ಎಬಿಡಿ ನಿವೃತ್ತಿ ವಿವಾದ: ಡಿವಿಲಿಯರ್ಸ್​ ಪರ ನಿಂತ ವಿರಾಟ್ ಕೊಹ್ಲಿ-ಯುವರಾಜ್ ಸಿಂಗ್

AB de Villiers: ಕ್ರಿಕೆಟ್ ಜಗತ್ತಿನ ದಂತಕತೆ ಮತ್ತು ನನ್ನ ಪ್ರೀತಿಯ ಗೆಳೆಯ, ನೀನೊಬ್ಬ ಅತ್ಯುತ್ತಮ ವ್ಯಕ್ತಿ. ಕ್ರಿಕೆಟ್‌ ಜಗತ್ತಿನಲ್ಲಿ ನೀನು ರತ್ನವಿದ್ದಂತೆ. ನೀನು ಇಲ್ಲದ ದಕ್ಷಿಣ ಆಫ್ರಿಕಾ ತಂಡ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ. ನಿನ್ನನ್ನು ತಂಡದಲ್ಲಿ ಪರಿಗಣಿಸದಿರುವುದರಿಂದ ಈ ಬಾರಿಯ ಸೋಲು ನಿನ್ನ ಸೋಲಲ್ಲ.

zahir | news18
Updated:July 13, 2019, 5:33 PM IST
ಎಬಿಡಿ ನಿವೃತ್ತಿ ವಿವಾದ: ಡಿವಿಲಿಯರ್ಸ್​ ಪರ ನಿಂತ ವಿರಾಟ್ ಕೊಹ್ಲಿ-ಯುವರಾಜ್ ಸಿಂಗ್
ವಿರಾಟ್ ಕೊಹ್ಲಿ-ಎಬಿಡಿ
zahir | news18
Updated: July 13, 2019, 5:33 PM IST
2018 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ದ ದಕ್ಷಿಣ ಆಫ್ರಿಕಾದ ಸ್ಪೋಟಕ ದಾಂಡಿಗ ಎಬಿ ಡಿವಿಲಿಯರ್ಸ್​ ವಿಶ್ವಕಪ್ ಆರಂಭಕ್ಕೂ ಮುನ್ನ ತಂಡಕ್ಕೆ ವಾಪಾಸಾಗುವುದಾಗಿ ತಿಳಿಸಿದ್ದರು. ಈ ವಿಚಾರಕ್ಕೆ ಹಲವರು ಎಬಿಡಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ ಪ್ರತಿಷ್ಠಿತ ಟೂರ್ನಿ ಆರಂಭಕ್ಕೆ ಮುನ್ನ ನಿರ್ಧಾರ ಪ್ರಕಟಿಸಿದ ಡಿವಿಲಿಯರ್ಸ್ ಬಗ್ಗೆ ದಿಗ್ಗಜರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ವಿಶ್ವಕಪ್​ ಟೂರ್ನಿಯಿಂದ ಸೌತ್ ಆಫ್ರಿಕಾ ತಂಡ ಹೊರ ಬಿದ್ದಿದೆ.

ಇದರ ಬೆನ್ನಲ್ಲೇ ಡಿವಿಲಿಯರ್ಸ್ ತಮ್ಮ ಆಯ್ಕೆ ವಿವಾದದ ಬಗ್ಗೆ ಮತ್ತೊಮ್ಮೆ ಮನಬಿಚ್ಚಿ ಮಾತನಾಡಿದ್ದಾರೆ. 'ನಾನು ಈ ಹಿಂದೆ ಹೇಳಿದ ಮಾತಿಗೆ ಸ್ಪಷ್ಟನೆ ಹಿಂದೆಯೇ ತಿಳಿಸುತ್ತಿದ್ದೆ. ಆದರೆ ವಿಶ್ವಕಪ್ ವೇಳೆ ತಂಡದ ಪ್ರದರ್ಶನಕ್ಕೆ ತೊಂದರೆಯಾಗಬಾರದು ಎಂದು ಸುಮ್ಮನಾಗಿದ್ದೆ. ನನ್ನ ಹೆಂಡತಿ ಹಾಗೂ ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವ ದೃಷ್ಟಿಯಿಂದ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದೆ. ಹಾಗೆಯೇ ವಿಶ್ವಕಪ್ ವೇಳೆ ತಂಡಕ್ಕೆ ನನ್ನ ಅಗತ್ಯ ಇರಬಹುದೆಂದು ಭಾವಿಸಿ ನನ್ನ ನಿರ್ಧಾರ ತಿಳಿಸಿದ್ದೆ. ಇದರ ಹಿಂದೆ ಬೇರೆ ಯಾವುದೇ ದುರಾಸೆ ಇರಲಿಲ್ಲ. ಹಾಗೆಯೇ ಯಾವುದೇ ಒತ್ತಾಯಕ್ಕೆ ಮಣಿದು ತಂಡಕ್ಕೆ ಮರಳುವ ಅಥವಾ ನನ್ನಿಂದಲೇ ಗೆಲ್ಲಲಿದೆ ಎಂಬ ಭಾವನೆ ನನ್ನಲಿರಲಿಲ್ಲ. ತಂಡಕ್ಕೆ ಅಗತ್ಯತೆ ಇದ್ದರೆ ಮತ್ತೆ ಸೇರ್ಪಡೆಯಾಗಲು ಸಿದ್ಧ ಎಂದು ತಿಳಿಸುವುದಾಗಿತ್ತು ನನ್ನ ಉದ್ದೇಶ ಎಂದು ಡಿವಿಲಿಯರ್ಸ್​ ಶುಕ್ರವಾರ ಸ್ಪಷ್ಣನೆ ನೀಡಿದ್ದರು.ಡಿವಿಲಿಯರ್ಸ್​​ ಅವರ ಈ ಮನದಾಳದ ಮಾತುಗಳಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಯುವರಾಜ್ ಸಿಂಗ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕೊಹ್ಲಿ, 'ಸಹೋದರ, ನನಗೆ ತಿಳಿದಿರುವಂತೆ ಅತ್ಯಂತ ಪ್ರಾಮಾಣಿಕ ಹಾಗೂ ಬದ್ಧ ವ್ಯಕ್ತಿ ನೀವು. ನಿಮಗೆ ಹೀಗಾಗಿರುವುದು ದುರದೃಷ್ಟಕರ. ಆದರೆ ನಾವು ಎಂದಿಗೂ ನಿಮ್ಮ ಜೊತೆಗಿದ್ದೇವೆ. ನಮಗೆ ನಿಮ್ಮಲ್ಲಿ ನಂಬಿಕೆಯಿದೆ. ನಿಮ್ಮ ವೈಯುಕ್ತಿಕ ಬದುಕಲ್ಲಿ ಕೆಲವರು ಹಸ್ತಕ್ಷೇಪ ಮಾಡುತ್ತಿರುವುದು ನೋಡಲು ಬೇಸರವಾಗುತ್ತಿದೆ. ನಿಮ್ಮ ಕುಟುಂಬಕ್ಕೆ ಮತ್ತಷ್ಟು ಪ್ರೀತಿ ಹಾಗೂ ಶಕ್ತಿಯನ್ನು ತುಂಬುತ್ತೇವೆ. ನಾನು ಹಾಗೂ ಪತ್ನಿ ಅನುಷ್ಕಾ ಯಾವತ್ತಿಗೂ ನಿಮ್ಮ ಜೊತೆಗಿದ್ದೇವೆ' ಎಂದು ಟ್ವಿಟರ್‌ನಲ್ಲಿ ಕೊಹ್ಲಿ ತಿಳಿಸಿದ್ದಾರೆ.ಇನ್ನೊಂದೆಡೆ ಯುವರಾಜ್ ಸಿಂಗ್ ಬೆಂಬಲಿಸಿದ್ದು, 'ಕ್ರಿಕೆಟ್ ಜಗತ್ತಿನ ದಂತಕತೆ ಮತ್ತು ನನ್ನ ಪ್ರೀತಿಯ ಗೆಳೆಯ, ನೀನೊಬ್ಬ ಅತ್ಯುತ್ತಮ ವ್ಯಕ್ತಿ. ಕ್ರಿಕೆಟ್‌ ಜಗತ್ತಿನಲ್ಲಿ ನೀನು ರತ್ನವಿದ್ದಂತೆ. ನೀನು ಇಲ್ಲದ ದಕ್ಷಿಣ ಆಫ್ರಿಕಾ ತಂಡ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ. ನಿನ್ನನ್ನು ತಂಡದಲ್ಲಿ ಪರಿಗಣಿಸದಿರುವುದರಿಂದ ಈ ಬಾರಿಯ ಸೋಲು ನಿನ್ನ ಸೋಲಲ್ಲ. ಬದಲಾಗಿ ಅದು ನಿನ್ನ ದೇಶದ ಸೋಲು' ಎಂದು ಟ್ವೀಟ್ ಮಾಡಿದ್ದಾರೆ.

ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಕೊಹ್ಲಿ ಹಾಗೂ ಹಳೆಯ ಆರ್​ಸಿಬಿ ಟೀಮ್​ಮೇಟ್ ಯುವರಾಜ್ ಸಿಂಗ್ ಡಿವಿಲಿಯರ್ಸ್ ಪರ ನಿಂತಿದ್ದಾರೆ.
First published:July 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...