ಧೋನಿ ತವರಿನಲ್ಲಿ ಮೂರನೇ ಏಕದಿನ; ಸರಣಿ ವಶಪಡಿಸಿಕೊಳ್ಳುವ ವಿಶ್ವಾಸದಲ್ಲಿ ಕೊಹ್ಲಿ ಪಡೆ

ಎಂಎಸ್ ಧೋನಿ ತವರಿನ ತಂಡ ರಾಂಚಿಯ ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದು, ಧೋನಿ ಆಟ ನೋಡಲು ಅಭಿಮಾನಿಗಳು ಉತ್ಸಾಹದಲ್ಲಿದ್ದಾರೆ.

ಟೀಂ ಇಂಡಿಯಾ

ಟೀಂ ಇಂಡಿಯಾ

  • News18
  • Last Updated :
  • Share this:
ರಾಂಚಿ: ಮೊದಲೆರಡು ಏಕದಿನ ಪಂದ್ಯದಲ್ಲಿ ಗೆದ್ದು ಬೀಗಿರುವ ಕೊಹ್ಲಿ ಪಡೆ ಈಗ ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನಕ್ಕೆಸಜ್ಜಾಗಿದೆ. ಕಾಂಗರೂಗಳ ಪಾಲಿಗೆ ಇದು ಗೆಲ್ಲಲೇ ಬೇಕಾಗಿವಿರುವ ಪಂದ್ಯವಾಗಿದ್ದರೆ, ಇತ್ತ ಭಾರತ ಸರಣಿ ಕೈವಶ ಮಾಡಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ.

ಎಂಎಸ್ ಧೋನಿ ತವರಿನ ತಂಡ ರಾಂಚಿಯ ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದು, ಧೋನಿ ಆಟ ನೋಡಲು ಅಭಿಮಾನಿಗಳು ಉತ್ಸಾಹದಲ್ಲಿದ್ದಾರೆ.

ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಪರ ಬ್ಯಾಟಿಂಗ್​​ನಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ವಿಜಯ್ ಶಂಕರ್ ಹೊರತು ಪಡಿಸಿದರೆ, ಉಳಿದ ಬ್ಯಾಟ್ಸ್​ಮನ್​​ಗಳು ಸಂಪೂರ್ಣ ವಿಫಲರಾಗಿದ್ದರು. ಮೊದಲ ಪಂದ್ಯದ ಗೆಲುವಿನ ರೂವಾರಿ ಎಂಎಸ್ ಧೋನಿ ಹಾಗೂ ಕೇದರ್ ಜಾಧವ್ ಕೂಡ ಬೇಗನೆ ಔಟ್ ಆಗಿ ನಿರಾಸೆ ಮೂಡಿಸಿದ್ದರು. ಹೀಗಾಗಿ ಈ ಪಂದ್ಯದಲ್ಲಿ ತಮ್ಮ ಖದರ್ ತೋರ್ಪಡಿಸಬೇಕಿದೆ. ಇದರ ಜೊತೆಗೆ ಭಾರತದ ಬ್ಯಾಟಿಂಗ್ ಆರ್ಡರ್​​ನಲ್ಲಿ ಒಂದಿಷ್ಟು ಬದಲಾವಣೆ ಬೇಕಾಗಿದೆ. ಅಲ್ಲದೆ ಈಗಾಗಲೇ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವುದರಿಂದ ಬೆಂಚ್ ಕಾದಿದ್ದ ಆಟಗಾರರನ್ನು ಕಣಕ್ಕಿಳಿಸಬೇಕಿದೆ.

ಈದನ್ನೂ ಓದಿ: ಗುತ್ತಿಗೆದಾರನ 3ನೇ ಹೆಂಡತಿಯನ್ನ ಹತ್ಯೆಗೈದ 2ನೇ ಹೆಂಡತಿ; ಕೊಲೆಗೆ ಮೊದಲ ಪತ್ನಿಯ 2 ಪುತ್ರಿಯರು, ಒಬ್ಬ ಯುವಕ ಸಹಾಯ!

ವಿಶ್ವಕಪ್​​ಗೂ ಮುನ್ನ ಭಾರತಕ್ಕಿದು ಕೊನೆಯ ಏಕದಿನ ಸರಣಿ. ಹೀಗಿರುವಾಗ, ಟೀಂ ಇಂಡಿಯಾಕ್ಕೆ ಓಪನಿಂಗ್ ದೊಡ್ಡ ಸಮಸ್ಯೆಯಾಗೇ ಉಳಿದಿದೆ. ಗಬ್ಬರ್ ಖ್ಯಾತಿಯ ಶಿಖರ್​ ಧವನ್​ ಅಬ್ಬರಿಸೋದನ್ನೇ ಮರೆತು ಬಿಟ್ಟಿದ್ದಾರೆ. ಆಡಿದ ಎರಡೂ ಪಂದ್ಯಗಳಲ್ಲಿ ಧವನ್ ಬ್ಯಾಟ್​​ನಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬಂದಿಲ್ಲ. ಹೀಗಾಗಿ ಧವನ್ ಬದಲು ಕೆ ಎಲ್ ರಾಹುಲ್​ಗೆ ಅವಕಾಶ ನೀಡಬೇಕಿದೆ. ಈಗಷ್ಟೆ ಫಾರ್ಮ್​ಗೆ ಮರಳಿರುವ ರಾಹುಲ್​​ಗೆ ಇನ್ನಷ್ಟು ಅವಕಾಶ ನೀಡಿದರೆ, ವಿಶ್ವಕಪ್​​ಗೆ ಸೆಟ್ ಆಗಬಹುದು.

ಅಂತೆಯೆ ಅಂಬಟಿ ರಾಯುಡು ಆಡಿದ ಎರಡು ಪಂದ್ಯಗಳಲ್ಲಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿಲ್ಲ. ಮೊದಲ ಪಂದ್ಯದಲ್ಲಿ 13 ಹಾಗೂ ಎರಡನೇ ಪಂದ್ಯದಲ್ಲಿ 18 ರನ್ ಗಳಿಸಿದ್ದಾರಷ್ಟೆ. ಹೀಗಾಗಿ ರಾಯುಡು ಬದಲು ರಿಷಭ್ ಪಂತ್​ಗೆ ಅವಕಾಶ ನೀಡಬೇಕು.

ಇನ್ನು ಮೊದಲ ಎರಡು ಏಕದಿನ ಪಂದ್ಯಕ್ಕೆ ಭುವನೇಶ್ವರ್ ಕುಮಾರ್​​ಗೆ ವಿಶ್ರಾಂತಿ ನೀಡಲಾಗಿತ್ತು. ಸದ್ಯ ಉಳಿದಿರುವ ಮೂರು ಪಂದ್ಯದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಭುವಿ, ಮೊಹಮ್ಮದ್ ಶಮಿ ಜಾಗದಲ್ಲಿ ಆಡಬೇಕಿದೆ. ಭುವನೇಶ್ವರ್​​ರ ಸ್ವಿಂಗ್ ಬಾಲ್ ಹೆಚ್ಚು ಉಪಯುಕ್ತವಾಗಲಿದ್ದು, ವಿಶ್ವಕಪ್ ದೃಷ್ಟಿಯಿಂದ ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯಬೇಕಿದೆ.

ಒಟ್ಟಾರೆ ನಾಳಿನ ಪಂದ್ಯದಲ್ಲಿ ಗೆದ್ದು ಸರಣಿ ವಶ ಮಾಡಿಕೊಳ್ಳುವ ವಿಶ್ವಾಸದಲ್ಲಿ ಟೀಂ ಇಂಡಿಯಾ ಇದ್ದರೆ, ಇತ್ತ ಕಮ್​​ಬ್ಯಾಕ್ ಮಾಡಿ ಭಾರತಕ್ಕೆ ತಿರುಗೇಟು ನೀಡುವ ಅಂದಾಜಿನಲ್ಲಿದೆ ಫಿಂಚ್ ಪಡೆ.

First published: