KPL 2019: ಗೌತಮ್ ಮಿಂಚಿನ ಆಟ; ಎರಡನೇ ಬಾರಿ ಫೈನಲ್​ಗೆ ಎಂಟ್ರಿಕೊಟ್ಟ ಬಳ್ಳಾರಿ

ಈ ಸೋಲಿನಿಂದ ಪ್ಯಾಂಥರ್ಸ್​​ ಹಾದಿ ಕೊನೆಗೊಂಡಿಲ್ಲ. ಈ ಬಾರಿ ಹೊಸದಾಗಿ ಪರಿಚಯಿಸಲಾಗಿರುವ ನಿಯಮದ ಪ್ರಕಾರ ಕ್ವಾಲಿಫೈಯರ್‌-2 ಪಂದ್ಯದ ಮೂಲಕ ಫೈನಲ್​​ಗೇರುವ ಅವಕಾಶ ಹೊಂದಿದೆ.

Vinay Bhat | news18-kannada
Updated:August 29, 2019, 10:42 AM IST
KPL 2019: ಗೌತಮ್ ಮಿಂಚಿನ ಆಟ; ಎರಡನೇ ಬಾರಿ ಫೈನಲ್​ಗೆ ಎಂಟ್ರಿಕೊಟ್ಟ ಬಳ್ಳಾರಿ
ಬಳ್ಳಾರಿ ಟಸ್ಕರ್ಸ್​ ತಂಡ
  • Share this:
ಬೆಂಗಳೂರು (ಆ. 29): ಕರ್ನಾಟಕ ಪ್ರೀಮಿಯರ್ ಲೀಗ್ ಅಂತಿಮ ಹಂತಕ್ಕೆ ಬಂದುತಲುಪಿದೆ. ನಿನ್ನೆ ನಡೆದ ಕ್ವಾಲಿಫೈಯರ್-1 ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್​​ ವಿರುದ್ಧ ಬಳ್ಳಾರಿ ಟಸ್ಕರ್ಸ್​​ ತಂಡ 37 ರನ್​ಗಳ ಭರ್ಜರಿ ಗೆಲುವು ಸಾಧಿಸಿದ್ದು ನೇರವಾಗಿ ಫೈನಲ್​ಗೆ ಲಗ್ಗೆಯಿಟ್ಟಿದೆ. 2016 ರಲ್ಲಿ ಚಾಂಪಿಯನ್ ಆಗಿದ್ದ ಬಳ್ಳಾರಿ ಎರಡನೇ ಬಾರಿ ಟ್ರೋಫಿಗೆ ಮುತ್ತಿಕ್ಕಲು ಸಜ್ಜಾಗಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟಸ್ಕರ್ಸ್​ ತಂಡ ಉತ್ತಮ ಆರಂಭ ಪಡೆದುಕೊಂಡಿಲ್ಲವಾದರು, ನಾಯಕ ಸಿಎಂ ಗೌತಮ್ ಅವರ ಅಮೋಘ ಆಟದ ನೆರವಿನಿಂದ ದೊಡ್ಡ ಮೊತ್ತ ಕಲೆಹಾಕಿತು.

ಕೊನೆಯವರೆಗೆ ಆರ್ಭಟಿಸಿದ ಗೌತಮ್ 63 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್ ಸಿಡಿಸಿ 96 ರನ್​ಗೆ ಔಟ್ ಆದರು. 4 ರನ್​ಗಳಿಂದ ಶತಕ ವಂಚಿತರಾದರು. ಇವರ ಜೊತೆ ಜೀಶನ್ ಸೈಯದ್ 9 ಎಸೆತಗಳಲ್ಲಿ 32 ರನ್ ಸಿಡಿಸಿದ ಪರಿಣಾಮ ಬಳ್ಳಾರಿ 20 ಓವರ್​ಗೆ 7 ವಿಕೆಟ್ ಕಳೆದುಕೊಂಡು 201 ರನ್ ಬಾರಿಸಿತು. ಬೆಳಗಾವಿ ಪರ ಫಾರಿಖ್, ಅವಿನಾಶ್ ತಲಾ 2 ವಿಕೆಟ್ ಕಿತ್ತರೆ, ಸ್ಟಾಲಿನ್ ಹೂವರ್ ಹಾಗೂ ರಿತೇಶ್ ತಲಾ 1 ವಿಕೆಟ್ ಪಡೆದರು.

 


ಈ ಕಠಿಣ ಗುರಿ ಬೆನ್ನಟ್ಟಿದ ಬೆಳಗಾವಿ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗೀತು. ಪ್ರಮುಖ ಪಂದ್ಯದಲ್ಲಿ ಸ್ಟಾರ್ ಬ್ಯಾಟ್ಸ್​ಮನ್​ಗಳು ವೈಫಲ್ಯ ಅನುಭವಿಸಿದರು. ಅಭಿನವ್ ಮನೋಹರ್ 39 ಎಸೆತಗಳಲ್ಲಿ ಅಜೇಯ 69 ರನ್ ಸಿಡಿಸಿ ಗೆಲುವಿಗೆ ಹೋರಾಟ ನಡೆಸಿದರಾದರು ಯಾವುದೇ ಪ್ರಯೋಜನವಾಗಿಲ್ಲ.

MS Dhoni: ದ. ಆಫ್ರಿಕಾ ಟಿ-20 ಸರಣಿಯಿಂದ ಧೋನಿ ಔಟ್; ಯಾಕೆ ಗೊತ್ತಾ..?

ಇವರ ಜೊತೆ ಸ್ಟಾಲಿನ್ 39 ಹಾಗೂ ಅವಿನಾಶ್ 31 ರನ್ ಬಾರಿಸಿದ್ದಷ್ಟೆ ಹೆಚ್ಚು. ಬೆಳಗಾವಿ 20 ಓವರ್​ಗೆ 7 ವಿಕೆಟ್ ಕಳೆದುಕೊಂಡು 164 ರನ್ ಗಳಿಸಲಷ್ಟೆ ಶಕ್ತವಾಯಿತು. 37 ರನ್​ಗಳಿಂದ ಗೆದ್ದು ಬೀಗಿದ ಬಳ್ಳಾರಿ ಫೈನಲ್​ಗೇರಿತು. ಅತ್ಯುತ್ತಮ ಆಟ ಪ್ರದರ್ಶಿಸಿದ ಗೌತಮ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

ಆದರೆ ಈ ಸೋಲಿನಿಂದ ಪ್ಯಾಂಥರ್ಸ್​​ ಹಾದಿ ಕೊನೆಗೊಂಡಿಲ್ಲ. ಈ ಬಾರಿ ಹೊಸದಾಗಿ ಪರಿಚಯಿಸಲಾಗಿರುವ ನಿಯಮದ ಪ್ರಕಾರ ಕ್ವಾಲಿಫೈಯರ್‌-2 ಪಂದ್ಯದ ಮೂಲಕ ಫೈನಲ್​​ಗೇರುವ ಅವಕಾಶ ಹೊಂದಿದೆ.

 ಗುರುವಾರ ಹುಬ್ಬಳ್ಳಿ ಟೈಗರ್ಸ್‌ ಮತ್ತು ಶಿವಮೊಗ್ಗ ಲಯನ್ಸ್‌ ನಡುವಣ ಎಲಿಮಿನೇಟರ್‌ ಪಂದ್ಯ ನಡೆಯಲಿದ್ದು, ಇದರಲ್ಲಿ ಗೆದ್ದ ತಂಡ ಶುಕ್ರವಾರ ಪ್ಯಾಂಥರ್ಸ್‌ ವಿರುದ್ಧ ಆಡಲಿದೆ. ಇದರಲ್ಲಿ ಗೆದ್ದ ತಂಡ  ಫೈನಲ್‌ ಪ್ರವೇಶಿಸಿ ಬೆಳಗಾವಿ ಜೊತೆ ಪ್ರಶಸ್ತಿಗೆ ಮುತ್ತಿಕ್ಕಲು ಹೋರಾಟ ನಡೆಸಲಿದೆ.

First published:August 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading