬೆಂಗಳೂರು (ನ. 20): ಕೆಪಿಎಲ್ ಫಿಕ್ಸಿಂಗ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇತ್ತೀಚೆಗಷ್ಟೆ ಫಿಕ್ಸಿಂಗ್ ನಡೆಸಿದ ಆರೋಪದಡಿ ಬೆಳಗಾವಿ ಫ್ಯಾಂಥರ್ಸ್ ತಂಡದ ಮಾಲೀಕ ಅಲಿ ಅಶ್ವಾಕ್ ತಾರ್​ನನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ವೇಳೆ ತಮಿಳುನಾಡು ಪ್ರಿಮಿಯರ್ ಲೀಗ್​ನ ಚಂದ್ರಶೇಖರ್ ಎಂಬ ಆಟಗಾರ ಬೆಟ್ಟಿಂಗ್ ವಿಚಾರ ಎಲ್ಲಿ ಹೊರಬರುತ್ತದೆ ಎಂದು ಹೆದರಿ ಸೂಸೈಡ್ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಹೊರಬಿದ್ದಿತ್ತು.

ಸದ್ಯ ಈ ಫಿಕ್ಸಿಂಗ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಟ್ರ್ಯಾಪ್‌ ಮೂಲಕ ಕೆಲವು ಆಟಗಾರರನ್ನು ಬ್ಲ್ಯಾಕ್‌ಮೇಲ್ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.

ಈಗಾಗಲೇ 7 ಮಂದಿಯನ್ನು ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಎಲ್ಲಾ ತಂಡಗಳಿಗೂ ನೋಟಿಸ್ ನೀಡಲಾಗಿದೆ. ಬಹಳಷ್ಟು ಆಟಗಾರರಿಗೆ ಹನಿ ಟ್ರ್ಯಾಪಿಂಗ್ ನಡೆಸಲಾಗಿದೆ. ಆರೋಪಿಗಳು ಎಲ್ಲೇ ಇದ್ದರೂ ಅವರನ್ನು ನಾವು ಬಂಧಿಸುತ್ತೇವೆ. ಸಾಕ್ಷಿಗಳು ಸಿಕ್ಕಕೂಡಲೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಭಾಸ್ಕರ್ ರಾವ್ ಹೇಳಿಕೆ ನೀಡಿದ್ದಾರೆ.

ಡೇ ನೈಟ್ ಟೆಸ್ಟ್​​ನಲ್ಲಿ ಕೊಹ್ಲಿ 32 ರನ್ ಗಳಿಸಿದರೆ ಅದು ಭಾರತ ಪರ ಯಾರೂ ಮಾಡಿರದ ಸಾಧನೆ!

ಸದ್ಯ ಕೆಪಿಎಲ್ ತಂಡದ ಮಾಲೀಕರಿಗೆ ನೀಡಿರುವ ನೋಟಿಸ್‌ಗಿಂತ ಕೆಎಸ್‌ಸಿಎಗೆ ನೀಡಿರುವ ನೋಟಿಸ್‌ನಲ್ಲಿ ಸಿಸಿಬಿ ಹೆಚ್ಚಿನ ವಿವರಗಳನ್ನು ಕೇಳಿದೆ. ಈವರೆಗೆ ಮೋಸದ ಆಟಕ್ಕೆ ಎಷ್ಟು ಮಂದಿ ವಿರುದ್ಧ ಹೇಗೆ ಕ್ರಮ ಕೈಗೊಂಡಿದ್ದೀರಿ?, ಕೆಎಸ್‌ಸಿಎ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರುವ ಕ್ಲಬ್‌ ಯಾವುವು? ಹೊಂದಾಣಿಕೆಗೆ ಮಾಡಿಕೊಂಡಿರುವ ಒಪ್ಪಂದಗಳೇನು? ಸೇರಿದಂತೆ ಅನೇಕ ಪ್ರಶ್ನೆಗಳು ಕೆಎಸ್​ಸಿಎಗೆ ಕೇಳಿದ್ದು ಉತ್ತರ ನೀಡಬೇಕಿದೆ.

ಕರ್ನಾಟಕ ಪ್ರೀಮಿಯರ್ ಲೀಗ್ ಮ್ಯಾಚ್ ಫಿಕ್ಸಿಂಗ್ ಸಂಬಂಧಿಸಿದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಐಪಿಎಲ್​ ಆಟಗಾರರು ಸಹ ಫಿಕ್ಸಿಂಗ್​ನಲ್ಲಿ ಭಾಗಿಯಾಗಿರುವ ಮಾಹಿತಿಗಳು ಹೊರಬೀಳುತ್ತಿದೆ.

ಸಿಸಿಬಿ ಅಧಿಕಾರಿಗಳು ಕರ್ನಾಟಕದ ಕ್ರಿಕೆಟಿಗರಾದ ಸಿಎಂ ಗೌತಮ್ ಹಾಗೂ ಅಬ್ರಾರ್ ಖಾಜಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಗೌತಮ್ ಮಾಹಿತಿಯಾಧರಿಸಿ ಐಪಿಎಲ್ ಆಟಗಾರ ಕೆ.ಸಿ ಕಾರ್ಯಪ್ಪ ಅವರನ್ನು ಅಧಿಕಾರಿಗಳು ಬಂಧಿಸಿದ್ದಾರೆ.RCB: ಹರಾಜಿಗೂ ಮುನ್ನ ಕೈಬಿಟ್ಟ ಈ ಸ್ಟಾರ್ ಆಟಗಾರನನ್ನು ಮತ್ತೆ ಖರೀದಿ ಮಾಡಲಿದೆ ಆರ್​​ಸಿಬಿ?

ಕರ್ನಾಟಕ ಪ್ರೀಮಿಯರ್ ಲೀಗ್ 2019 ಫೈನಲ್ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ಸಂಬಂಧ ಬಳ್ಳಾರಿ ಟಸ್ಕರ್ಸ್ ತಂಡದ ಕಪ್ತಾನ ಗೌತಮ್ ಹಾಗೂ ಆಲ್‌ರೌಂಡರ್ ಅಬ್ರಾರ್ ಖಾಜಿರನ್ನು ವಾರಗಳ ಹಿಂದೆಯೇ ಬಂಧಿಸಲಾಗಿತ್ತು. ಈ ಆಟಗಾರರು ನೀಡಿರುವ ಮಾಹಿತಿಯಂತೆ ಇದೀಗ ತನಿಖೆಯು ಐಪಿಎಲ್ ಪಂದ್ಯಾವಳಿಯತ್ತ ಸಾಗಿದೆ.

First published: November 20, 2019, 12:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading