• Home
 • »
 • News
 • »
 • sports
 • »
 • ಪಂತ್, ಅಯ್ಯರ್ ಬಿಟ್ಟು ಬುಮ್ರಾಗೆ ವೈಸ್ ಕ್ಯಾಪ್ಟನ್ಸಿ ಕೊಟ್ಟಿದ್ದು ಯಾಕೆ? ಇಲ್ಲಿದೆ ಕಾರಣ

ಪಂತ್, ಅಯ್ಯರ್ ಬಿಟ್ಟು ಬುಮ್ರಾಗೆ ವೈಸ್ ಕ್ಯಾಪ್ಟನ್ಸಿ ಕೊಟ್ಟಿದ್ದು ಯಾಕೆ? ಇಲ್ಲಿದೆ ಕಾರಣ

ಜಸ್​ಪ್ರೀತ್ ಬುಮ್ರಾ

ಜಸ್​ಪ್ರೀತ್ ಬುಮ್ರಾ

Why Jasprit Bumrah given vice-captain?: ಸೌತ್ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಗೆ ಉಪನಾಯಕನ ಸ್ಥಾನವನ್ನು ಶ್ರೇಯಸ್ ಅಯ್ಯರ್ ಅಥವಾ ರಿಷಬ್ ಪಂತ್ ಬದಲಿಗೆ ಬುಮ್ರಾ ಅವರಿಗೆ ಕೊಟ್ಟಿದ್ದು ಯಾಕೆ ಎಂಬುದಕ್ಕೆ ಬಿಸಿಸಿಐ ಮೂಲಗಳಿಂದ ಉತ್ತರ ಸಿಕ್ಕಿದೆ.

 • Share this:

  ಬೆಂಗಳೂರು, ಜ. 1: ಸೌತ್ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಗೆ ಟೀಮ್ ಇಂಡಿಯಾದ ಉಪನಾಯಕನ ಸ್ಥಾನವನ್ನು ಜಸ್​ಪ್ರೀತ್ ಬುಮ್ರಾಗೆ ವಹಿಸಿರುವುದು ಹಲವರಿಗೆ ಅನಿರೀಕ್ಷಿತ ಎನಿಸಿದೆ. ಅನಿರೀಕ್ಷಿತವಾದರೂ ಬಹುತೇಕ ಮಂದಿ ಈ ನಿರ್ಧಾರವನ್ನು ಸ್ವಾಗತಿಸಿರುವುದು ಹೌದು. ಆದರೆ, ಭವಿಷ್ಯದ ನಾಯಕರೆಂದು ಪರಿಗಣಿಸಲಾಗಿರುವ ಶ್ರೇಯಸ್ ಅಯ್ಯರ್ ಅಥವಾ ರಿಷಭ್ ಪಂತ್ ಅವರಿಗೆ ಯಾಕೆ ವೈಸ್ ಕ್ಯಾಪ್ಟನ್ಸಿ ಕೊಡಲಿಲ್ಲ ಎಂಬುದು ಎಲ್ಲರಿಗೂ ಅಚ್ಚರಿ ತಂದಿತ್ತು.


  ಬಿಸಿಸಿಐ ಮೂಲಗಳ ಪ್ರಕಾರ ಜಸ್​ಪ್ರೀತ್ ಬುಮ್ರಾ ಅವರ ಸ್ಥಿರ ಪ್ರದರ್ಶನಕ್ಕೆ ಉಪನಾಯಕನ ಸ್ಥಾನ ನೀಡುವ ಮೂಲಕ ಉಡುಗೊರೆ ಕೊಟ್ಟಿದೆ. ಅದೇ ವೇಳೆ ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಅವರಿಗೆ ಎಲ್ಲಾ ಮೂರು ಮಾದರಿ ಕ್ರಿಕೆಟ್​ನಲ್ಲಿ ಸ್ಥಿರ ಪ್ರದರ್ಶನ ನೀಡಬೇಕೆಂಬ ಸಂದೇಶವನ್ನೂ ರವಾನಿಸಿದೆ ಎನ್ನಲಾಗಿದೆ.


  “ಇದು ಒಂದು ಸರಣಿಗೆ ಮಾತ್ರ ಎಂಬುದನ್ನು ತಿಳಿದಿರಿ. ಭಾರತದಲ್ಲಿ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧ ನಡೆಯುವ ಕ್ರಿಕೆಟ್ ಸರಣಿಗಳು ಪ್ರಾರಂಭವಾಗುವ ವೇಳೆಗೆ ರೋಹಿತ್ ಶರ್ಮಾ ಚೇತರಿಸಿಕೊಂಡು ತಂಡಕ್ಕೆ ಬಂದಿರುತ್ತಾರೆ. ಅವರು ನಾಯಕರಾದರೆ ಕೆಎಲ್ ರಾಹುಲ್ ಉಪನಾಯಕರಾಗುತ್ತಾರೆ. ಆದ್ದರಿಂದ ಸೌತ್ ಆಫ್ರಿಕಾ ವಿರುದ್ಧದ ಒಂದು ಸರಣಿಗೆ ಜಸ್​ಪ್ರೀತ್ ಬುಮ್ರಾ ಅವರನ್ನ ಆಯ್ಕೆ ಮಾಡಲಾಗಿದೆ. ಬುಮ್ರಾ ಅವರ ಸ್ಥಿರತೆ ಹಾಗೂ ಅವರ ಬುದ್ಧಿವಂತಿಕೆಗೆ ಈ ಕೊಡುಗೆ ಕೊಡಲಾಗಿದೆ. ಇದೇ ಕಾರಣಕ್ಕೆ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಅವರ ಬದಲು ಬುಮ್ರಾಗೆ ಉಪನಾಯಕತ್ವ ಕೊಟ್ಟಿರುವುದು” ಎಂದು ಬಿಸಿಸಿಐನ ಮೂಲ ಹೇಳಿದ್ದಾರೆ.


  ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಕಾಯಲು ಹೇಳಿದ್ದೆವು, ಕೇಳಲಿಲ್ಲ: ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ


  ಮಾಜಿ ಮುಖ್ಯ ಆಯ್ಕೆಗಾರ ಎಂಎಸ್​ಕೆ ಪ್ರಸಾದ್ ಹೇಳಿದ್ದಿದು:


  ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಇಬ್ಬರೂ ತಂಡದಲ್ಲಿ ಲಭ್ಯ ಇದ್ದಿದ್ದರೆ ಜಸ್​ಪ್ರೀತ್ ಬುಮ್ರಾ ಅವರಿಗೆ ಉಪನಾಯಕನ ಸ್ಥಾನ ಸಿಗುತ್ತಿರಲಿಲ್ಲ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಒಂದೇ ಒಂದು ಸರಣಿ ಆದ್ದರಿಂದ ಬುಮ್ರಾ ಆಯ್ಕೆ ನಿರ್ಧಾರ ಬಹಳ ಸುಲಭ ಎನಿಸಿದೆ ಎಂದು ಬಿಸಿಸಿಐನ ಮಾಜಿ ಚೀಫ್ ಸೆಲೆಕ್ಟರ್ ಎಂ ಎಸ್ ಕೆ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.


  ಇದನ್ನೂ ಓದಿ: ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ Team India ಆಟಗಾರರು.. ವೈರಲ್​​ ವಿಡಿಯೋ ಇಲ್ಲಿದೆ ನೋಡಿ


  “ಜಸ್​ಪ್ರೀತ್ ಬುಮ್ರಾ ಸರಿಯಾದ ಆಲೋಚನೆ ಇರುವ ಬಹಳ ಸಂವೇದನಶೀಲ ವ್ಯಕ್ತಿ, ಅವರಿಗೆ ಯಾಕೆ ಕೊಡುಗೆ ಕೊಡಬಾರದು? ಒಬ್ಬ ವೇಗದ ಬೌಲರ್ ಎಲ್ಲಾ ಮಾದರಿ ಕ್ರಿಕೆಟ್​ನಲ್ಲೂ ಚೆನ್ನಾಗಿ ಆಡುತ್ತಿದ್ದಾನೆಂದರೆ ತಂಡಕ್ಕೆ ಫಾಸ್ಟ್ ಬೌಲಿಂಗ್ ಕ್ಯಾಪ್ಟನ್ ಯಾಕಾಗಬಾರದು ಎಂಬ ಸುಳಿವನ್ನು ನೀಡುವ ಈ ನಿರ್ಧಾರ ಸ್ವಾಗತಾರ್ಹವಾದುದು. ಜಸ್​ಪ್ರೀತ್ ಬುಮ್ರಾ ಅವರಿಗೆ ನಾಯಕತ್ವದ ಭಾಗವಾಗುವ ಅವಕಾಶ ಕೊಡದೇ ಇದ್ದರೆ ಅವರಿಂದ ಏನೇನು ಲಾಭ ಇದೆ ಎಂದು ಗೊತ್ತಾಗುವುದಿಲ್ಲ” ಎಂದವರು ಹೇಳಿದ್ದಾರೆ.

  Published by:Vijayasarthy SN
  First published: