ವಿರಾಟ್ ಕೊಹ್ಲಿ ನಾಯಕನಾಗಿ ಏಕದಿನ ಕ್ರಿಕೆಟ್​ನಲ್ಲಿ ಕಂಡ ಯಶಸ್ಸು ಎಷ್ಟು? ಇಲ್ಲಿದೆ ವಿವರ

Virat Kohli records as ODI captain- ವಿರಾಟ್ ಕೊಹ್ಲಿ ಓಡಿಐ ಟೀಮ್ ಇಂಡಿಯಾದ ನಾಯಕರಾಗಿ ದೊಡ್ಡ ಯಶಸ್ಸು ಕಂಡಿದ್ದಾರೆ. ಆದರೂ ಅವರು ಕ್ಯಾಪ್ಟನ್ಸಿ ಬಿಡಬೇಕಾಗಿ ಬಂದದ್ದು ವಿಪರ್ಯಾಸವೇ ಸರಿ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

 • Share this:
  ಬೆಂಗಳೂರು, ಡಿ. 8: ಭಾರತೀಯ ಕ್ರಿಕೆಟ್​ನಲ್ಲಿ ಕ್ಯಾಪ್ಟನ್ಸಿ ವಿಚಾರದಲ್ಲಿ ಪ್ರಯೋಗ ನಡೆಯುತ್ತಿದೆ. ಸೀಮಿತ ಓವರ್​ಗಳ ಕ್ರಿಕೆಟ್ ಮತ್ತು ಟೆಸ್ಟ್ ಕ್ರಿಕೆಟ್ ಎರಡೂ ಭಿನ್ನ ಸ್ವರೂಪ. ಹೀಗಾಗಿ, ಎರಡಕ್ಕೂ ಬೇರೆ ಬೇರೆ ನಾಯಕರು ಅಗತ್ಯ ಎಂಬ ವಾದ ಆಗಾಗ್ಗೆ ಕೇಳಿಬರುತ್ತಿರುತ್ತದೆ. ಹಾಗೆಯೇ, ಎರಡಕ್ಕೂ ಬೇರೆ ಬೇರೆ ಆಟಗಾರರಿರುವ ತಂಡ ಇರಬೇಕು ಎಂಬ ವಾದವೂ ಇದೆ. ಇದೆಲ್ಲದರ ಮಧ್ಯೆ ಈಗ ಸೀಮಿತ ಓವರ್​ಗಳ ಕ್ರಿಕೆಟ್ ಮತ್ತು ಟೆಸ್ಟ್ ಕ್ರಿಕೆಟ್​ಗೆ ಬಿಸಿಸಿಐ ಸ್ಪ್ಲಿಟ್ ಕ್ಯಾಪ್ಟನ್ಸಿ ಪ್ರಯೋಗ ಮಾಡಿದೆ. ವೈಟ್ ಬಾಲ್ ಕ್ರಿಕೆಟ್ ಆದ ಟಿ20 ಮತ್ತು ಓಡಿಐ ತಂಡಗಳಿಗೆ ರೋಹಿತ್ ಶರ್ಮಾ ಅವರನ್ನೇ ನಾಯಕರನ್ನಾಗಿ ಮಾಡಲಾಗಿದೆ. ಟಿ20 ತಂಡದ ನಾಯಕತ್ವ ಬಿಟ್ಟುಕೊಟ್ಟಿದ್ದ ವಿರಾಟ್ ಕೊಹ್ಲಿ ಅವರಿಂದ ಓಡಿಐ ತಂಡದ ನಾಯಕತ್ವವನ್ನೂ ಹಿಂಪಡೆಯಲಾಗಿದೆ. ಆದರೆ, ಅವರು ರೆಡ್ ಬಾಲ್ ಕ್ರಿಕೆಟ್ ಆದ ಟೆಸ್ಟ್ ತಂಡಕ್ಕೆ ನಾಯಕರಾಗಿ ಮುಂದುವರಿದಿದ್ದಾರೆ.

  ವಿರಾಟ್ ಕೊಹ್ಲಿ ಬಹಳ ಅಗ್ರೆಸಿವ್ ಆಟಗಾರ. ನಾಯಕನಾಗಿಯೂ ಬಹಳ ಅಗ್ರೆಸಿವ್. ಎಂಎಸ್ ಧೋನಿ ನಂತರ ಅವರು ಮೂರೂ ಮಾದರಿ ಕ್ರಿಕೆಟ್​ನ ತಂಡಗಳಿಗೆ ನಾಯಕರಾಗಿ ಬಹಳ ಪಂದ್ಯಗಳನ್ನ ಆಡಿದ್ದಾರೆ. ತಂಡಕ್ಕೆ ಹೊಸ ರೂಪ ಕೊಟ್ಟಿದ್ಧಾರೆ. ತಂಡದ ಬಾಡಿ ಲಾಂಗ್ವೇಜ್ ಬದಲಿಸಿದ್ದಾರೆ. ಆದರೆ, ಅವರ ನಾಯಕತ್ವದಲ್ಲಿ ಭಾರತ ಯಾವ ಐಸಿಸಿ ಟೂರ್ನಿಯನ್ನೂ ಜಯಿಸಲಾಗಲಿಲ್ಲ. ಐಸಿಸಿಯಿಂದ ನಡೆಸಲಾಗುವ ಟಿ20 ವಿಶ್ವಕಪ್, ಐಸಿಸಿ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಇವ್ಯಾವುದರಲ್ಲೂ ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಗೆಲುವು ದಕ್ಕಲಿಲ್ಲ. ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್ ಪಟ್ಟವೂ ಸಿಗಲಿಲ್ಲ.

  ವಿರಾಟ್ ಕೊಹ್ಲಿ ಇದೀಗ ಟಿ20 ಮತ್ತು ಓಡಿಐ ಎರಡೂ ತಂಡಗಳ ನಾಯಕತ್ವ ಕಳೆದುಕೊಂಡಿದ್ಧಾರೆ. ಭಾರತದ ಟಿ20 ಮತ್ತು ಓಡಿಐ ತಂಡಗಳಿಗೆ ರೋಹಿತ್ ಶರ್ಮಾ ನಾಯಕ ಎಂದು ಬಿಸಿಸಿಐ ಇಂದು ಅಧಿಕೃತವಾಗಿ ಘೋಷಣೆ ಮಾಡಿದೆ.

  ಇದನ್ನೂ ಓದಿ: ರೋಹಿತ್ ಶರ್ಮಾ ಓಡಿಐ ಟೀಮ್​ಗೂ ಕ್ಯಾಪ್ಟನ್; ದಕ್ಷಿಣ ಆಫ್ರಿಕಾ ಸರಣಿಗೆ ಟೆಸ್ಟ್ ತಂಡ ಪ್ರಕಟ

  ಓಡಿಐ ಕ್ಯಾಪ್ಟನ್ ಆಗಿ ವಿರಾಟ್ ಕೊಹ್ಲಿ ಸಾಧನೆ:

  ವಿರಾಟ್ ಕೊಹ್ಲಿ ಅವರು ಏಕದಿನ ಕ್ರಿಕೆಟ್ ತಂಡದ ನಾಯಕರಾಗಿ ಅದ್ಭುತ ಯಶಸ್ಸು ಕಂಡಿದ್ಧಾರೆ. ಭಾರತದ ಬೇರಾವ ನಾಯಕನಿಗೂ ಸಿಗದಷ್ಟು ಸಕ್ಸಸ್ ಅವರ ಕ್ಯಾಪ್ಟನ್ಸಿಗೆ ಸಿಕ್ಕಿದೆ. ಇದಕ್ಕೆ ಅಂಕಿ ಅಂಶವೇ ನಿದರ್ಶನವಾಗಿದೆ.

  ಕೊಹ್ಲಿ ಓಡಿಐ ಕ್ಯಾಪ್ಟನ್ಸಿ

  ಪಂದ್ಯ: 95
  ಗೆಲುವು: 65
  ಸೋಲು: 27
  ಟೈ: 1
  ಫಲಿತಾಂಶ ಇಲ್ಲ: 2
  ಗೆಲುವಿನ ದರ: ಶೇ. 70.43

  ವಿಶ್ವಕಪ್ ವಿಜೇತ ನಾಯಕರಿಗೆ ಕೊಹ್ಲಿಯನ್ನ ಹೋಲಿಸಿದಾಗ:

  ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ ಜನರು ಗುರುತಿಸಿರುವ ಕಪ್ಪು ಚುಕ್ಕೆ ಎಂದರೆ ವಿಶ್ವಕಪ್ ಗೆಲ್ಲದೇ ಇರುವುದು. ಆದರೆ, ವಿಶ್ವಕಪ್ ಗೆದ್ದ ಇಬ್ಬರು ನಾಯಕರು ಒಟ್ಟಾರೆಯಾಗಿ ಓಡಿಐ ನಾಯಕರಾಗಿ ಎಷ್ಟರಮಟ್ಟಿಗೆ ಯಶಸ್ಸು ಕಂಡಿದ್ದಾರೆ? ವಿರಾಟ್ ಕೊಹ್ಲಿಯಷ್ಟು ಯಶಸ್ಸು ಕಂಡಿಲ್ಲ.

  ವಿಶ್ವಕಪ್ ವೀರರು ಮತ್ತು ಕೊಹ್ಲಿ ಕ್ಯಾಪ್ಟನ್ಸಿಯ ವಿನಿಂಗ್ ಪರ್ಸೆಂಟೇಜ್:

  ವಿರಾಟ್ ಕೊಹ್ಲಿ: ಶೇ. 70.43
  ಎಂಎಸ್ ಧೋನಿ: ಶೇ. 59.52
  ಕಪಿಲ್ ದೇವ್: ಶೇ. 54.16

  ಹತ್ತಕ್ಕೂ ಹೆಚ್ಚು ಓಡಿಐ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿರುವ ನಾಯಕರ ಪೈಕಿ ಪ್ರತಶತ ಲೆಕ್ಕಾಚಾರದಲ್ಲಿ ಮುಂದಿರುವುದು ವಿರಾಟ್ ಕೊಹ್ಲಿಯೇ ಎಂಬುದು ಇಲ್ಲಿ ಗಮನಾರ್ಹ.

  ಇದನ್ನೂ ಓದಿ: Vijay Hazare Trophy- ಕರ್ನಾಟಕಕ್ಕೆ ಭಾರೀ ಅಂತರದ ಗೆಲುವು; ಪಾಂಡಿಚೆರಿ 53 ರನ್​ಗೆ ಆಲೌಟ್

  ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ 19 ಓಡಿಐ ಸರಣಿಗಳನ್ನ ಆಡಿದೆ. ಅದರಲ್ಲಿ ಬರೋಬ್ಬರಿ 15 ಸರಣಿಗಳನ್ನ ಭಾರತ ಜಯಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನೆಲದಲ್ಲಿ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ವಿಜಯಪತಾಕೆ ಹಾರಿಸಿದೆ.

  ವಿರಾಟ್ ಕೊಹ್ಲಿ ನಾಯಕರಾಗಿ ಐಸಿಸಿ ಟೂರ್ನಿಗಳನ್ನ ಜಯಿಸಿದೇ ಇದ್ದರೂ ತಂಡ ಆ ಟೂರ್ನಿಗಳಲ್ಲಿ ಉತ್ತಮ ಸಾಧನೆಯನ್ನಂತೂ ಮಾಡಿದೆ. ಅವರ ನಾಯಕತ್ವದಲ್ಲಿ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ತಲುಪಿತು. 2019ರ ಓಡಿಐ ವಿಶ್ವಕಪ್​ನ ಸೆಮಿಫೈನಲ್ ಹಂತ ತಲುಪಿತ್ತು.

  ಕ್ಯಾಪ್ಟನ್ಸಿ ಹೊಣೆಹೊತ್ತರೂ ರನ್ ಸುರಿಮಳೆ:

  ವಿರಾಟ್ ಕೊಹ್ಲಿ ನಾಯಕರಾಗಿ ಆಡಿದ ಏಕದಿನ ಪಂದ್ಯಗಳಲ್ಲಿ ರನ್​ಗಳ ಹೊಳೆಯ್ನೂ ಹರಿಸಿದ್ದಾರೆ. 72.65 ಸರಾಸರಿಯಲ್ಲಿ 5,449 ರನ್ ಗಳಿಸಿದ್ದಾರೆ. 21 ಶತಕ ಭಾರಿಸಿದ್ದಾರೆ. ಶತಕದ ವಿಚಾರದಲ್ಲಿ ರಿಕಿ ಪಾಂಟಿಂಗ್ ಬಿಟ್ಟರೆ ಎರಡನೇ ಸ್ಥಾನ ವಿರಾಟ್ ಕೊಹ್ಲಿಯದ್ದು.
  Published by:Vijayasarthy SN
  First published: