India vs Pakistan- ಭಾರತ-ಪಾಕ್ ಪಂದ್ಯದ ದಿನ ಸಾನಿಯಾ ಮಿರ್ಜಾ ಮಾಯ ಆಗೋದು ಯಾಕೆ ಗೊತ್ತಾ?

Sania Mirza- ಭಾರತ ಮತ್ತು ಪಾಕಿಸ್ತಾನ ತಂಡಗಳು ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಅ. 24ರಂದು ಮುಖಾಮುಖಿಯಾಗುತ್ತಿವೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಸೋಷಿಯಲ್ ಮೀಡಿಯಾದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

ಸಾನಿಯಾ ಮಿರ್ಜಾ

ಸಾನಿಯಾ ಮಿರ್ಜಾ

 • Share this:
  ನವದೆಹಲಿ: ಇಂದಿನಿಂದ ಟಿ20 ವರ್ಲ್ಡ್ ಕಪ್ (T20 World Cup 2021) ಪಂದ್ಯಗಳು ಆರಂಭಗೊಂಡಿವೆ. ಟೀಂ ಇಂಡಿಯಾ (Team India) ಮೊದಲ ಪಂದ್ಯ ಅಕ್ಟೋಬರ್ 24ರಂದು ಪಾಕಿಸ್ತಾನ ವಿರುದ್ಧ ನಡೆಯಲಿದೆ. ಈ ದಿನ ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ (Sania Mirza) ಸೋಶಿಯಲ್ ಮೀಡಿಯಾದಿಂದ ದೂರ ಉಳಿಯಲಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆಯುತ್ತಿರುವಾಗ ಎರಡೂ ದೇಶಗಳ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ವಾರ್ ಉಂಟಾಗಿರುತ್ತದೆ. ಈ ಎಲ್ಲದರಿಂದ ಅಂತರ ಕಾಯ್ದುಕೊಳ್ಳಲು ಸಾನಿಯಾ ಮಿರ್ಜಾ ನಿರ್ಧರಿಸಿದ್ದಾರೆ. ಪ್ರತಿ ಬಾರಿ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯಗಳಿದ್ರೆ ಸಾನಿಯಾ ಮಿರ್ಜಾರನ್ನು ಟ್ರೋಲ್ ಮಾಡಲಾಗುತ್ತದೆ. ಕಾರಣ ಸಾನಿಯಾ ಪತಿ ಶೋಯೆಬ್ (Shoaib Malik) ಪಾಕಿಸ್ತಾನದ ಪರ ಆಡುತ್ತಾರೆ. ಈ ಹಿನ್ನೆಲೆ ಅಭಿಮಾನಿಗಳು ನೀವು ಯಾರ ಪರ ಎಂದು ಸಾನಿಯಾ ಅವರನ್ನು ಪ್ರಶ್ನೆ ಮಾಡುತ್ತಿರುತ್ತಾರೆ.

  ಇನ್‍ಸ್ಟಾಗ್ರಾಂನಲ್ಲಿ ಸಾನಿಯಾ ಹೇಳಿದ್ದೇನು?:

  ಭಾರತ ಮತ್ತು ಪಾಕಿಸ್ತಾನ ಮ್ಯಾಚ್ ದಿನ, ವಿಷಕಾರಿ ವಾತಾವರಣದಿಂದ ದೂರವಿರಲು ಸೋಶಿಯಲ್ ಮೀಡಿಯಾದಿಂದ ಮಾಯವಾಗುತ್ತೇನೆ ಬೈ ಬೈ ಎಂದು ಸಾನಿಯಾ ಬರೆದುಕೊಂಡಿದ್ದಾರೆ. ಸಾನಿಯಾ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲೀಕ್ ಅವರನ್ನು ಮದುವೆಯಾಗಿರುವ ಹಿನ್ನೆಲೆ ಅಭಿಮಾನಿಗಳು ನೀವು ಯಾರ ಪರ ಎಂದು ಕೇಳುತ್ತಿರುತ್ತಾರೆ. ಮೊದಲಿಗೆ ಶೋಯೆಬ್ ಮಲೀಕ್ ತಂಡದಲ್ಲಿ ಇರಲಿಲ್ಲ. ಆದ್ರೆ ಸೋಹೇಬ್ ಮಕಸೂದ್ ಬೆನ್ನು ನೋವಿನಿಂದ ಹೊರ ಬಂದಿದ್ದರು. ಆ ಸ್ಥಾನಕ್ಕೆ ಶೋಯೇಬ್ ಮಲೀಕ್ ಸೇರ್ಪಡೆಯಾಗಿದ್ದಾರೆ. ಇದುವರೆಗೂ ಪಾಕಿಸ್ತಾನದ ಎಲ್ಲ ಟಿ-20 ವಿಶ್ವಕಪ್ ಪಂದ್ಯಗಳನ್ನು ಶೋಯೇಬ್ ಮಲೀಕ್ ಆಡಿದ್ದಾರೆ.

  ಇದನ್ನೂ ಓದಿ: Kerala Rains- ರಣಮಳೆಗೆ ಕೇರಳ ತಲ್ಲಣ- ಎಲ್ಲವನ್ನೂ ಆಪೋಷಣೆ ಪಡೆಯುತ್ತಿರುವ ಮಳೆ; ಸಾವಿನ ಸಂಖ್ಯೆ 19ಕ್ಕೇರಿಕೆ

  2009ರ ವಿಶ್ವ ಕಪ್ ವಿಜೇತ ಟೀಂನಲ್ಲಿ ಶೋಯೆಬ್:

  ಪಾಕಿಸ್ತಾನ ಟೀಂ 2009ರಲ್ಲಿ ಯುಸೂಫ್ ಖಾನ್ ನಾಯಕತ್ವದಲ್ಲಿ ವಿಶ್ವ ಕಪ್ ಗೆದ್ದಿತ್ತು. ಶೋಯೆಬ್ ಮಲೀಕ್ ಸಹ ಈ ತಂಡದಲ್ಲಿದ್ದರು. 2007ರ ಮೊದಲ ಟಿ20 ವಿಶ್ವಕಪ್ ವೇಳೆ ಶೋಯೆಬ್ ಮಲೀಕ್ ಪಾಕಿಸ್ತಾನ ತಂಡದ ನಾಯಕರಾಗಿದ್ದರು. 2007ರಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದವು. 20007ರಿಂದ ಇಲ್ಲಿಯವರೆಗೆ ಆರು ಟಿ20 ವರ್ಲ್ಡ್ ಕಪ್ ಪಂದ್ಯಗಳು ನಡೆದಿವೆ. ಶೋಯೆಬ್ ಮಲೀಕ್ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ 22 ವರ್ಷದ ಅನುಭವ ಹೊಂದಿರುವ ಆಟಗಾರ. ವರ್ಲ್ಡ್ ಕಪ್ ಗಳಲ್ಲಿ 28 ಪಂದ್ಯ ಆಡಿರುವ ಶೋಯೆಬ್ ಮಲೀಕ್ 546 ರನ್ ಗಳಿಸಿದ್ದಾರೆ.

  ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯಕ್ಕೆ ಎಲ್ಲಾ ಟಿಕೆಟ್ ಸೋಲ್ಡ್ ಔಟ್:

  ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯಕ್ಕೆ ಇಡೀ ವಿಶ್ವ ಕಾದು ಕುಳಿತಿರುತ್ತದೆ. ವಿಶ್ವಕಪ್​ನ ಇತರೆ ಪಂದ್ಯಗಳಿಗಿಂತ ಈ ಪಂದ್ಯಕ್ಕೆ ಹೆಚ್ಚು ಮಹತ್ವ ಇರುತ್ತದೆ. ಕಳೆದ ವಿಶ್ವಕಪ್ ನಂತರ ಭಾರತ ಮತ್ತು ಪಾಕಿಸ್ತಾನ ಈ ವರ್ಷದ ಟಿ20 ವಿಶ್ವಕಪ್‍ನಲ್ಲಿ ಮತ್ತೆ ಮುಖಾಮುಖಿಯಾಗುತ್ತಿರುವ ಕಾರಣ ಈ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳು ಬಕ ಪಕ್ಷಿಯಂತೆ ಕಾದುಕುಳಿತಿದ್ದಾರೆ.

  ಇದನ್ನೂ ಓದಿ: ಕುಮಾರಸ್ವಾಮಿ ಒಬ್ಬ ಡೀಲ್ ಮಾಸ್ಟರ್, ಲಾಭ ಇಲ್ಲದೆ ಏನೂ ಮಾಡುವುದಿಲ್ಲ: Zameer khan ಟ್ವೀಟಾಸ್ತ್ರ

  ಅಕ್ಟೋಬರ್ 24 ರಂದು ಭಾರತೀಯ ಕಾಲಮಾನದ ಪ್ರಕಾರ ಸಂಜೆ 7.30ಕ್ಕೆ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಆರಂಭವಾಗಲಿದ್ದು, ಈ ಪಂದ್ಯಕ್ಕೆ ಪ್ರೇಕ್ಷಕರಿಗೆ ಅನುಮತಿ ನೀಡಲಾಗಿದೆ. ಹೀಗಾಗಿ ಈ ಪಂದ್ಯದ ಎಲ್ಲಾ ಟಿಕೆಟ್​ಗಳು ಈಗಾಗಲೇ ಸಂಪೂರ್ಣವಾಗಿ ಮಾರಾಟವಾಗಿದ್ದು, ಸೋಲ್ಡ್ ಔಟ್ ಆಗಿದೆ ಎಂಬ ಮಾಹಿತಿಗಳು ದೊರೆತಿದೆ.

  - ಮಹಮ್ಮದ್ ರಫೀಕ್ ಕೆ.
  Published by:Vijayasarthy SN
  First published: