HOME » NEWS » Sports » CRICKET KL RAHUL REACTS ON COMPETITION FOR KEEPERS SPOT WITH RISHABH PANT ZP

KL Rahul: ಪಂತ್ ಜೊತೆ ಪೈಪೋಟಿ: ಈ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು?

ಅತ್ತ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಷಭ್ ಪಂತ್ ಭರ್ಜರಿ ಫಾರ್ಮ್​ನಲ್ಲಿದ್ದರೂ ಮೊದಲ ಏಕದಿನ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಇತ್ತ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ರಾಹುಲ್ ಯಶಸ್ವಿಯಾಗಿ ಮುಂದುವರೆಸುತ್ತಿದ್ದಾರೆ.

news18-kannada
Updated:March 26, 2021, 4:12 PM IST
KL Rahul: ಪಂತ್ ಜೊತೆ ಪೈಪೋಟಿ: ಈ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು?
rishab - kl rahul
  • Share this:
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸತತ ವೈಫಲ್ಯ ಹೊಂದಿದ್ದ ಕನ್ನಡಿಗ ಕೆಎಲ್ ರಾಹುಲ್ ಇದೀಗ ಫಾರ್ಮ್​ಗೆ ಮರಳಿದ್ದಾರೆ. ಆಂಗ್ಲರ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 4 ಫೋರ್ಸ್, 4 ಸಿಕ್ಸರ್​ಗಳೊಂದಿಗೆ 43 ಎಸೆತಗಳಲ್ಲಿ ಅಜೇಯ 62 ರನ್ ಬಾರಿಸುವ ಮೂಲಕ ಕೆಎಲ್​ಆರ್​ ಮರಳಿ ಲಯ ಕಂಡುಕೊಂಡಿದ್ದರು. ಅಲ್ಲದೆ ಪ್ರಸ್ತುತ ಟೀಮ್ ಇಂಡಿಯಾ ಏಕದಿನ ತಂಡದ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ಕೂಡ ವಹಿಸಿಕೊಂಡಿದ್ದಾರೆ.

ಅತ್ತ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಷಭ್ ಪಂತ್ ಭರ್ಜರಿ ಫಾರ್ಮ್​ನಲ್ಲಿದ್ದರೂ ಮೊದಲ ಏಕದಿನ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಇತ್ತ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ರಾಹುಲ್ ಯಶಸ್ವಿಯಾಗಿ ಮುಂದುವರೆಸುತ್ತಿದ್ದಾರೆ. ಇದರಿಂದಾಗಿ ರಾಹುಲ್-ರಿಷಭ್ ನಡುವೆ ತಂಡದಲ್ಲಿ ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದೆ ಎಂದು ಬಿಂಬಿಸಲಾಗಿತ್ತು.

ಈ ಬಗ್ಗೆ ಮಾತನಾಡಿರುವ ಕೆಎಲ್ ರಾಹುಲ್, ನೀವು ಭಾರತ ತಂಡದಲ್ಲಿ ಸ್ಥಾನ ಪಡೆದರೆ ಅಲ್ಲಿ ದೊಡ್ಡ ಮಟ್ಟದ ಸ್ಪರ್ಧೆಯಂತು ಇದ್ದೇ ಇರುತ್ತೆ. ಇಲ್ಲಿ ಅವಕಾಶ ಪಡೆದು ಈ ಸ್ಥಾನ ನನ್ನದು ಎಂದು ಆರಾಮವಾಗಿ ಕೂರುವಂತಿಲ್ಲ. ಏಕೆಂದರೆ ಟೀಮ್ ಇಂಡಿಯಾದಲ್ಲಿ ಹಲವು ಪ್ರತಿಭಾವಂತ ಆಟಗಾರರಿದ್ದಾರೆ. ಇದು ಒಳ್ಳೆಯ ವಿಚಾರ ಕೂಡ. ಅದರ ಜೊತೆಗೆ ತಂಡದಲ್ಲಿ ಸ್ಥಾನ ಪಡೆದಾಗ, ಅದನ್ನು ಉಳಿಸಿಕೊಳ್ಳಲು ಪ್ರತಿ ದಿನವೂ ಸಂಪೂರ್ಣ ಸಾಮರ್ಥ್ಯವನ್ನು ಪ್ರದರ್ಶಿಸಲು ಪ್ರಯತ್ನಿಸುತ್ತಲೇ ಇರುತ್ತೀರಿ ಎಂದು ಎಂದು ರಾಹುಲ್ ಹೇಳಿದ್ದಾರೆ.

ಈ ಮೂಲಕ ತಂಡದಲ್ಲಿ ಸ್ಥಾನ ಸಿಕ್ಕ ತಕ್ಷಣ ನನ್ನ ಸ್ಥಾನ ಭದ್ರವಾಗಿದೆ ಎಂದುಕೊಳ್ಳುವ ಹಾಗಿಲ್ಲ ಎಂದಿರುವ ಕೆಎಲ್ ರಾಹುಲ್, ಪರೋಕ್ಷವಾಗಿ ರಿಷಭ್ ಪಂತ್ ಜೊತೆ ಸ್ಪರ್ಧಾತ್ಮಕ ಪೈಪೋಟಿ ಇರುವುದನ್ನು ಒಪ್ಪಿಕೊಂಡಿದ್ದಾರೆ.
Published by: zahir
First published: March 26, 2021, 4:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories