Nivethan: ನಿವೇದನ್ ರಾಧಾಕೃಷ್ಣನ್, ಆಸ್ಟ್ರೇಲಿಯಾದ ಹೊಸ ಬೌಲಿಂಗ್ ಸೆನ್ಸೇಷನ್; ಒಂದು ಕಿರುಪರಿಚಯ

Ambidextrous Spinner of Australia- ಭಾರತ ಮೂಲದ ನಿವೇದನ್ ರಾಧಾಕೃಷ್ಣನ್ ಅವರು ತಮ್ಮೆರಡೂ ಕೈಗಳಿಂದಲೂ ಸ್ಪಿನ್ ಬೌಲಿಂಗ್ ಮಾಡಬಲ್ಲರು. ವೇಗದ ಬೌಲಿಂಗ್ ಕೂಡ ಮಾಡಬಲ್ಲವರು. ಜೂನಿಯರ್ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ತಂಡದಲ್ಲಿ ಅವರಿದ್ದಾರೆ.

ನಿವೇದನ್ ರಾಧಾಕೃಷ್ಣನ್

ನಿವೇದನ್ ರಾಧಾಕೃಷ್ಣನ್

  • Share this:
    ಚೆನ್ನೈ, ಡಿ. 14: ಭಾರತ ಮೂಲದ ಕ್ರಿಕೆಟಿಗರು ವಿಶ್ವದ ಬೇರೆ ಬೇರೆ ದೇಶಗಳ ತಂಡಗಳಲ್ಲಿ ಮಿಂಚುತ್ತಿದ್ದಾರೆ. ನ್ಯೂಜಿಲೆಂಡ್, ಇಂಗ್ಲೆಂಡ್​ನಂಥ ಪ್ರಧಾನ ಕ್ರಿಕೆಟ್ ದೇಶಗಳಲ್ಲೂ ಭಾರತೀಯ ಮೂಲದವರು ರಾಷ್ಟ್ರೀಯ ತಂಡ ಸೇರುವುದು ಸಾಮಾನ್ಯವಾಗಿದೆ. ಆದರೆ, ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದವರು ಮಿಂಚಿದ್ದು ಕಡಿಮೆ. ಗುರೀಂದರ್ ಸಿಂಗ್ ಸಂಧು, ಜೇಸನ್ ಸಂಘಾ, ತನ್ವೀರ್ ಸಂಘಾ, ಅರ್ಜುನ್ ನಾಯರ್ ಮೊದಲಾದವರು ವಿವಿಧ ವಯೋಮಾನದ ರಾಷ್ಟ್ರೀಯ ತಂಡದಲ್ಲಿ ಆಸ್ಟ್ರೇಲಿಯಾವನ್ನ ಪ್ರತಿನಿಧಿಸಿದ್ದಾರೆ. ಅರ್ಜುನ್ ನಾಯರ್, ಜೇಸನ್ ಸಂಘಾ, ತನ್ವೀರ್ ಸಂಘಾ ಅವರು ಕಿರಿಯರ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ಪರ ಆಡಿದ್ಧಾರೆ. ಜೇಸನ್ ಸಂಘಾ ಅವರು 2018ರ ಕಿರಿಯರ ವಿಶ್ವಕಪ್​ನಲ್ಲಿ ಟೀಮ್ ಆಸ್ಟ್ರೇಲಿಯಾದ ಕ್ಯಾಪ್ಟನ್ ಕೂಡ ಆಗಿದ್ದರು. ಈಗ ಅಂಡರ್-19 ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ತಂಡದಲ್ಲಿ ಮತ್ತೊಬ್ಬ ಭಾರತ ಮೂಲದ ಆಟಗಾರ ಸೇರ್ಪಡೆಯಾಗಿದ್ದಾರೆ. ಅವರೇ 19 ವರ್ಷದ ನಿವೇದನ್ ರಾಧಾಕೃಷ್ಣನ್.

    ನಿವೇದನ್ ಅವರು ಐಪಿಎಲ್​ನಲ್ಲೂ ಕೆಲಸ ಮಾಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನೆಟ್ ಬೌಲರ್ ಆಗಿದ್ದ ಅವರು ರಿಕಿ ಪಾಂಟಿಂಗ್, ಸ್ಟೀವ್ ಸ್ಮಿತ್ ಮೊದಲಾದ ಆಸ್ಟ್ರೇಲಿಯಾ ದಿಗ್ಗಜರ ಜೊತೆ ಕೆಲಸ ಮಾಡುವ ಅವಕಾಶವೂ ಸಿಕ್ಕಿತು. ಹಾಗೆಯೇ, ತಾವಿರುವ ಆಸ್ಟ್ರೇಲಿಯಾದಲ್ಲೂ ಇವರಿಗಿದ್ದ ಸ್ಥಾನಮಾನ ಹೆಚ್ಚಾಯಿತು.

    ನಿವೇದನ್ ರಾಧಾಕೃಷ್ಣನ್ ಅವರ ತಂದೆ ಅಣ್ಬು ಸೆಲ್ವನ್. ಇವರು 2013ರಲ್ಲಿ ತಮಿಳುನಾಡಿನಿಂದ ಆಸ್ಟ್ರೇಲಿಯಾದ ಸಿಡ್ನಿಗೆ ಕುಟುಂಬಸಮೇತ ವಲಸೆ ಹೋದರು. ಅಣ್ಬು ಅವರು ತಮಿಳುನಾಡಿನಲ್ಲಿ ಜೂನಿಯರ್ ಕ್ರಿಕೆಟ್​ನಲ್ಲಿ ಹಿಂದೆ ಆಡಿದ್ದವರು. ಆಸ್ಟ್ರೇಲಿಯಾಗೆ ಹೋಗಿ ತಮ್ಮ ಮಗನನ್ನೂ ಕ್ರಿಕೆಟರ್ ಆಗಿ ರೂಪಿಸಿದ್ದಾರೆ.

    ರಾಧಾಕೃಷ್ಣನ್ ಸಾಮಾನ್ಯ ಬೌಲರ್ ಅಲ್ಲ:

    19 ವರ್ಷದ ನಿವೇದನ್ ರಾಧಾಕೃಷ್ಣನ್ ಎರಡೂ ಕೈಗಳಲ್ಲಿ ಬೌಲಿಂಗ್ (Ambidextrous Spinner) ಮಾಡಬಲ್ಲವರು. ಎಡಗೈ ಸ್ಪಿನ್ನರ್ ಹೌದು, ಮತ್ತು ಬಲಗೈ ಸ್ಪಿನ್ನರ್ ಕೂಡ ಹೌದು. ಆಸ್ಟ್ರೇಲಿಯಾದ ಜೂನಿಯರ್ ಕ್ರಿಕೆಟ್ ಕ್ಷೇತ್ರದಲ್ಲಿ ಇಂಥ ಉಭಯ ಶೈಲಿ ಸ್ಪಿನ್ನರ್ ಇರುವುದು ಇವರೊಬ್ಬರೇ. ವಿಶ್ವ ಕ್ರಿಕೆಟ್​​ನಲ್ಲೂ ಇಂಥ ಆಟಗಾರರು ತೀರಾ ಅಪರೂಪ.

    ಇದನ್ನೂ ಓದಿ: ಕೊಹ್ಲಿ ಅಲ್ಲ, ರೋಹಿತ್ ಅಲ್ಲ, ನಟ ಅಕ್ಷಯ್ ಕುಮಾರ್​ಗೆ ಇಷ್ಟವಾದ ಇಬ್ಬರು ಕ್ರಿಕೆಟಿಗರು ಇವರು

    ಆಸ್ಟ್ರೇಲಿಯಾದ ಎತ್ತರದ ಹುಡುಗರನ್ನ ಕಂಡು ವೇಗದ ಬೌಲಿಂಗ್ ಬಿಟ್ಟರು:

    ಕುತೂಹಲ ಎಂದರೆ ನಿವೇದನ್ ಅವರು ಸ್ಪಿನ್ನರ್ ಆಗುವ ಮುನ್ನ ಫಾಸ್ಟ್ ಬೌಲರ್ ಆಗಿದ್ದರಂತೆ. ಆಸ್ಟ್ರೇಲಿಯಾದಲ್ಲಿ ಎತ್ತರದ ಬ್ಯಾಟುಗಾರರನ್ನು ಕಂಡು ಸ್ಪಿನ್ನರ್ ಆಗಿ ಬದಲಾದರಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ.

    “ಸ್ಪಿನ್ ಬೌಲರ್ ಆಗುವ ಮುನ್ನ ನಾನು ಚೆನ್ನೈನಲ್ಲಿ ವೇಗದ ಬೌಲಿಂಗ್ ಮಾಡುತ್ತಿದ್ದೆ. ಜೊತೆಗೆ ಸ್ಪಿನ್ ಬೌಲಿಂಗ್ ಕೂಡ ಮಾಡುತ್ತಿದ್ದೆ. ನಾನು ಫಾಸ್ಟ್ ಬೌಲರ್ ಆಗಿ ಮುಂದುವರಿಯುವುದಾಗಿದ್ದರೆ ಆಸ್ಟ್ರೇಲಿಯಾದಲ್ಲಿ ಅದು ಸಾಧ್ಯವಿರಲಿಲ್ಲ. ನನಗಿಂತ ಮೂರ್ನಾಲ್ಕು ವರ್ಷ ಕಿರಿಯ ಹುಡುಗರು ಇಲ್ಲಿ ಆರು ಅಡಿ ಎತ್ತರ ಇರುತ್ತಾರೆ. ಇವರಿಗೆ ನಾನು ವೇಗದ ಬೌಲಿಂಗ್​ನಲ್ಲಿ ಲೆಗ್ ಕಟ್ಟರ್ ಹಾಕಿದರೆ ಚಚ್ಚಿಸಿಕೊಳ್ಳುವ ಅವಕಾಶವೇ ಹೆಚ್ಚಿರುತ್ತಿತ್ತು” ಎಂದು ನಿವೇದನ್ ತಿಳಿಸುತ್ತಾರೆ.

    ಇದನ್ನೂ ಓದಿ: ಹರ್ಷಿತ್ ಸೇಠ್, 6 ಬಾಲ್​ಗೆ 6 ವಿಕೆಟ್ ಪಡೆದ 16 ವರ್ಷದ ಸ್ಪಿನ್ನರ್; ಪಾಕಿಸ್ತಾನೀ ತಂಡದ ವಿರುದ್ಧ ಸಾಧನೆ

    ಅಪ್ಪನ ಸಲಹೆ:

    ವೇಗದ ಬೌಲಿಂಗ್ ಬಿಟ್ಟು ಸ್ಪಿನ್ನರ್ ಮುಂದುವರಿಸಿದ ನಿವೇದನ್ ಅವರು ಸ್ವಾಭಾವಿಕ ಬಲಗೈ ಬೌಲರ್ ಆಗಿದ್ದವರು. ಇವರಿಗೆ ಎಡಗೈ ಬಳಸಿ ಬೌಲಿಂಗ್ ಮಾಡುವಂತೆ ಸಲಹೆ ನೀಡಿದ್ದು ಅವರ ತಂದೆ ಅಣ್ಬು ಸೆಲ್ವಂ ಅವರಂತೆ.

    “ನೀನ್ಯಾಕೆ ಎಡಗೈನಲ್ಲಿ ಬೌಲಿಂಗ್ ಮಾಡಬಾರದು? ಎಂದು ಅಪ್ಪ ಒಂದು ದಿನ ಕೇಳಿಯೇಬಿಟ್ಟರು. ಯಾರೂ ಈ ರೀತಿ ಎರಡೂ ಕೈಗಳಿಂದ ಬೌಲಿಂಗ್ ಮಾಡುವುದಿಲ್ಲ. ಟಿವಿಯಲ್ಲಿ ನಾನು ಅಂಥದ್ದ ನೋಡಿಲ್ಲ. ಚನ್ನೈನಲ್ಲಿ ನಾನು ಚಿಕ್ಕವನಿದ್ದಾಗ ಎಲ್ಲಿಯೂ ನೋಡಿರಲಿಲ್ಲ. ಅಪ್ಪ ಆ ರೀತಿ ಸಲಹೆ ನೀಡಿದಾಗ, ಹೌದಲ್ಲ ಯಾಕೆ ಪ್ರಯತ್ನಿಸಬಾರದು ಎನಿಸಿತು. ನನ್ನ ಆಟದಲ್ಲಿ ನನಗೆ ಸೋಲಿನ ಭಯ ಇರಲಿಲ್ಲ. ಬೇರೆಯವರು ನನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂಬ ಯೋಚನೆ ಇಲ್ಲದಿದ್ದರೆ ಮತ್ತು ಸೋಲಿಗೂ ಹೆದರದೇ ಇದ್ದರೆ ನಾನು ಏನೇನೆಲ್ಲಾ ಸಾಧಿಸಬಹುದು ಹೇಳಿ?” ಎಂದು ಈ ಪುಟ್ಟ ಯುವಕ ಹೇಳುತ್ತಾರೆ.
    Published by:Vijayasarthy SN
    First published: