ರೋಹಿತ್ ಶರ್ಮಾ ಬದಲು ಕೆಎಲ್ ರಾಹುಲ್ ಭಾರತ ಟೆಸ್ಟ್ ತಂಡದ ಉಪನಾಯಕ

KL Rahul replaces Rohit Sharma as Vice-captain: ರೋಹಿತ್ ಶರ್ಮಾ ಗಾಯಗೊಂಡಿರುವುದರಿಂದ ಟೀಮ್ ಇಂಡಿಯಾದ ಉಪನಾಯಕನ ಸ್ಥಾನಕ್ಕೆ ಅಜಿಂಕ್ಯ ರಹಾನೆ, ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಹೆಸರುಗಳು ಇದ್ದವು. ಅಂತಿಮವಾಗಿ ರಾಹುಲ್ ಆಯ್ಕೆ ಆಗಿದ್ಧಾರೆ.

ಕೆಎಲ್ ರಾಹುಲ್

ಕೆಎಲ್ ರಾಹುಲ್

 • Share this:
  ಮುಂಬೈ, ಡಿ. 18: ಸೌತ್ ಆಫ್ರಿಕಾ (South Africa) ವಿರುದ್ಧ ಇದೇ ಡಿ. 26 ರಿಂದ ನಡೆಯಲಿರುವ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾಗೆ ಕೆಎಲ್ ರಾಹುಲ್ (K L Rahul) ಅವರನ್ನ ಉಪನಾಯಕರನ್ನಾಗಿ (Team India Vice Captain) ಆಯ್ಕೆ ಮಾಡಲಾಗಿದೆ. ವಿರಾಟ್ ಕೊಹ್ಲಿ (Virat Kohli) ನೇತೃತ್ವದ ಭಾರತ ಟೆಸ್ಟ್ ತಂಡಕ್ಕೆ ಈ ಹಿಂದೆ ರೋಹಿತ್ ಶರ್ಮಾ (Rohit Sharma) ಅವರನ್ನ ವೈಸ್ ಕ್ಯಾಪ್ಟನ್ ಆಗಿ ಮಾಡಲಾಗಿತ್ತು. ಕೆಲ ದಿನಗಳ ಹಿಂದೆ ಮುಂಬೈನಲ್ಲಿ ರೋಹಿತ್ ಶರ್ಮಾ ನೆಟ್ ಪ್ರಾಕ್ಟೀಸ್ (Net Practice) ಮಾಡುವಾಗ ಎಡಗೈಗೆ ಪೆಟ್ಟು ಮಾಡಿಕೊಂಡಿದ್ದರು. ಮೂರು ನಾಲ್ಕು ವಾರಗಳ ಕಾಲ ಅವರು ತಂಡಕ್ಕೆ ಅಲಭ್ಯರಿರಲಿದ್ದಾರೆ. ಟೆಸ್ಟ್ ಸರಣಿ ಬಳಿಕ ಜನವರಿ 18ರಿಂದ ಆರಂಭವಾಗಲಿರುವ ಏಕದಿನ ಸರಣಿಯಷ್ಟರಲ್ಲಿ ರೋಹಿತ್ ಶರ್ಮಾ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ. ಟೆಸ್ಟ್ ತಂಡದಲ್ಲಿ ರೋಹಿತ್ ಶರ್ಮಾ ಸ್ಥಾನಕ್ಕೆ ಪಾರ್ಥಿವ್ ಪಾಂಚಾಲ್ (Parthiv Panchal) ಅವರನ್ನ ಆಯ್ಕೆ ಮಾಡಲಾಗಿದೆ. ಉಪನಾಯಕನಾಗಿ ಈಗ ಕೆಎಲ್ ರಾಹುಲ್ ಆಯ್ಕೆಯಾಗಿದ್ದಾರೆ.

  ಸೌತ್ ಅಫ್ರಿಕಾ ವಿರುದ್ಧದದ ಮೂರು ಪಂದ್ಯಗಳ ಟಸ್ಟ್ ಸರಣಿಗೆ ಕೆಎಲ್ ರಾಹುಲ್ ಅವರನ್ನ ಉಪನಾಯಕನಾಗಿ ಬಿಸಿಸಿಐನ ಆಯ್ಕೆ ಸಮಿತಿ ಘೋಷಿಸಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (BCCI Secretary Jay Shah) ತಿಳಿಸಿದ್ದಾರೆ.

  ರೇಸ್​ನಲ್ಲಿದ್ದವು ಮೂವರ ಹೆಸರುಗಳು:

  ಈ ಮುಂಚೆ ಟೆಸ್ಟ್ ತಂಡದ ಉಪನಾಯಕನ ಸ್ಥಾನಕ್ಕೆ ಅಜಿಂಕ್ಯ ರಹಾನೆ, ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ಹೆಸರು ಹೆಚ್ಚಾಗಿ ಕೇಳಿಬಂದಿತ್ತು. ಆದರೆ, ಅಜಿಂಕ್ಯ ರಹಾನೆ ಅವರ ಸ್ಥಾನವೇ ಭದ್ರ ಇಲ್ಲದಿರುವುದರಿಂದ ಉಪನಾಯಕನಾಗಿ ಆಯ್ಕೆ ಆಗುವ ಸಾಧ್ಯತೆ ಕಡಿಮೆ ಇತ್ತು.

  ಇನ್ನು, ರಿಷಭ್ ಪಂತ್ ಅವರನ್ನ ಈಗಲೇ ಉಪನಾಯಕ ಸ್ಥಾನಕ್ಕೆ ಏರಿಸುವುದು ಸೂಕ್ತ ಅಲ್ಲ ಎಂಬ ಬಲವಾದ ಅಭಿಪ್ರಾಯಗಳು ಕೇಳಿಬಂದವು.

  ಇದನ್ನೂ ಓದಿ: ಸಾಂಪ್ರದಾಯಿಕ ಶೈಲಿ ಬಿಡದ ಫ್ಲವರ್ ಲಕ್ನೋ ಐಪಿಎಲ್ ತಂಡಕ್ಕೆ ಕೋಚ್; ಗಂಭೀರ್ ಮೆಂಟಾರ್

  ಎಲ್ಲಾ ಮಾದರಿ ಕ್ರಿಕೆಟ್​ನಲ್ಲಿ ಮಿಂಚುತ್ತಿರುವ ಕೆಎಲ್ ರಾಹುಲ್ ಅವರನ್ನೇ ವೈಸ್ ಕ್ಯಾಪ್ಟನ್ ಆಗಿ ಮಾಡಲು ಹೆಚ್ಚು ಒಲವು ವ್ಯಕ್ತವಾಗಿತ್ತೆನ್ನಲಾಗಿದೆ. ಅಲ್ಲದೇ ಟಿ20 ಮತ್ತು ಓಡಿಐ ತಂಡಗಳಲ್ಲೂ ಕೆಎಲ್ ರಾಹುಲ್ ಉಪನಾಯಕರಾಗುವ ಸಾಧ್ಯತೆ ದಟ್ಟವಾಗಿದೆ.

  ಮುಂದಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಅವರು ಟೆಸ್ಟ್ ತಂಡದ ನಾಯಕತ್ವ ತ್ಯಜಿಸಿದಲ್ಲಿ ಕೆಎಲ್ ರಾಹುಲ್ ಅವರನ್ನ ನಾಯಕನಾಗಿ ಬೆಳೆಸುವ ದೂರಾಲೋಚನೆ ಬಿಸಿಸಿಐನಲ್ಲಿ ಇದೆ ಎನ್ನಲಾಗುತ್ತಿದೆ.

  ಬೇಡಿಕೆಯಲ್ಲಿರುವ ಆಟಗಾರ ಕೆಎಲ್ ರಾಹುಲ್:

  ಕೆಎಲ್ ರಾಹುಲ್ ಅವರು ಸದ್ಯ ಭಾರಿ ಬೇಡಿಕೆಯಲ್ಲಿರುವ ಕ್ರಿಕೆಟಿಗನಾಗಿದ್ದಾರೆ. ಕಳೆದ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿ ಅವರು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಈ ಬಾರಿಯ ಐಪಿಎಲ್​ನಲ್ಲಿ ಅವರು ಲಕ್ನೋ ಫ್ರಾಂಚೈಸಿಗೆ ಸೇರಿಕೊಳ್ಳುವ ಸಾಧ್ಯತೆ ಇದೆ.

  ಇದನ್ನೂ ಓದಿ: Inspiring- ಟೀಮ್ ಇಂಡಿಯಾಗೆ ಸೇರಿ ವರ್ಷದಲ್ಲೇ ಊರಲ್ಲಿ ಕ್ರಿಕೆಟ್ ಗ್ರೌಂಡ್ ಕಟ್ಟಲು ಹೊರಟ ಬೌಲರ್

  ಸೀಮಿತ ಓವರ್​ಗಳ ಕ್ರಿಕೆಟ್​ನಷ್ಟು ಟೆಸ್ಟ್ ಕ್ರಿಕೆಟ್​ನಲ್ಲಿ ಕೆಎಲ್ ರಾಹುಲ್ ಯಶಸ್ಸು ಕಂಡಿಲ್ಲ ಎಂಬುದನ್ನು ಅಂಕಿ-ಅಂಶಗಳು ಹೇಳುತ್ತವೆ. ಆದರೆ, ಮುಂದಿನ ದಿನಗಳಲ್ಲಿ ಅವರು ಪರಿಪಕ್ವ ಟೆಸ್ಟ್ ಆಟಗಾರನಾಗಿ ಬೆಳೆಯುವ ಸಾಧ್ಯತೆ ಹೆಚ್ಚಿದೆ. 40 ಟೆಸ್ಟ್ ಪಂದ್ಯಗಳಲ್ಲಿ ಅವರು 2321 ರನ್​ಗಳನ್ನ ಗಳಿಸಿದ್ದಾರೆ. ರನ್ ಸರಾಸರಿ 35.16 ಇದೆ. ಆರು ಶತಕಗಳನ್ನ ಗಳಿಸಿದ್ದಾರೆ.

  ಓಡಿಐ ಕ್ರಿಕೆಟ್​ನಲ್ಲಿ ಕೆಎಲ್ ರಾಹುಲ್ ರನ್ ಸರಾಸರಿ 50ರ ಸಮೀಪ ಇದೆ. ಟಿ20 ಕ್ರಿಕೆಟ್​ನಲ್ಲಿ ಅವರು 40ಕ್ಕೂ ಹೆಚ್ಚು ರನ್ ಸರಾಸರಿ ಹೊಂದಿದ್ದಾರೆ.
  Published by:Vijayasarthy SN
  First published: