• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • Kobe Bryant: ಹೆಲಿಕಾಫ್ಟರ್ ಅಪಘಾತ: ಬಾಸ್ಕೆಟ್‌ ಬಾಲ್ ದಂತಕಥೆ ಬ್ರ್ಯಾಂಟ್, 13 ವರ್ಷದ ಮಗಳು ದುರ್ಮರಣ

Kobe Bryant: ಹೆಲಿಕಾಫ್ಟರ್ ಅಪಘಾತ: ಬಾಸ್ಕೆಟ್‌ ಬಾಲ್ ದಂತಕಥೆ ಬ್ರ್ಯಾಂಟ್, 13 ವರ್ಷದ ಮಗಳು ದುರ್ಮರಣ

ಕೋಬ್​ ಬ್ರ್ಯಾಂಟ್​ ಹಾಗೂ ಅವರ 13 ವರ್ಷದ ಮಗಳು ಗಿಯಾನ್ನಾ.

ಕೋಬ್​ ಬ್ರ್ಯಾಂಟ್​ ಹಾಗೂ ಅವರ 13 ವರ್ಷದ ಮಗಳು ಗಿಯಾನ್ನಾ.

Kobe Bryant: ಹೆಲಿಕಾಪ್ಟರ್ ದುರಂತಕ್ಕೆ ನೈಜ ಕಾರಣ ಏನು ಎಂಬುವುದು ತಿಳಿದುಬಂದಿಲ್ಲ. ಮಧ್ಯಮ ವೇಗದಲ್ಲಿ ಹಾರುತ್ತಿದ್ದ ಹೆಲಿಕಾಪ್ಟರ್, ಇದ್ದಕ್ಕಿದ್ದಂತೆ ಕೆಳಗೆ ಬಂದು ಬೆಟ್ಟಕ್ಕೆ ಅಪ್ಪಳಿಸಿದ್ದನ್ನು ಕೆಲವರು ನೋಡಿದ್ದಾರೆ. ಹಳೆಯದಾಗಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷಗಳಿಂದ ಈ ಅಪಘಾತ ಉಂಟಾಗಿರಬಹುದು ಎನ್ನಲಾಗಿದೆ.

ಮುಂದೆ ಓದಿ ...
 • Share this:

  ಅಮೆರಿಕಾದ ಬಾಸ್ಕೆಟ್​ ಬಾಲ್ ಕ್ರೀಡೆಯ ದಂತಕಥೆ​, ಮಾಜಿ ಎನ್​ಬಿಎ ಸ್ಟಾರ್​ ಕೋಬ್​ ಬ್ರ್ಯಾಂಟ್​ ಹಾಗೂ ಅವರ 13 ವರ್ಷದ ಮಗಳು ಗಿಯಾನ್ನಾ ಸೇರಿದಂತೆ 9 ಮಂದಿ ಹೆಲಿಕಾಫ್ಟರ್​ ದುರಂತದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದಿದೆ.


  ಕ್ಯಾಲಿಫೋರ್ನಿಯಾದ ಕಾಲಬಾಸಾಸ್ ಎಂಬ ಬೆಟ್ಟಕ್ಕೆ ಭಾನುವಾರ ಬೆಳಿಗ್ಗೆ ಹೆಲಿಕಾಪ್ಟರ್ ಅಪ್ಪಳಿಸಿ ಈ ಅವಘಡ ಸಂಭವಿಸಿದೆ. ಎನ್​ಬಿಎ ಇತಿಹಾಸದಲ್ಲಿ ಅತ್ಯುತ್ತಮ ಆಟಗಾರ ಎಂದು ಹೆಸರಾಗಿದ್ದ ಕೋಬ್​ ಬ್ರ್ಯಾಂಡ್​ ತಮ್ಮ ಖಾಸಗಿ ಹೆಲಿಕಾಪ್ಟರ್​ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ​ಪತನಗೊಂಡಿದೆ.


  ಇಬ್ಬರೂ ಭಾನುವಾರ ತೌಂಸಾಂಡ್ ಓಕಾಸ್‌ನ ಮಂಬಾ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯಬೇಕಿದ್ದ ಬಾಸ್ಕೆಟ್‌ಬಾಲ್ ಪಂದ್ಯವೊಂದರಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು. ಈ ಪಂದ್ಯದಲ್ಲಿ ಗಿಯಾನ್ನಾ ಆಡಬೇಕಿತ್ತು. ಮಗಳು ಆಡುತ್ತಿದ್ದ ತಂಡಕ್ಕೆ ಬ್ರ್ಯಾಂಟ್ ತರಬೇತುದಾರರಾಗಿ ಭಾಗವಹಿಸಬೇಕಿತ್ತು.


  NZ vs IND: ಭಾರತ-ನ್ಯೂಜಿಲೆಂಡ್ 2ನೇ ಟಿ-20 ಪಂದ್ಯದ ಕೆಲವು ರೋಚಕ ಕ್ಷಣಗಳು ಇಲ್ಲಿದೆ ನೋಡಿ!


  ಆದರೆ, ಕ್ಯಾಲಬಾಸಸ್ ಮೇಲೆ ಹಾರುತ್ತಿದ್ದ ವೇಳೆ ಹೆಲಿಕಾಪ್ಟರ್​ ಪತನಗೊಂಡಿದೆ. ಇದರಿಂದ 41 ವರ್ಷದ ಕೋಬ್​ ಬ್ರ್ಯಾಂಟ್ ಜೊತೆಗೆ ಆತನ 13 ವರ್ಷಗ ಮಗಳು ಗಿಯಾನ್ನ ಹಾಗೂ 7 ಮಂದಿ ವ್ಯಕ್ತಿಗಳು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.


  ಹೈಸ್ಕೂಲ್​ ಓದುತ್ತಿರುವಾಗಲೇ ಎನ್​ಬಿಎಗೆ ಪದಾರ್ಪಣೆ ಮಾಡಿದ್ದ ಬ್ರ್ಯಾಂಟ್​ ತಮ್ಮ ವೃತ್ತಿ ಜೀವನದಲ್ಲಿ 5 ಬಾರಿ ಚಾಂಪಿಯನ್​ ತಂಡದ ಭಾಗವಾಗಿದ್ದರು. ಅಲ್ಲದೆ 2008 ಹಾಗೂ 2012ರ ಒಲಿಂಪಿಕ್ಸ್​ನಲ್ಲಿ ಅಮೆರಿಕಾ ತಂಡವನ್ನು ಪ್ರತಿನಿಧಿಸಿ ಚಿನ್ನದ ಪದಕ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು.  ಎಬಿ ಡಿವಿಲಿಯರ್ಸ್​ ಕಂಬ್ಯಾಕ್: ಸಿಡಿಲಬ್ಬರದ ಬ್ಯಾಟಿಂಗ್​ನೊಂದಿಗೆ ಸಿಕ್ಸರ್​ಗಳ ಸುರಿಮಳೆ


  ಇನ್ನು ಹೆಲಿಕಾಪ್ಟರ್ ದುರಂತಕ್ಕೆ ನೈಜ ಕಾರಣ ಏನು ಎಂಬುವುದು ತಿಳಿದುಬಂದಿಲ್ಲ. ಮಧ್ಯಮ ವೇಗದಲ್ಲಿ ಹಾರುತ್ತಿದ್ದ ಹೆಲಿಕಾಪ್ಟರ್, ಇದ್ದಕ್ಕಿದ್ದಂತೆ ಕೆಳಗೆ ಬಂದು ಬೆಟ್ಟಕ್ಕೆ ಅಪ್ಪಳಿಸಿದ್ದನ್ನು ಕೆಲವರು ನೋಡಿದ್ದಾರೆ. ಹಳೆಯದಾಗಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷಗಳಿಂದ ಈ ಅಪಘಾತ ಉಂಟಾಗಿರಬಹುದು ಎನ್ನಲಾಗಿದೆ.


  ಕೋಬ್​ ಬ್ರ್ಯಾಂಟ್​ ಅವರ ಸಾವಿಗೆ ವಿಶ್ವದ ಹಲವು ಕ್ರೀಡಾಪಟುಗಳು ಕಂಬನಿ ಮಿಡಿದಿದ್ದಾರೆ. ಟೀಂ ಇಂಡಿಯಾ ಓಪನರ್​ ರೋಹಿತ್​ ಶರ್ಮಾ, ಫುಟ್ಬಾಲ್​ ಸ್ಟಾರ್​ ಕ್ರಿಶ್ಚಿಯಾನ್​ ರೊನಾಲ್ಟೊ ಅನೇಕರು ಸಂತಾಪ ಸೂಚಿಸಿದ್ದಾರೆ.  Published by:Vinay Bhat
  First published: