IPL 2021 | ಚುಟುಕು ಸಮರದಲ್ಲಿ ಇಂದು ಹೈವೋಲ್ಟೇಜ್ ಕದನ : RCB V/S KKR ರೋಚಕ ಪಂದ್ಯದಲ್ಲಿ ಗೆಲ್ಲೋದ್ಯಾರು?

RCB V/S KKR: ಸದ್ಯದ ಪಾಯಿಂಟ್ಸ್ ಟೇಬಲ್ ನಲ್ಲಿ RCB ಮೂರನೇ ಸ್ಥಾನದಲ್ಲಿದ್ದರೆ, ಕೆಕೆಆರ್ ತಂಡ ಏಳನೇ ಸ್ಥಾನದಲ್ಲಿದೆ. ಆರ್ ಸಿಬಿ ಒಟ್ಟು 7 ಪಂದ್ಯಗಳನ್ನಾಡಿದ್ದು, 5 ಪಂದ್ಯದಲ್ಲಿ ಗೆಲುವು ಸಾಧಿಸಿ, 2 ಪಂದ್ಯದಲ್ಲಿ ಸೋಲು ಕಂಡಿತ್ತು. ಇನ್ನು ಕೆಕೆಆರ್ ತಂಡ ಏಳು ಪಂದ್ಯಗಳನ್ನಾಡಿದ್ದು, ಕೇವಲ ಎರಡು ಪಂದ್ಯಗಳಲ್ಲಿ ಅಷ್ಟೇ ಜಯಗಳಿಸಿದೆ.

KKR V/S RCB

KKR V/S RCB

  • Share this:
IPL 2021 RCB V/S KKR: ಇಂಡಿಯಾದ ಕ್ರಿಕೆಟ್ ಜಾತ್ರೆ ನಿನ್ನೆಯಿಂದ ಶುರುವಾಗಿದೆ. ಅರ್ಧಕ್ಕೆ ನಿಂತಿದ್ದ ಐಪಿಎಲ್ 2021 ಯುಎಇನಲ್ಲಿ ಪುನಾರಂಭವಾಗಿದೆ. ನಿನ್ನೆ ನಡೆದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್( MI) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (CSK) ಗೆಲುವು ಸಾಧಿಸಿದ್ದಾರೆ. ಇಂದು ಚುಟುಕು ಸಮರದಲ್ಲಿ ಹೈವೋಲ್ಟೇಜ್ ಕದನ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆಯಲಿದ್ದು, ಭಾರಿ ಕುತೂಹಲ ಮೂಡಿಸಿದೆ. ಎಲ್ಲರ ಚಿತ್ತ ಇದೀಗ ಈ ಪಂದ್ಯದತ್ತ ನೆಟ್ಟಿದೆ. ಯಾಕಂದ್ರೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ RCB ಉತ್ತಮ ಲಯ ಕಂಡುಕೊಂಡಿತ್ತು. ಎಲ್ಲಾ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದರು. ಕೋವಿಡ್ -19 ಕಾರಣದಿಂದಾಗಿ ಮೇ ತಿಂಗಳಲ್ಲಿ ಟೂರ್ನಿಯನ್ನು ಸ್ಥಗಿತಗೊಳಿಸಲಾಗಿತ್ತು. ಈವರೆಗೂ RCB ಹಾಗೂ KKR ಒಟ್ಟು 28 ಬಾರಿ ಮುಖಾಮುಖಿಯಾಗಿದ್ದಾರೆ. 18 ಪಂದ್ಯಗಳಲ್ಲಿ ಕೆಕೆಆರ್ ಜಯಗಳಿಸಿದ್ದು, 13 ಪಂದ್ಯದಲ್ಲಿ ಸೋಲನುಭವಿಸಿದೆ.

ಸದ್ಯದ ಪಾಯಿಂಟ್ಸ್ ಟೇಬಲ್ ನಲ್ಲಿ RCB ಮೂರನೇ ಸ್ಥಾನದಲ್ಲಿದ್ದರೆ, ಕೆಕೆಆರ್ ತಂಡ ಏಳನೇ ಸ್ಥಾನದಲ್ಲಿದೆ. ಆರ್ ಸಿಬಿ ಒಟ್ಟು 7 ಪಂದ್ಯಗಳನ್ನಾಡಿದ್ದು, 5 ಪಂದ್ಯದಲ್ಲಿ ಗೆಲುವು ಸಾಧಿಸಿ, 2 ಪಂದ್ಯದಲ್ಲಿ ಸೋಲು ಕಂಡಿತ್ತು. ಇನ್ನು ಕೆಕೆಆರ್ ತಂಡ ಏಳು ಪಂದ್ಯಗಳನ್ನಾಡಿದ್ದು, ಕೇವಲ ಎರಡು ಪಂದ್ಯಗಳಲ್ಲಿ ಅಷ್ಟೇ ಜಯಗಳಿಸಿದೆ. ಉಳಿದ ಐದು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆರ್ ಸಿಬಿ ತಂಡದಲ್ಲಿ ಐದು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಆರ್ ಸಿಬಿ ತಂಡದಲ್ಲಿ ಘಟಾನುಘಟಿ ದಿಗ್ಗಜರು ಇದ್ದಾರೆ. ಕೆಕೆಆರ್ ತಂಡದಲ್ಲಿ ಶುಭಮನ್ ಗಿಲ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿಯತಂಹ ಯುವ ಆಟಗಾರರಿದ್ದಾರೆ. ಹೀಗಾಗಿ ಇಂದಿನ ಪಂದ್ಯ ಮತ್ತಷ್ಟು ರೋಚಕವಾಗಿರಲಿದೆ.

ಆರ್ ಸಿ ಬಿ ತಂಡದಲ್ಲಿ ನಾಲ್ಕು ಆಟಗಾರರನ್ನು ಕೈಬಿಡಲಾಗಿದೆ. ಆಡಮ್ ಜಂಪಾ (Adam Zampa)  ಬದಲು ವಾನಿಂದು ಹಸರಂಗ ( Wanindu Hasaranga),  ಡೇನಿಯಲ್ ಸ್ಯಾಮ್ಸ್  (Daniel Sams)  ಬದಲು ದುಷ್ಮಂತ ಚಮೀರ (Dushmantha Chameera),  ಕೆನ್ ರಿಚರ್ಡ್ಸನ್ (Ken Richardson)  ಬದಲು ಜಾರ್ಜ್ ಗಾರ್ಟನ್ (George Garton),  ಫಿನ್ ಅಲೆನ್ (Finn Allen)  ಬದಲು ಟಿಮ್ ಡೇವಿಡ್( Tim David) ರನ್ನ ತರಲಾಗಿದೆ. ಕೆಕೆಆರ್ ತಂಡದಲ್ಲೂ ಪ್ರಮುಖ ಆಟಗಾರರಾದ ಪ್ಯಾಟ್ ಕಮಿನ್ಸ್ ( Pat Cummins) ಬದಲು ಟಿಮ್ ಸೌಥಿ (Tim Southee) ಕಣಕ್ಕೆ ಇಳಿಸಲು ರೆಡಿಯಾಗಿದೆ. ಇನ್ನೂ ಇಂದಿನ ಪಂದ್ಯದಲ್ಲಿ ಶ್ರೀಲಂಕಾದ ಆಟಗಾರ ವಾನಿಂದು ಹಸರಂಗ ( Wanindu Hasaranga)ರನ್ನ ಕಣಕ್ಕಿಳಿಸಲು ಆರ್ ಸಿಬಿ ಪ್ಲ್ಯಾನ್ ಮಾಡಿಕೊಂಡಿದೆ. ಬಲಿಷ್ಠರ ಕಾದಾಟದಲ್ಲಿ ಯಾರಿಗೆ ಗೆಲುವು ಸಿಗುತ್ತೆ ಅನ್ನೋದು ಕಾದುನೋಡಬೇಕಿದೆ. ನಿನ್ನೆ ಕೊಹ್ಲಿ ಈ ಐಪಿಎಲ್ ಬಳಿಕ ಆರ್ ಸಿ ಬಿ ತಂಡದ ನಾಯಕ ಸ್ಥಾನ ತ್ಯಜಿಸುವುದಾಗಿ ತಿಳಿಸುವುದಾಗಿ ಘೋಷಿಸಿದ್ದಾರೆ. ಆದರೆ ಐಪಿಎಲ್ ಆಡುವವರೆಗೂ ಆರ್ ಸಿಬಿ ತಂಡದಲ್ಲಿಯೇ ಆಡುತ್ತೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಆರ್ ಸಿಬಿ ಸಂಭಾವ್ಯ ಪ್ಲೇಯಿಂಗ್ XI : ವಿರಾಟ್ ಕೊಹ್ಲಿ
(Virat Kohli) (c), ದೇವದತ್ ಪಡಿಕ್ಕಲ್ (Devdutt Padikkal), ರಜತ್ ಪಾಟಿದಾರ್ (Rajat Patidar),
ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell), ಎಬಿ ಡಿ ವಿಲಿಯರ್ಸ್ (AB de Villiers), ವಾನಿಂದು ಹಸರಂಗ ( Wanindu Hasaranga), ಶಹಬಾಜ್ ಅಹ್ಮದ್ (Shahbaz Ahmed), ಕೈಲ್ ಜೇಮೀಸನ್ (Kyle Jamieson), ಹರ್ಷಲ್ ಪಟೇಲ್ (Harshal Patel), ಮೊಹಮ್ಮದ್ ಸಿರಾಜ್ (Mohammad Siraj), ಯುಜುವೇಂದ್ರ ಚಹಲ್ (Yuzvendra Chaha)

ಇದನ್ನು ಓದಿ ⇒ Virat Kohli ಬಳಿಯಿದ್ದ ಲ್ಯಾಂಬೋರ್ಗಿನಿ ಕಾರು ಸೇಲ್​.. ಆಸಕ್ತರಿಗೆ ಖರೀದಿಸುವ ಅವಕಾಶ!

ಕೆಕೆಆರ್ ಸಂಭಾವ್ಯ ಪ್ಲೇಯಿಂಗ್ XI : ಶುಭಮನ್ ಗಿಲ್( Shubman Gill), ನಿತೀಶ್ ರಾಣಾ (Nitish Rana), ರಾಹುಲ್ ತ್ರಿಪಾಠಿ(Rahul Tripathi), ಇಯಾನ್ ಮಾರ್ಗನ್ (Eoin Morgan) (c), ದಿನೇಶ್ ಕಾರ್ತಿಕ್
(Dinesh Karthik) (wk), ಆಂಡ್ರೆ ರಸೆಲ್( Andre Russell),‌ ಶಕಿಬ್ ಅಲ್ ಹಸನ್ (Shakib al Hasan),
ವರುಣ್ ಚಕ್ರವರ್ತಿ (Varun Chakravarthy), ಪ್ರಸಿದ್ಧ್ ಕೃಷ್ಣ (Prasidh Krishna), ಟಿಮ್ ಸೌಥಿ (Tim Southee), ಸಂದೀಪ್ ವಾರಿಯರ್ (Sandeep Warrier)

ವರದಿ: ವಾಸುದೇವ್
Published by:Harshith AS
First published: