ನಿಟ್ಟುಸಿರು ಬಿಟ್ಟ ಟೀಂ ಇಂಡಿಯಾ; ತಂಡದಲ್ಲಿ ಕಾಡುತ್ತಿದ್ದ ಸಮಸ್ಯೆಗೆ ಕನ್ನಡಿಗನಿಂದ ಪರಿಹಾರ

ICC Cricket World Cup 2019: ಕಾರ್ಡಿಫ್​ನಲ್ಲಿ ನಡೆದ ಪಂದ್ಯದಲ್ಲಿ ಕೆ. ಎಲ್ ರಾಹುಲ್ ಸಿಕ್ಕ ಅವಕಾಶವನ್ನ ಕೈ ಚೆಲ್ಲಲಿಲ್ಲ. ಮೊದಲ ಅಭ್ಯಾಸ ಪಂದ್ಯದಲ್ಲಿ ಮುಗ್ಗರಿಸಿದರೂ ರಾಹುಲ್​ಗೆ ಮತ್ತೆ ನಂಬರ್ 4 ಸ್ಥಾನದಲ್ಲಿ ಅವಕಾಶ ನೀಡಲಾಯಿತು.

Vinay Bhat | news18
Updated:May 31, 2019, 9:17 PM IST
ನಿಟ್ಟುಸಿರು ಬಿಟ್ಟ ಟೀಂ ಇಂಡಿಯಾ; ತಂಡದಲ್ಲಿ ಕಾಡುತ್ತಿದ್ದ ಸಮಸ್ಯೆಗೆ ಕನ್ನಡಿಗನಿಂದ ಪರಿಹಾರ
ಕೆ ಎಲ್ ರಾಹುಲ್ (ಟೀಂ ಇಂಡಿಯಾ ಕ್ರಿಕೆಟಿಗ)
  • News18
  • Last Updated: May 31, 2019, 9:17 PM IST
  • Share this:
ಬೆಂಗಳೂರು (ಮೇ. 31): ವಿಶ್ವಕಪ್​​ಗೂ ಮೊದಲೇ ಟೀಂ ಇಂಡಿಯಾಕ್ಕೆ ಎದುರಾಗಿದ್ದು ಅದೊಂದೇ ಪ್ರಶ್ನೆ, ನಂಬರ್ 4 ಸ್ಥಾನ​. ವಿಶ್ವಕಪ್​ಗಾಗಿ ತಂಡವನ್ನ ತಯಾರು ಮಾಡುತ್ತಿರುವಾಗ ನಾಯಕ ವಿರಾಟ್ ಕೊಹ್ಲಿ, ಕೋಚ್ ರವಿಶಾಸ್ತ್ರಿ ಇನ್ನಿಲ್ಲದಂತೆ ತಲೆಕೆಡಿಸಿಕೊಂಡಿದ್ದರು. ನಂಬರ್​ 4ರಲ್ಲಿ ಯಾರನ್ನ ಆಡಿಸಬೇಕು ಎಂದು ಯೋಚಿಸುತ್ತಿದ್ದರು. ಆ ವೇಳೆ 2018ರ ಐಪಿಎಲ್ ಆವೃತ್ತಿಯಲ್ಲಿ ಬ್ಯಾಟಿಂಗ್​ನಲ್ಲಿ ಮಿಂಚಿದ್ದ ಅಂಬಟಿ ರಾಯುಡುರನ್ನ ಕಣಕ್ಕಿಳಿಸಿ ಪ್ರಯೋಗ ನಡೆಸಲಾಯಿತು.

ವಿಶ್ವಕಪ್​​ ಸಮೀಪದವರೆಗೂ ಭಾರತದ ಮಧ್ಯಮ ಕ್ರಮಾಂಕದಲ್ಲಿ ರಾಯುಡುಗೆ ಸ್ಥಾನ ಫಿಕ್ಸ್​ ಎಂದೇ ನಂಬಲಾಗಿತ್ತು. ಆದರೆ ರಾಯುಡು ಬರ ಬರುತ್ತಾ ಫಾರ್ಮ್​ ವೈಫಲ್ಯ ಕಂಡರು. ಇದು 2019ರ ಐಪಿಎಲ್​ ಆವೃತ್ತಿಯಲ್ಲಿ ಮುಂದುವರಿದಿತ್ತು. ಹೀಗಾಗೆ ಟೀಂ ಇಂಡಿಯಾದಲ್ಲಿ ನಂ 4 ಸ್ಥಾನದಲ್ಲಿ ಹಲವರು ಬಂದು ಹೋದರೂ ಸಮಸ್ಯೆಗೆ ಪರಿಹಾರ ಸಿಗಲಿಲ್ಲ.

ಈ ಮಧ್ಯೆ ನ್ಯೂಜಿಲೆಂಡ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತದ ಪರ ಕೆ. ಎಲ್ ರಾಹುಲ್ ನಂ 4 ಸ್ಥಾನದಲ್ಲಿ ಕಣಕ್ಕಿಳಿದು ಎಲ್ಲರಿಗೂ ಶಾಕ್ ನೀಡಿದರು. ಕೋಚ್​ ಹಾಗೂ ಕ್ಯಾಪ್ಟನ್​ ಸೆಲೆಕ್ಷನ್​​ ಬಗ್ಗೆ ಚರ್ಚೆಗಳೇ ಶುರುವಾದ್ದವು. ವಿಜಯ್ ಶಂಕರ್ ಎಂದು ಹೇಳಿ ರಾಹುಲ್​ಗೆ ಯಾಕೆ ಅವಕಾಶ ನೀಡಲಾಗಿದೆ ಎಂದೇ ಅನೇಕರು ಟೀಕಿಸಿದರು. ಇದರ ಜೊತೆಗೆ ರಾಹುಲ್ ಬೇರೆ ಕೊಟ್ಟ ಅವಕಾಶದಲ್ಲಿ ಎಡವಿದರು.

ಇದನ್ನೂ ಓದಿ: Cricket World Cup 2019, WI vs PAK: ಮೊದಲ ಪಂದ್ಯದಲ್ಲೇ ಪಾಕ್​ಗೆ ಭಾರೀ ಮುಖಭಂಗ; ವಿಂಡೀಸ್​ಗೆ 7 ವಿಕೆಟ್​ಗೆ ಜಯ

ಆದರೆ ಕಾರ್ಡಿಫ್​ನಲ್ಲಿ ನಡೆದ ಪಂದ್ಯದಲ್ಲಿ ಕೆ. ಎಲ್ ರಾಹುಲ್ ಸಿಕ್ಕ ಅವಕಾಶವನ್ನ ಕೈ ಚೆಲ್ಲಲಿಲ್ಲ. ಮೊದಲ ಅಭ್ಯಾಸ ಪಂದ್ಯದಲ್ಲಿ ಮುಗ್ಗರಿಸಿದರೂ ರಾಹುಲ್​ಗೆ ಮತ್ತೆ ನಂಬರ್ 4 ಸ್ಥಾನದಲ್ಲಿ ಅವಕಾಶ ನೀಡಲಾಯಿತು. ಆರಂಭಿಕರಿಬ್ಬರು ಬಹುಬೇಗ ಪೆವಿಲಿಯನ್ ಸೇರಿಕೊಂಡಾಗ ರಾಹುಲ್ ಅದ್ಭುತ ಆಟವಾಡಿ, ಸೆಂಚುರಿ ಸಿಡಿಸಿದರು. 99 ಎಸೆತಗಳಲ್ಲಿ 108ರನ್ ಕಲೆಹಾಕಿದ ಕನ್ನಡಿಗ, ಭಾರತಕ್ಕೆ ಬಹುದಿನದಿಂದ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಹುಡುಕಿಕೊಟ್ಟರು.

ಒಟ್ಟಿನಲ್ಲಿ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದಲ್ಲಿದ್ದ ಬಹುದಿನದ ದೊಡ್ಡ ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಿದೆ. ಜೂನ್ 5 ರಂದು ದ. ಆಫ್ರಿಕಾ ವಿರುದ್ಧ ಭಾರತ ತನ್ನ ಅಭಿಯಾನ ಆರಂಭಿಸಲಿದ್ದು, ಕೆ.ಎಲ್ ರಾಹುಲ್​ ಪ್ಲೇಯಿಂಗ್ ಇಲೆವೆನ್​​ನಲ್ಲಿ ಸ್ಥಾನ ಗಿಟ್ಟಿಸುವುದರ ಜೊತೆಗೆ ನಂಬರ್ 4 ಸ್ಥಾನದಲ್ಲಿ ಆಡುವುದು ಬಹುತೇಕ ಪಕ್ಕಾ ಆಗಿದೆ.

First published:May 31, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...