KL Rahul: ವಿರಾಟ್ ಕೊಹ್ಲಿ ನಾಯಕತ್ವವನ್ನು ಹಾಡಿ ಹೊಗಳಿದ ಕೆಎಲ್ ರಾಹುಲ್

ಪ್ರತಿಯೊಬ್ಬರನ್ನು ಪ್ರೇರೇಪಿಸಿ ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಇತರೆ 10 ಆಟಗಾರರನ್ನು ಪ್ರೇರೇಪಿಸುವ ಅದ್ಭುತ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ರಾಹುಲ್ ಕೊಹ್ಲಿಯ ನಾಯಕತ್ವವನ್ನು ಹೊಗಳಿದ್ದಾರೆ.

KLR-VK

KLR-VK

 • Share this:
  ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಅಪಸ್ವರಗಳು ಕೇಳಿ ಬರುತ್ತಿವೆ. ಆದರೆ ಕೊಹ್ಲಿ ಪರವಹಿಸಿ ಯಾರೂ ಕೂಡ ಮಾತನಾಡಿರಲಿಲ್ಲ. ಆದರೀಗ ಟೀಮ್ ಇಂಡಿಯಾ ಮತ್ತೋರ್ವ ಆಟಗಾರ ಇದೀಗ ಕೊಹ್ಲಿ ನಾಯಕತ್ವವನ್ನು ಹಾಡಿ ಹೊಗಳಿದ್ದಾರೆ. ಅವರು ಮತ್ಯಾರೂ ಅಲ್ಲ ಕನ್ನಡಿಗ ಕೆಎಲ್ ರಾಹುಲ್ ಎಂಬುದು ವಿಶೇಷ.

  ಹೌದು, ಒಂದೆಡೆ ಕೊಹ್ಲಿ ನಾಯಕತ್ವದ ಬಗ್ಗೆ ಟೀಕೆಗಳು ಕೇಳಿ ಬರಲಾರಂಭಿಸಿದರೆ, ಇತ್ತ ಕೆಎಲ್ ರಾಹುಲ್ ವಿರಾಟ್ ಕೊಹ್ಲಿ ವಿಭಿನ್ನ ನಾಯಕ ಎಂದು ಹೊಗಳಿದ್ದಾರೆ. ಅವರು ಪ್ರತಿಸಲನೂ ತಂಡಕ್ಕಾಗಿ ಶೇ.200 ರಷ್ಟು ಉತ್ಸಾಹದಿಂದ ಕೆಲಸ ಮಾಡುತ್ತಾರೆ. ನಮ್ಮೆಲ್ಲರ ಉತ್ಸಾಹ 100 ರಷ್ಟಿದ್ದರೆ, ಕೊಹ್ಲಿ 200ರಷ್ಟು ಉತ್ಸಾಹದೊಂದಿಗೆ ತಂಡದ ಗೆಲುವಿಗೆ ಶ್ರಮಿಸುತ್ತಾರೆ ಎಂದು ರಾಹುಲ್ ತಿಳಿಸಿದ್ದಾರೆ.

  ವಿರಾಟ್ ಕೊಹ್ಲಿ ಅವರೊಂದಿಗೆ ಮತ್ತು ಅವರ ನಾಯಕತ್ವದಲ್ಲಿ ಆಡುವುದು ವಿಭಿನ್ನವಾಗಿರುತ್ತದೆ. ಅವರು ಡಿಫೆರೆಂಟ್ ನಾಯಕ. ತುಂಬಾ ಭಾವೋದ್ರಿಕ್ತ ವ್ಯಕ್ತಿ. ಪ್ರತಿಯೊಬ್ಬರನ್ನು ಪ್ರೇರೇಪಿಸಿ ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಇತರೆ 10 ಆಟಗಾರರನ್ನು ಪ್ರೇರೇಪಿಸುವ ಅದ್ಭುತ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ರಾಹುಲ್ ಕೊಹ್ಲಿಯ ನಾಯಕತ್ವವನ್ನು ಹೊಗಳಿದ್ದಾರೆ.

  ಕೊಹ್ಲಿ ತಂಡದ ಎಲ್ಲಾ ಆಟಗಾರರಿಂದಲೂ ಅತ್ಯುತ್ತಮವಾದದ್ದನ್ನು ಹೊರ ತರಲು ಪ್ರೋತ್ಸಾಹ ನೀಡುತ್ತಾರೆ. ಅವರ ನಾಯಕತ್ವದಲ್ಲಿ ಆಡುವುದು ಒಂದು ರೀತಿಯ ವಿಭಿನ್ನ ಅನುಭವ ಎಂದು ಕೆಎಲ್ ರಾಹುಲ್ ಹೊಗಳಿದ್ದಾರೆ. ಒಟ್ಟಿನಲ್ಲಿ ನಾಯಕತ್ವದ ಟೀಕೆಗಳ ನಡುವೆ ಕೊಹ್ಲಿ ನಾಯಕತ್ವನ್ನು ರಾಹುಲ್ ಹೊಗಳುವ ಗಮನ ಸೆಳೆದಿದ್ದಾರೆ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
  Published by:zahir
  First published: