KL Rahul: ಕೊನೆಗೂ ತನ್ನ ಗರ್ಲ್​ಫ್ರೆಂಡ್ ಹೆಸರನ್ನು ಬಹಿರಂಗಪಡಿಸಿದ ಕೆಎಲ್ ರಾಹುಲ್..!

ಹೀಗೆ ತೆರಳುವ ಮುನ್ನ ಲಾಜಿಸ್ಟಿಕ್ಸ್ ವಿಭಾಗ ಆಟಗಾರ ಜೊತೆಗೆ ಬರುವ ಪತ್ನಿ ಅಥವಾ ಗೆಳತಿಯರ ಹೆಸರಿನ ಪಟ್ಟಿಯನ್ನು ಕೇಳಿತ್ತು.

KL Rahul- Athiya Shetty

KL Rahul- Athiya Shetty

  • Share this:
    ಬಾಲಿವುಡ್​ ಹಾಗೂ ಕ್ರಿಕೆಟಿಗೂ ಅವಿನಾಭಾವ ಸಂಬಂಧವಿದೆ. ಅದಕ್ಕೆ ಸಾಕ್ಷಿ ಎಂಬಂತೆ ಆಗಾಗ್ಗೆ ಟೀಂ ಇಂಡಿಯಾದ ಆಟಗಾರರ ಹೆಸರುಗಳು ಬಾಲಿವುಡ್ ನಟಿಮಣಿಯರೊಂದಿಗೆ ತಳುಕು ಹಾಕಿಕೊಳ್ಳುತ್ತವೆ. ಇದೀಗ ಮತ್ತೊಮ್ಮೆ ಭಾರತ ತಂಡ ಆರಂಭಿಕ ಆಟಗಾರ ಕನ್ನಡಿಗ ಕೆ.ಎಲ್ ರಾಹುಲ್ ಹೆಸರು ಖ್ಯಾತ ನಟನ ಮಗಳೊಂದಿಗೆ ಕೇಳಿ ಬಂದಿದೆ.​

    ಅವರು ಮತ್ಯಾರು ಅಲ್ಲ ಸುನೀಲ್ ಶೆಟ್ಟಿ ಮಗಳು ಆತಿಯಾ ಶೆಟ್ಟಿ. ಈ ಹಿಂದೆ ಹಲವು ಬಾರಿ ಆತಿಯಾ ಜೊತೆ ತಮ್ಮ ಹೆಸರು ಕೇಳಿ ಬಂದರೂ ರಾಹುಲ್ ಅದನ್ನು ನಿರಾಕರಿಸುತ್ತಾ ಬಂದಿದ್ದರು. ಆದರೀಗ ನನ್ನ ಜೊತೆಗಾರ್ತಿ ಅನ್ನುವ ಮೂಲಕ ರಾಹುಲ್ ಗರ್ಲ್​ಫ್ರೆಂಡ್ ಆತಿಯಾ ಎಂಬುದು ಕನ್ಫರ್ಮ್ ಆಗಿದೆ.

    ಹೌದು, ಜೂನ್​ ತಿಂಗಳಲ್ಲಿ ಟೀಮ್ ಇಂಡಿಯಾ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್​ಗೆ ತೆರಳಿದೆ. ಇಂಗ್ಲೆಂಡ್ ಪ್ರವಾಸ ಸರಣಿ ಸುದೀರ್ಘವಾಗಿದ್ದರಿಂದ ಅಲ್ಲಿಗೆ ಭಾರತೀಯ ತಂಡ ತೆರಳುವಾಗ ಬಿಸಿಸಿಐ ಆಟಗಾರರು ತಮ್ಮ ಸಂಗಾತಿಯನ್ನು ಕರೆದುಕೊಂಡು ಹೋಗಲು ಅನುಮತಿ ನೀಡಿತ್ತು. ಇದಕ್ಕಾಗಿ ಮೊದಲೇ ಹೆಸರನ್ನು ಕೂಡ ನೊಂದಾಯಿಸುವಂತೆ ತಿಳಿಸಿತ್ತು.

    ಹೀಗೆ ತೆರಳುವ ಮುನ್ನ ಲಾಜಿಸ್ಟಿಕ್ಸ್ ವಿಭಾಗ ಆಟಗಾರ ಜೊತೆಗೆ ಬರುವ ಪತ್ನಿ ಅಥವಾ ಗೆಳತಿಯರ ಹೆಸರಿನ ಪಟ್ಟಿಯನ್ನು ಕೇಳಿತ್ತು. ಈ ವೇಳೆ ಕೆಎಲ್ ರಾಹುಲ್ ಆತಿಯಾ ಶೆಟ್ಟಿಯನ್ನು ತನ್ನ ಪಾಟರ್ನರ್​ ಎಂದು ಹೆಸರಿಸಿರುವುದು ಬಹಿರಂಗವಾಗಿದೆ. ಅಷ್ಟೇ ಅಲ್ಲದೆ ಕೆಎಲ್ ರಾಹುಲ್ ಹಾಗೂ ಆತಿಯಾ ಶೆಟ್ಟಿ ಇಂಗ್ಲೆಂಡ್​ನಲ್ಲಿ ಜೊತೆಯಾಗಿ ರೋಮ್ಯಾಂಟಿಕ್ ಮೂಡ್​ನಲ್ಲಿದ್ದಾರೆ.

    (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
    Published by:zahir
    First published: