ಎರಡು ವರ್ಷದಿಂದ ಒಂದು ಶತಕವನ್ನು ಭಾರಿಸದ ಕೊಯ್ಲಿ; ಫಾರ್ಮ್​ ಕಳೆದುಕೊಂಡ ವಿರಾಟ್​?

ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 27 ಶತಕಗಳನ್ನು ಬಾರಿಸಿದ್ದಾರೆ, ಆದರೆ ಅವರು 2019 ರ ನವೆಂಬರ್ ನಿಂದ ಒಂದು ಶತಕವನ್ನು ಗಳಿಸಿಲ್ಲ. ನವೆಂಬರ್ 2019 ರಿಂದ, ಅವರು ಆಡಿದ 15 ಇನ್ನಿಂಗ್ಸ್ ಗಳಲ್ಲಿ 345 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಅವರ ಸರಾಸರಿ 23.00 ಆಗಿದೆ.

 • Share this:
  ವಿರಾಟ್ ಕೊಹ್ಲಿ ಪ್ರಸ್ತುತ ಕ್ರಿಕೆಟ್​ನಲ್ಲಿ  ಫಾರ್ಮ್‌ ಕಂಡುಕೊಳ್ಳಲು ಪರದಾಡುತ್ತಿದ್ದು ವೈಫಲ್ಯತೆಯನ್ನು ಎದುರಿಸುತ್ತಿದ್ದಾರೆ,  ಭಾರತ ತಂಡದ ನಾಯಕ ಶತಕ ಭಾರಿಸದೆ ಎರಡು ವರ್ಷಗಳಿಗಿಂತಲೂ ಹೆಚ್ಚು ಕಾಲವಾಗಿದೆ ಎಂಬುದು ಕ್ರಿಕೆಟ್​ ಪಂಡಿತರ ಅಂಬೋಣ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ, ಜೇಮ್ಸ್ ಆಂಡರ್ಸನ್ ಎಸೆದ ಮೊದಲ ಬಾಲ್ ನಲ್ಲಿಯೇ ವಿರಾಟ್​ ಕೊಹ್ಲಿ ಪೆವಿಲಿಯನ್​ ದಾರಿ ಹಿಡಿದಿದ್ದರು,  ಇದು ಕ್ರಿಕೆಟ್​ ಅಭಿಮಾನಿಗಳ ಕಣ್ಣಿನಲ್ಲಿ,  ಮನಸ್ಸಿನಲ್ಲಿ ಸಾಕಷ್ಟು  ಅನುಮಾನಗಳನ್ನು ಹುಟ್ಟುಹಾಕಿತ್ತು.

  ಈಗ, ಪಂದ್ಯ ಲಾರ್ಡ್ಸ್‌ಗೆ ಶಿಫ್ಟ್ ಆಗಿದ್ದರಿಂದ ಭಾರತೀಯ ನಾಯಕ ಫಾರ್ಮ್​ ಕಂಡಕೊಳ್ಳುತ್ತಾನೆಯೇ ಕಾದು ನೋಡಬೇಕಿದೆ. ಈ ಮೈದಾನದ ಇತಿಹಾಸವನ್ನು ಒಮ್ಮೆ ತಿರುವಿ ಹಾಕಿದರೆ, ಮೈದಾನವು   ಸುನಿಲ್ ಗವಾಸ್ಕರ್‌ ಮತ್ತು ಹಿಡಿದು ಸಚಿನ್ ತೆಂಡೂಲ್ಕರ್‌ ಅವರಂತಹ ಶ್ರೇಷ್ಟ  ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ದಯೆ ತೋರಿಲ್ಲ ಇನ್ನು ಹೊಸಬರ ಪಾಲಿಗೆ ಕಠಿಣ ಹಾದಿ ಎಂದು ಹೇಳಲಾಗುತ್ತಿದೆ.

  ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 27 ಶತಕಗಳನ್ನು ಬಾರಿಸಿದ್ದಾರೆ, ಆದರೆ ಅವರು 2019 ರ ನವೆಂಬರ್ ನಿಂದ ಒಂದು ಶತಕವನ್ನು ಗಳಿಸಿಲ್ಲ. ನವೆಂಬರ್ 2019 ರಿಂದ, ಅವರು ಆಡಿದ 15 ಇನ್ನಿಂಗ್ಸ್ ಗಳಲ್ಲಿ 345 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಅವರ ಸರಾಸರಿ 23.00 ಆಗಿದೆ.

  ಲಾರ್ಡ್ಸ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ಭಾರತವು ಇಂಗ್ಲೆಂಡ್‌ನ್ನು ಎದುರಿಸಲಿದೆ ಮತ್ತು ಈ ಮೈದಾನದಲ್ಲಿ, ಸುನಿಲ್ ಗವಾಸ್ಕರ್ 10 ಇನ್ನಿಂಗ್ಸ್‌ಗಳಲ್ಲಿ 340 ರನ್ ಗಳಿಸಿದ್ದಾರೆ, ಇದರಲ್ಲಿ ಎರಡು ಅರ್ಧ ಶತಕಗಳು ಸೇರಿವೆ, ಆದರೆ ಸಚಿನ್ ತೆಂಡೂಲ್ಕರ್ ಅವರು ಆಡಿದ 9 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಈ ಮೈದಾನದಲ್ಲಿ ಒಂದೇ ಒಂದು ಅರ್ಧಶತಕ ಗಳಿಸಲಿಲ್ಲ.

  ವಿರಾಟ್ ಕೊಹ್ಲಿ ತನ್ನ ಮನಸ್ಸು ಮಾಡಿದರೆ ಈ ದಾಖಲೆಗಳನ್ನು ಪುಡಿಯಾಗಿಸಬಹುದು. ವಿಷಯಗಳ ಪ್ರಕಾರ, ಕೊಹ್ಲಿ 65 ರನ್ ಗಳಿಸಿದ್ದಾರೆ ಮತ್ತು ಅವರ ಗರಿಷ್ಠ ಸ್ಕೋರ್ ಇದುವರೆಗು ಲಾರ್ಡ್ಸ್‌ನಲ್ಲಿ ದಾಖಲಾಗಿರುವುದು ಕೇವಲ 25 ರನ್ ಮಾತ್ರ. ಭಾರತ ಸವಾಲಿನ ಮೊದಲ ಇನ್ನಿಂಗ್ಸ್ ಮೊತ್ತವನ್ನು ತಲುಪಬೇಕಾದರೆ ವಿರಾಟ್​ ಕೊಹ್ಲಿ ಅತ್ಯಂತ ಪ್ರಮುಖ ನಿರ್ಧಾರ ತೆಗೆದುಕೊಂಡು ಹೆಜ್ಜೆ ಹಾಕಬೇಕಿದೆ.
  ಒತ್ತಡದಲ್ಲಿ ಉತ್ತಮ ಆಟಗಾರ ಪೂಜಾರ

  ಭಾರತ ತಂಡದ ಆಟಗಾರರ ಮಧ್ಯಮ ಕ್ರಮಾಂಕವು ಇತ್ತೀಚಿನ ದಿನಗಳಲ್ಲಿ ಬಹಳ ಅಸಮಂಜಸವಾಗಿದೆ. ಪೂಜಾರ ಕಳೆದ 32 ಇನ್ನಿಂಗ್ಸ್‌ಗಳಲ್ಲಿ ಒಂದೇ ಒಂದು ಟೆಸ್ಟ್ ಶತಕ ಗಳಿಸಿಲ್ಲ, ಅಲ್ಲಿ ಅವರು 27.64 ಸರಾಸರಿಯಲ್ಲಿ 857 ರನ್ ಗಳಿಸಿದ್ದಾರೆ. ಲಾರ್ಡ್ಸ್‌ನಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಅವರು ನಾಲ್ಕು ಇನ್ನಿಂಗ್ಸ್‌ಗಳಲ್ಲಿ 89 ರನ್ ಗಳಿಸಿರುವುದೇ ಉತ್ತಮ ಸಾಧನೆಯಂತೆ ತೋರುತ್ತಿದೆ.
  ಪಂದ್ಯ ಗೆಲ್ಲಿಸಿಕೊಟ್ಟಿದ್ದ ಅಜಿಂಕ್ಯ ರಹಾನೆ

  ಅಜಿಂಕ್ಯ ರಹಾನೆ 2014 ರಲ್ಲಿ ಲಾರ್ಡ್ಸ್‌ನಲ್ಲಿ ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ 103 ರ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದರು, ಇದು ತಂಡಕ್ಕೆ ಅದ್ಭುತವಾದ 95 ರನ್ ಜಯವನ್ನು ದಾಖಲಿಸಲು ಸಹಾಯ ಮಾಡಿತ್ತು ಮತ್ತುಈಗ ಎರಡನೇ ಟೆಸ್ಟ್‌ನಲ್ಲಿ ಅವರು ಕೂಡ ಉತ್ತಮವಾಗಿ ಆಟವಾಡಿ ಗೆಲುವಿನ ದಡವನ್ನು ಮುಟ್ಟಿಸಬೇಕಿದೆ. ಒಟ್ಟಿನಲ್ಲಿ ಕ್ರಿಕೆಟ್​ ಕಾಶಿಯಲ್ಲಿ ಭಾರತೀಯ ತಂಟ ಮುಗ್ಗರಿಸದೆ ಗೆದ್ದು ಬರಲಿ ಎಂಬುದು ಎಲ್ಲರ ಹಾರೈಕೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: