ಟೀಂ ಇಂಡಿಯಾ ಬ್ಯಾಟಿಂಗ್ ಕ್ರಮಾಂಕದ ಚರ್ಚೆ: ತನ್ನ ಸಾಮರ್ಥ್ಯ ತಿಳಿಸಿದ ಕನ್ನಡಿಗ ರಾಹುಲ್

ಭಾರತ ತಂಡದ ಪರವಾಗಿ 14 ಏಕದಿನ ಪಂದ್ಯಗಳನ್ನಾಡಿರುವ ರಾಹುಲ್ 13 ಇನಿಂಗ್ಸ್​ನಲ್ಲಿ 343 ರನ್​ಗಳನ್ನು ಬಾರಿಸಿದ್ದಾರೆ.

zahir | news18
Updated:May 17, 2019, 9:42 PM IST
ಟೀಂ ಇಂಡಿಯಾ ಬ್ಯಾಟಿಂಗ್ ಕ್ರಮಾಂಕದ ಚರ್ಚೆ: ತನ್ನ ಸಾಮರ್ಥ್ಯ ತಿಳಿಸಿದ ಕನ್ನಡಿಗ ರಾಹುಲ್
@alphacricket.com
  • News18
  • Last Updated: May 17, 2019, 9:42 PM IST
  • Share this:
ವಿಶ್ವಕಪ್​ ಕ್ರಿಕೆಟ್ ಆರಂಭಗೊಳ್ಳಲು ದಿನಗಳು ಮಾತ್ರ ಉಳಿದಿವೆ. ಇದರ ಬೆನ್ನಲ್ಲೇ ಟೀಂ ಇಂಡಿಯಾದ ಬ್ಯಾಟಿಂಗ್ ಲೈನ್​ ಬಗ್ಗೆ ಚರ್ಚೆಯೊಂದು ಶುರುವಾಗಿದೆ. ಈಗಾಗಲೇ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಒನ್​ಡೌನ್​ನಲ್ಲಿ ನಾಯಕ ವಿರಾಟ್​ ಕೊಹ್ಲಿ ಬ್ಯಾಟ್​ ಬೀಸಲಿದ್ದಾರೆ. ಇನ್ನು ಮೂರನೇ ಕ್ರಮಾಂಕ ಅನುಭವಿ ಎಂಎಸ್ ಧೋನಿಯ ಪಾಲಾಗುವ ಸಾಧ್ಯತೆ ಹೆಚ್ಚಿದೆ.

ಇಲ್ಲಿ ಚರ್ಚೆಗೆ ಕಾರಣವಾಗುತ್ತಿರುವುದು ನಾಲ್ಕನೇ ಕ್ರಮಾಂಕ. ಆಲ್​ರೌಂಡರ್​ ಕೋಟಾದಲ್ಲಿ ತಂಡದಲ್ಲಿ ಸ್ಥಾನ ಪಡೆದಿರುವ ವಿಜಯ್ ಶಂಕರ್ ಹಾಗೂ ಸ್ಪೋಟಕ ಬ್ಯಾಟ್ಸ್​ಮನ್ ಕೆಎಲ್​ ರಾಹುಲ್​ ನಡುವೆ ಒಬ್ಬರು ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಹೀಗಾಗಿ ಆರಂಭಿಕರಾಗಿ ಕಣಕ್ಕಿಳಿದು ಅನುಭವಿರುವ ರಾಹುಲ್​ರನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಇಳಿಸಿ ಮಧ್ಯಮ ಕ್ರಮಾಂಕವನ್ನು ಬಲಪಡಿಸುವುದು ಸೂಕ್ತ ಎಂಬ ಹೇಳಿಕೆಗಳು ಕೇಳಿ ಬಂದಿದೆ. ಭಾರತ ತಂಡದ ಮಾಜಿ ಆಟಗಾರ ದಿಲೀಪ್ ವೆಂಗ್​ಸರ್ಕಾರ್ ರಾಹುಲ್​ರನ್ನು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಕಳುಹಿಸುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು 2011ರ ವಿಶ್ವಕಪ್ ಹೀರೋ ಗೌತಮ್ ಗಂಭೀರ್ ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ತಂಡದಲ್ಲಿರುವ ದಿನೇಶ್ ಕಾರ್ತಿಕ್ ಹಾಗೂ ವಿಜಯ್​ ಶಂಕರ್​ಗಿಂತ ಕೆಎಲ್​ ರಾಹುಲ್​ಗೆ ಅವಕಾಶ ನೀಡಿ, ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಕಳುಹಿಸುವುದು ಸೂಕ್ತ ಎಂದು ಹೇಳಿಕೊಂಡಿದ್ದಾರೆ.

ಟೀಂ ಇಂಡಿಯಾದ ಬ್ಯಾಟಿಂಗ್​ ಕ್ರಮಾಂಕದ ಬಗ್ಗೆ ಚರ್ಚೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್, ನಾನು ತಂಡದ ಭಾಗವಾಗಿರುವುದನ್ನು ಆಯ್ಕೆ ಸಮಿತಿ ಸ್ಪಷ್ಟಪಡಿಸಿದೆ. ಹೀಗಾಗಿ ತಂಡ ಬಯಸಿದ ಯಾವುದೇ ಕ್ರಮಾಂಕದಲ್ಲಿ ಆಡಲು ಬದ್ಧನಾಗಿರುವುದಾಗಿ ತಿಳಿಸಿದ್ದಾರೆ.

ಈ ಹಿಂದಿನ ಸರಣಿಗಳಲ್ಲಿ ಟೀಂ ಇಂಡಿಯಾದ ಆರಂಭಿಕಾಗಿ ಬ್ಯಾಟಿಂಗ್‌ಗೆ ಇಳಿಯುತ್ತಿದ್ದ ರಾಹುಲ್, ಚೊಚ್ಚಲ ವಿಶ್ವಕಪ್‌ನಲ್ಲಿ ಯಾವುದೇ ಕ್ರಮಾಂಕದಲ್ಲೂ ಬ್ಯಾಟ್​ ಬೀಸುವುದಾಗಿ ತಿಳಿಸಿದ್ದಾರೆ. ಈ ಮೂಲಕ ಯಾವುದೇ ಕ್ರಮಾಂಕದಲ್ಲೂ ಆತ್ಮ ವಿಶ್ವಾಸದಿಂದ ಬ್ಯಾಟ್ ಮಾಡಬಲ್ಲೆ ಎಂದು ಸದ್ಯ ನಡೆಯುತ್ತಿರುವ ಚರ್ಚೆಗೆ ಇತಿಶ್ರೀ ಹಾಡುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ  ದಕ್ಷಿಣ ಆಫ್ರಿಕಾ ವಿರುದ್ದದ ಮೊದಲ ಪಂದ್ಯದಲ್ಲಿ ಕನ್ನಡಿಗ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡುವ ಸಾಧ್ಯತೆ ಹೆಚ್ಚಿದೆ.


ಭಾರತ ತಂಡದ ಪರವಾಗಿ 14 ಏಕದಿನ ಪಂದ್ಯಗಳನ್ನಾಡಿರುವ ರಾಹುಲ್ 13 ಇನಿಂಗ್ಸ್​ನಲ್ಲಿ 343 ರನ್​ಗಳನ್ನು ಬಾರಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ಎರಡು ಅರ್ಧಶತಕಗಳು ಒಳಗೊಂಡಿದೆ. ಇತ್ತೀಚೆಗೆ ನಡೆದ ಐಪಿಎಲ್​ನಲ್ಲೂ ಭರ್ಜರಿ ಶತಕ ಸಿಡಿಸಿ ಉತ್ತಮ ಫಾರ್ಮ್​ನಲ್ಲಿರುವ ರಾಹುಲ್​ ಇದೇ ಮೊದಲ ಬಾರಿಗೆ ವಿಶ್ವಕಪ್ ಆಡಲಿದ್ದಾರೆ.ಇದನ್ನೂ ಓದಿ: ಈ ಬಾರಿ ವಿಶ್ವಕಪ್​ನಲ್ಲಿ ಸಿಡಿಯಲಿದೆ 500 ರನ್?

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ

ಇದನ್ನೂ ಓದಿ: ವಿಶ್ವಕಪ್ ಪ್ರಶಸ್ತಿ ಮೊತ್ತ ಪ್ರಕಟ: ಚಾಂಪಿಯನ್ ತಂಡಕ್ಕೆ ಸಿಗಲಿರುವ ಮೊತ್ತ ಎಷ್ಟು ಗೊತ್ತೆ?
First published:May 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ