ಲಾಕ್​​ಡೌನ್​ ವೇಳೆ ಕೊಹ್ಲಿ ಇನ್​​​ಸ್ಟಾದಲ್ಲಿ ಎಷ್ಟು ಆದಾಯ ಗಳಿಸುತ್ತಿದ್ದಾರೆ ಗೊತ್ತಾ?

Virat Kohli: ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಕೂಡ ಟಾಪ್​​ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು. ಲಾಕ್​ಡೌನ್​ ಸಮಯದಲ್ಲಿ ಹೆಚ್ಚು ಆದಾಯ ಗಳಿಸುತ್ತಿರುವ ಟೀಂ ಇಂಡಿಯಾದ ಏಕೈಕ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

news18-kannada
Updated:June 6, 2020, 8:19 AM IST
ಲಾಕ್​​ಡೌನ್​ ವೇಳೆ ಕೊಹ್ಲಿ ಇನ್​​​ಸ್ಟಾದಲ್ಲಿ ಎಷ್ಟು ಆದಾಯ ಗಳಿಸುತ್ತಿದ್ದಾರೆ ಗೊತ್ತಾ?
ವಿರಾಟ್​ ಕೊಹ್ಲಿ
  • Share this:
ಲಾಕ್​ಡೌನ್​ ವೇಳೆ ಇನ್​​ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಅದಾಯಗಳಿಸಿರುವ ಟಾಪ್​ 10 ಸೆಲೆಬ್ರಿಟಿಗಳ ಪಟ್ಟಿ ಹೊರಬಿದ್ದಿವೆ. ಪೋರ್ಚುಗೀಸ್​​ ಪುಟ್ಭಾಲ್​ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಇನ್​​​ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಆದಾಯವನ್ನು ಗಳಿಸುವ ಮೂಲಕ ಅಗ್ರಸ್ಥಾನ ಕಾಯ್ದಿರಿಸಿಕೊಂಡಿದ್ದಾರೆ.

ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಕೂಡ ಟಾಪ್​​ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು. ಲಾಕ್​ಡೌನ್​ ಸಮಯದಲ್ಲಿ ಹೆಚ್ಚು ಆದಾಯ ಗಳಿಸುತ್ತಿರುವ ಟೀಂ ಇಂಡಿಯಾದ ಏಕೈಕ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಾರ್ಚ್​ 12 ರಿಂದ ಮೇ 14ರ ವರೆಗಿನ ಲಾಕ್​​ಡೌನ್​​  ಅವಧಿಯಲ್ಲಿ ಮ್ಯಾನೆಜ್​ಮೆಂಟ್​​ ಕನ್ಸಲ್ಟಿಂಗ್​ ಕಂಪನಿ ಅಂಕಿ ಅಂಶಗಳ ಆಧಾರದಲ್ಲಿ ಇನ್​​​ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಆದಾಯ ಗಳಿಸುತ್ತಿರುವ ಸೆಲೆಬ್ರಿಟಿಗಳನ್ನು ಪಟ್ಟಿ ಮಾಡಿತ್ತು. ಇದರಲ್ಲಿ ಟೀಂ ಇಂಡಿಯಾದ ವಿರಾಟ್​​ ಕೊಹ್ಲಿ ಕೂಡ ಲಾಕ್​​​ಡೌನ್​ ವೇಳೆ ಅತಿ ಹೆಚ್ಚು ಆದಾಯಗಳಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕೊಹ್ಲಿ ಪ್ರಾಯೋಜಿತ ಪೋಸ್ಟ್​​ಗಳ ಮೂಲಕ 379,294 ಪೌಂಡ್​​ (3.6 ಕೋಟಿ) ಗಳಿಸಿದ್ದು, ಟಾಪ್​​ 10 ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. ಲಾಕ್​​​ಡೌನ್​​ ಕೊಹ್ಲಿ ಮೂರು ಪೋಸ್ಟ್​ ಶೇರ್​​​ ಮಾಡಿದ್ದಾರೆ. ಪ್ರತಿ ಫೋಟೋಗೆ 126,431 ಪೌಂಡ್​​ ಪಡೆದುಕೊಂಡಿದ್ದಾರೆ.

ಕ್ರಿಸ್ಟಿಯಾನೊ ರೊನಾಲ್ಡೊ ಅವರು ಇನ್​​ಸ್ಟಾಗ್ರಾಂನಲ್ಲಿ ತಮ್ಮ ಪೋಸ್ಟರ್​ಗಳಿಗೆ 1.8 ಮಿಲಿಯನ್​​ ಪೌಂಡ್​​ (17.9)ಗಳಿಕೆಯೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ಬದಲಾಗು ನೀನು…. ಬದಲಾಯಿಸು ನೀನು ಹಾಡು ಬಿಡುಗಡೆ; ಕನ್ನಡಿಗರಿಂದ ಭಾರೀ ಮೆಚ್ಚುಗೆ

ಒಂದೇ IMEI ಸಂಖ್ಯೆಯಲ್ಲಿ 13,500 ಸ್ಮಾರ್ಟ್​ಫೋನ್​​​ ಉತ್ಪಾದಿಸಿದ ವಿವೋ; ಪ್ರಕರಣ ದಾಖಲು
First published: June 6, 2020, 8:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading