ಸೌತಂಪ್ಟನ್ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಫೋಟೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ನ್ಯೂಜಿಲೆಂಡ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಸೆರೆ ಹಿಡಿಯಲಾಗಿರುವ ಈ ಫೋಟೋದಲ್ಲಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಹಾವಭಾವ ಇದೀಗ ಚರ್ಚೆಗೆ ಕಾರಣವಾಗಿದೆ.
ಏಕೆಂದರೆ ಈ ಫೋಟೋದಲ್ಲಿ ಇಬ್ಬರು ಕ್ರಿಕೆಟಿಗರ ಮುಖಭಾವ ತದ್ವಿರುದ್ದವಾಗಿದ್ದು, ಇವರಿಬ್ಬರಲ್ಲಿ ಯಾರು ಉತ್ತಮ ನಾಯಕ ಎಂಬುದಕ್ಕೆ ಈ ಫೋಟೋವೇ ಸಾಕ್ಷಿ ಎನ್ನಲಾಗುತ್ತಿದೆ. ಅಸಲಿಗೆ ಈ ಫೋಟೋ ಹಿಂದಿರುವ ಸತ್ಯವೇನು ಎಂದು ಹುಡುಕಾಡಿದರೆ ಇಂಟ್ರೆಸ್ಟಿಂಗ್ ವಿಡಿಯೋ ಒಂದು ಕಾಣ ಸಿಗುತ್ತೆ. ಹೌದು, ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡಿ ಎಲ್ಬಿಡಬ್ಲ್ಯೂಗೆ ಮನವಿ ಸಲ್ಲಿಸಿದ್ದರು. ಆದರೆ ಈ ಮನವಿಯನ್ನು ಅಂಪೈರ್ ನಿರಾಕರಿಸಿದರು. ಇದರಿಂದ ಬುಮ್ರಾ ಸ್ಲಿಪ್ನಲ್ಲಿದ್ದ ಕೊಹ್ಲಿಯತ್ತ ನೋಡಿದ್ದರು.
ಅತ್ತ ಅಂಪೈರ್ ನಾಟೌಟ್ ಎನ್ನುತ್ತಿದ್ದಂತೆ ಸ್ಲಿಪ್ನಲ್ಲಿದ್ದ ರೋಹಿತ್ ಶರ್ಮಾ ಬುಮ್ರಾ ಅವರನ್ನು ಹುರಿದುಂಬಿಸಿದರು. ಡಿಆರ್ಎಸ್ ಮನವಿಗಾಗಿ ತನ್ನತ್ತ ನೋಡಿದ್ದ ಬುಮ್ರಾಗೆ ಕೊಹ್ಲಿ ಬ್ಯಾಟ್ ಬದಿ ಭಾಗಕ್ಕೆ ಚೆಂಡು ತಗುಲಿದೆ ಎಂದು ನಿರಾಶಭಾವದಿಂದ ಸನ್ನೆ ಮಾಡಿ ತಿಳಿಸಿದ್ದರು. ಇದೇ ವೇಳೆ ಕ್ಯಾಮೆರಾಮೆನ್ ಕೂಡ ಫೋಟೋ ಕ್ಲಿಕ್ಕಿಸಿದ್ದಾರೆ.
Rohit @ImRo45 For You 👑 pic.twitter.com/IyCNrSg3w8
— Royce 🎭 (@Elegance__45) June 20, 2021
ವಿಡಿಯೋ ವೀಕ್ಷಿಸಿದರೆ ಕೊಹ್ಲಿ ಬುಮ್ರಾ ವಿರುದ್ದ ನಿರಾಸೆ ವ್ಯಕ್ತಪಡಿಸಿರಲಿಲ್ಲ, ಬದಲಾಗಿ ಬ್ಯಾಟ್ಗೆ ಬಾಲ್ಗೆ ಎಡ್ಜ್ ಆದ ಕಾರಣ ನಿರಾಸೆಯಿಂದ ತಿಳಿಸಿದ್ದರು ಎಂಬುದು ಸ್ಪಷ್ಟವಾಗುತ್ತೆ.
This is what actually happened 😅 pic.twitter.com/t48PjSC5II
— msc media (@mscmedia2) June 21, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ