ರಣಜಿ ಸೆಮಿಫೈನಲ್​ನಲ್ಲಿ ಕರ್ನಾಟಕಕ್ಕೆ ರಾಹು ದೆಸೆ

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಫೆ. 29ರಂದು ನಡೆಯಲಿರುವ ಸೆಮಿ ಫೈನಲ್ ಪಂದ್ಯಕ್ಕೆ ಭರ್ಜರಿ ತಯಾರಿಗಳು ಆರಂಭವಾಗಿದ್ದು, ಇದರೊಂದಿಗೆ ರಾಹುಲ್ ಸೇರ್ಪಡೆ ತಂಡ ಬಲವನ್ನು ಇಮ್ಮಡಿಗೊಳಿಸಿದೆ.

zahir | news18-kannada
Updated:February 25, 2020, 3:02 PM IST
ರಣಜಿ ಸೆಮಿಫೈನಲ್​ನಲ್ಲಿ ಕರ್ನಾಟಕಕ್ಕೆ ರಾಹು ದೆಸೆ
Rahul
  • Share this:
ಕರ್ನಾಟಕ ಕ್ರಿಕೆಟ್ ತಂಡ ಈ ಬಾರಿಯ ರಣಜಿ ಟ್ರೋಫಿ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದೆ. ಸೆಮಿ ಫೈನಲ್​ನಲ್ಲಿ ಕರ್ನಾಟಕ ಬಂಗಾಳ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕಾಗಿ ತಂಡವನ್ನು ಪ್ರಕಟಿಸಲಾಗಿದ್ದು, ಕೆ.ಎಲ್ ರಾಹುಲ್ ಮತ್ತೆ ತಂಡವನ್ನು ಕೂಡಿಕೊಂಡಿದ್ದಾರೆ.

ಕಳೆದ ಕೆಲ ತಿಂಗಳಿಂದ ಟೀಂ ಇಂಡಿಯಾ ಭಾಗವಾಗಿರುವ ಕೆ.ಎಲ್ ರಾಹುಲ್ ಮತ್ತೆ ತಂಡಕ್ಕೆ ಮರಳಿರುವುದು ಕರ್ನಾಟಕದ ಬಲ ಹೆಚ್ಚಿಸಿದೆ. ಇನ್ನು ರಾಹುಲ್​ಗೆ ತಂಡದಲ್ಲಿ ಸ್ಥಾನ ನೀಡಲು ಯುವ ಆಟಗಾರ ಪವನ್ ದೇಶಪಾಂಡೆ ಅವರನ್ನು ಹೊರಗಿಡಲಾಗಿದೆ. ಉಳಿದಂತೆ ಕ್ವಾರ್ಟರ್ ಫೈನಲ್ ಆಡಿರುವ ತಂಡವೇ ಸೆಮಿ ಫೈನಲ್​ನಲ್ಲೂ ಕಣಕ್ಕಿಳಿಯಲಿದೆ.

ಸೋಮವಾರ ನಡೆದ ಕ್ವಾರ್ಟರ್​ಫೈನಲ್ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ವಿರುದ್ಧ ಕರ್ನಾಟಕ 167 ರನ್​ಗಳಿಂದ ಭರ್ಜರಿ ಗೆಲುವು ದಾಖಲಿಸಿತು. ಗೆಲ್ಲಲು 331 ರನ್ ಗುರಿ ಪಡೆದ ಕಾಶ್ಮೀರಿಗರು ಎರಡನೇ ಇನ್ನಿಂಗ್ಸಲ್ಲಿ 163 ರನ್​ಗೆ ಆಲೌಟ್ ಆದರು. ಕೆ. ಗೌತಮ್ 7 ವಿಕೆಟ್ ಕಬಳಿಸಿ ಕರ್ನಾಟಕದ ಗೆಲುವನ್ನು ಸುಗಮಗೊಳಿಸಿದರು.

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಫೆ. 29ರಂದು ನಡೆಯಲಿರುವ ಸೆಮಿ ಫೈನಲ್ ಪಂದ್ಯಕ್ಕೆ ಭರ್ಜರಿ ತಯಾರಿಗಳು ಆರಂಭವಾಗಿದ್ದು, ಇದರೊಂದಿಗೆ ರಾಹುಲ್ ಸೇರ್ಪಡೆ ತಂಡ ಬಲವನ್ನು ಇಮ್ಮಡಿಗೊಳಿಸಿದೆ.

ಕರ್ನಾಟಕ ತಂಡ ಇಂತಿದೆ:
ಕರುಣ್‌ ನಾಯರ್‌ (ನಾಯಕ), ಕೆ.ಎಲ್‌.ರಾಹುಲ್‌, ಆರ್‌.ಸಮರ್ಥ್, ದೇವದತ್ತ ಪಡಿಕ್ಕಲ್‌, ಮನೀಷ್‌ ಪಾಂಡೆ, ಎಸ್‌.ಶರತ್‌, ಪ್ರಸಿದ್ಧ್ ಎಂ.ಕೃಷ್ಣ, ಜೆ.ಸುಚಿತ್‌, ಪ್ರತೀಕ್‌ ಜೈನ್‌, ರೋನಿತ್‌ ಮೋರೆ, ಬಿ.ಆರ್‌.ಶರತ್‌, ಶ್ರೇಯಸ್‌ ಗೋಪಾಲ್‌, ಕೆ.ಗೌತಮ್‌, ಅಭಿಮನ್ಯು ಮಿಥುನ್‌, ಕೆ.ವಿ.ಸಿದ್ಧಾರ್ಥ್.

ಇದನ್ನೂ ಓದಿ: ದ್ವಿಶತಕ ಸಿಡಿಸಿ ವಿಚಿತ್ರವಾಗಿ ಸಂಭ್ರಮಿಸಿದ ಬಾಂಗ್ಲಾ ಕ್ರಿಕೆಟಿಗ
First published: February 25, 2020, 3:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading