KPL 2019: 120 ಎಸೆತಗಳಲ್ಲಿ 180 ರನ್​; ಪಾಂಡೆ ಸ್ಫೋಟಕ ಶತಕದ ಹೊರತಾಗಿಯು ಸೋತ ಬೆಳಗಾವಿ

KPL 2019: ಮನೀಶ್ ಪಾಂಡೆಯನ್ನು ಹೊರತು ಪಡಿಸಿ ಮತ್ಯಾವ ಆಟಗಾರರು ಉತ್ತಮ ಪ್ರದರ್ಶನ ನೀಡಿಲ್ಲ. ಒಂದುಕಡೆ ಸರಾಗವಾಗಿ ವಿಕೆಟ್ ಕಳೆದುಕೊಳ್ಳುತ್ತಿದ್ದರೆ ಇತ್ತ ಪಾಂಡೆ ಬೌಂಡರಿ-ಸಿಕ್ಸರ್​ಗಳ ಮಳೆ ಸುರಿಸಿದರು.

ಮನೀಶ್ ಪಾಂಡೆ

ಮನೀಶ್ ಪಾಂಡೆ

  • News18
  • Last Updated :
  • Share this:
ಬೆಂಗಳೂರು (ಆ. 22): ಕರ್ನಾಟಕ ಪ್ರೀಮಿಯರ್ ಲೀಗ್​ನಲ್ಲಿ ನಿನ್ನೆ ನಡೆದ ಹುಬ್ಳಿ ಟೈಗರ್ಸ್​ ವಿರುದ್ಧದ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್​ ತಂಡ, ನಾಯಕ ಮನಿಶ್ ಪಾಂಡೆಯ ಸ್ಫೋಟಕ ಶತಕದ ಹೊರತಾಗಿಯು ಸೋಲುಂಡಿದೆ. 5 ವಿಕೆಟ್​ಗಳಿಂದ ಗೆದ್ದು ಬೀಗಿದ ಹುಬ್ಳಿ ಗೆಲುವಿನ ಖಾತೆ ತೆರೆದಿದೆ.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಬೆಳಗಾವಿ ಎರಡನೇ ಎಸೆತದಲ್ಲೇ ರವಿಕುಮಾರ್ ವಿಕೆಟ್ ಕಳೆದುಕೊಂಡಿತು. ಸ್ಟಾಲಿನ್ ಹೂವರ್ 19 ಹಾಗೂ ಶುಭಂಗ್ ಹೆಗ್ಡೆ 18 ರನ್ ಗಳಿಸಿ ಔಟ್ ಆದರು. ಬಳಿಕ ಬಂದ ಬ್ಯಾಟ್ಸ್​ಮನ್​ಗಳ ಪೈಕಿ ನಾಯಕ ಮನೀಶ್ ಪಾಂಡೆಯನ್ನು ಹೊರತು ಪಡಿಸಿ ಮತ್ಯಾವ ಆಟಗಾರರು ಉತ್ತಮ ಪ್ರದರ್ಶನ ನೀಡಿಲ್ಲ.

ಒಂದುಕಡೆ ಸರಾಗವಾಗಿ ವಿಕೆಟ್ ಕಳೆದುಕೊಳ್ಳುತ್ತಿದ್ದರೆ ಇತ್ತ ಪಾಂಡೆ ಬೌಂಡರಿ-ಸಿಕ್ಸರ್​ಗಳ ಮಳೆ ಸುರಿಸಿದರು. 50 ಎಸೆತಗಳಲ್ಲಿ 7 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸ್​​ ಸಿಡಿಸಿದ ಪಾಂಡೆ 102 ರನ್ ಚಚ್ಚಿ ಅಜೇಯರಾಗಿ ಉಳಿದರು. ಇವರ ಶತಕದ ನೆರವಿನಿಂದ ಬೆಳಗಾವಿ ತಂಡ 20 ಓವರ್​ಗೆ 7 ವಿಕೆಟ್ ನಷ್ಟಕ್ಕೆ 180 ರನ್ ಕಲೆಹಾಕಿತು.



ಇಂದಿನಿಂದ ಭಾರತ-ವಿಂಡೀಸ್ ಮೊದಲ ಟೆಸ್ಟ್​; ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ಗೆ ಕಾಲಿಡಲಿರುವ ಕೊಹ್ಲಿ ಪಡೆ!

ಈ ಕಠಿಣ ಗುರಿ ಬೆನ್ನಟ್ಟಿದ ಹುಬ್ಳಿ ತಂಡ ಭರ್ಜರಿ ಆರಂಭ ಪಡೆದುಕೊಂಡಿತಾದರು ಬಳಿಕ ದೀಢೀರ್ ಕುಸಿತ ಕಂಡಿತು. ಆದರೆ ಓಪನರ್ ಮೊಹಮ್ಮದ್ ತಾಹ ಅವರು ತಂಡದ ಗೆಲುವಿಗಾಗಿ ಹೋರಾಟ  ನಡೆಸಿದಿರು. 55 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್​ನೊಂದಿಗೆ ತಾಹ 75 ರನ್ ಸಿಡಿಸಿದರು.

ಕೊನೆಯಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದ್ದು ಪ್ರವೀಣ್ ದುಬೆ. 18 ಎಸೆತಗಳಲ್ಲಿ ಅಜೇಯ 33 ರನ್ ಬಾರಿಸಿದ ದುಬೆ ಇನ್ನೊಂದು ಎಸೆತ ಬಾಕಿ ಇರುವಂತೆ ತಂಡಕ್ಕೆ ಗೆಲುವು ತಂದಿಟ್ಟರು. 19.5 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 181 ರನ್ ಕಲೆಹಾಕಿ ಹುಬ್ಳಿ ತಂಡ 5 ವಿಕೆಟ್​ಗಳ ಜಯ ಸಾಧಿಸಿತು.

ಈ ಗೆಲುವಿನೊಂದಿಗೆ ಹುಬ್ಳಿ ತಂಡ ಆಡಿದ ಮೂರು ಪಂದ್ಯಗಳ ಪೈಕಿ ಮೊದಲ ಗೆಲುವು ಸಾಧಿಸಿದೆ. ಸೋತರು ಅತ್ಯುತ್ತಮ ಪ್ರದರ್ಶನ ನೀಡಿದ ಬೆಳಗಾವಿ ತಂಡದ ನಾಯಕ ಮನೀಶ್ ಪಾಂಡೆ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

 

First published: