• Home
 • »
 • News
 • »
 • sports
 • »
 • KL Rahul: ಪುಟ್ಟ ಮಗುವಿನ ಚಿಕಿತ್ಸೆಗೆ ನೆರವು; ಹೃದಯ ವೈಶಾಲ್ಯತೆ ಮೆರೆದ ಕೆ.ಎಲ್ ರಾಹುಲ್

KL Rahul: ಪುಟ್ಟ ಮಗುವಿನ ಚಿಕಿತ್ಸೆಗೆ ನೆರವು; ಹೃದಯ ವೈಶಾಲ್ಯತೆ ಮೆರೆದ ಕೆ.ಎಲ್ ರಾಹುಲ್

ಕೆ.ಎಲ್ ರಾಹುಲ್

ಕೆ.ಎಲ್ ರಾಹುಲ್

KL Rahul Help Child: ವರದ್ ನಲ್ವಾಡೆ ಎಂಬ 11 ವರ್ಷದ ಬಾಲಕನಿಗೆ ಅಪ್ಲಾಸ್ಟಿಕ್ ಅನೀಮಿಯಾ ಎಂಬ ಮೂಳೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ, ಈತನಿಗೆ ಇದೀಗ ರಾಹುಲ್ 31 ಲಕ್ಷ ರೂಪಾಯಿಗಳ ನೆರವಿನ ಹಸ್ತ ಚಾಚಿದ್ದಾರೆ.

 • Share this:

  ಟೀಂ ಇಂಡಿಯಾದ(Team India) ಭವಿಷ್ಯದ ನಾಯಕ(Captain) ಅಂತಾನೇ ಬಿಂಬಿತವಾಗುತ್ತಿರೋ ಕನ್ನಡಿಗ(Kannadiga) ಕೆಎಲ್ ರಾಹುಲ್(KL Rahul) ಸದ್ಯ ಮೂರು ಮಾದರಿ ಕ್ರಿಕೆಟ್‍ನಲ್ಲಿ(Cricket) ಟೀಂ ಇಂಡಿಯಾಗೆ ಆಧಾರ ಸಂಭ್ತ, ಯಾವುದೇ ಆರ್ಡರ್ ನಲ್ಲಿ ಆದ್ರೂ ತಂಡಕ್ಕೆ ನೆರವಾಗುವ ಕೆಎಲ್ ರಾಹುಲ್ ಮುಂದಿನ ದಿನಗಳಲ್ಲಿ ಟೀಂ ಇಂಡಿಯಾದ ನಾಯಕನಾಗಿ ಮಿಂಚಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.. ಮೈದಾನದಲ್ಲಿ(Field) ಸದಾ ಅಬ್ಬರಿಸುವ ಕೆ ಎಲ್ ರಾಹುಲ್, ಸಾಕಷ್ಟು ಸುದ್ದಿಯಲ್ಲಿರುತ್ತಾರೆ.. ಸದ್ಯ ಮೈದಾನದಿಂದ ಹೊರಗೆ ಕೆಎಲ್ ರಾಹುಲ್ ಮಾಡಿರುವ ಸಮಾಜಮುಖಿ ಕಾರ್ಯವೊಂದು ಕ್ರಿಕೆಟ್ ಅಂಗಳದಲ್ಲಿ ಮಾತ್ರವಲ್ಲ ರಾಷ್ಟ್ರಾದ್ಯಂತ ಮೆಚ್ಚುಗೆಗೆ ಕಾರಣವಾಗಿದೆ.


  ಉದಯೋನ್ಮುಖ ಕ್ರಿಕೆಟಿಗನ ಬಾಳಲ್ಲಿ ನೆರವಾದ ರಾಹುಲ್


  ಅನಾರೋಗ್ಯ ಸಮಸ್ಯೆಗೆ ತುತ್ತಾಗಿ ಆರ್ಥಿಕ ಸಂಕಷ್ಟದಿಂದ ಚಿಕಿತ್ಸೆ ಪಡೆಯಲಾಗದೇ ಪರಿತಪಿಸುತ್ತಿದ್ದ 11 ವರ್ಷದ ಉದಯೋನ್ಮುಖ ಕ್ರಿಕೆಟಿಗನಿಗೆ ಆರ್ಥಿಕ ನೆರವು ನೀಡುವ ಮೂಲಕ ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಮಾದರಿಯಾಗಿದ್ದಾರೆ. ಕೆಎಲ್ ರಾಹುಲ್ ಅವರು 11 ವರ್ಷದ ಉದಯೋನ್ಮುಖ ಕ್ರಿಕೆಟಿಗನಿಗೆ ತುರ್ತು ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ (ಬಿಎಂಟಿ) ಚಿಕಿತ್ಸೆಗೆ ಅಗತ್ಯವಿದ್ದ ಹಣವನ್ನು ತಾವೇ ನೀಡುವ ಮೂಲಕ ಬಾಲಕ ಚಿಕಿತ್ಸೆಗೆ ನೆರವು ನೀಡಿದ್ದಾರೆ


  ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಭಾವುಕ ಪತ್ರ ಬರೆದ ಯುವರಾಜ್ ಸಿಂಗ್, ಗೋಲ್ಡನ್ ಶೂ ಗಿಫ್ಟ್


  31 ಲಕ್ಷ ಸಹಾಯ ಮಾಡಿ ರಾಹುಲ್ ಮಾನವೀಯತೆ


  ವರದ್ ನಲ್ವಾಡೆ ಎಂಬ 11 ವರ್ಷದ ಬಾಲಕಿನಿಗೆ ಅಪ್ಲಾಸ್ಟಿಕ್ ಅನೀಮಿಯಾ ಎಂಬ ಮೂಳೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ, ಈತನಿಗೆ ಇದೀಗ ರಾಹುಲ್ 31 ಲಕ್ಷ ರೂಪಾಯಿಗಳ ನೆರವಿನ ಹಸ್ತ ಚಾಚಿದ್ದಾರೆ. ಭವಿಷ್ಯದಲ್ಲಿ ಕ್ರಿಕೆಟ್ ಆಗಬೇಕು ಟೀಂ ಇಂಡಿಯಾಗೆ ಆಡಬೇಕು ಅನ್ನೋ ಕನಸು ಕಾಣುತ್ತಿದ್ದ 11ರ ಬಾಲಕನಿಗೆ ಮೂಳೆ ಸಂಬಧಿಸಿದ ಕಾಯಿಲೆಯಿಂದಾಗಿ ಆತನ ಕನಸು ನನಸಾಗೋದಿಲ್ಲ ಅನ್ನೋ ಹಾಗೇ ಆಗಿತ್ತು.


  ಕ್ರಿಕೆಟರ್ ಆಗಬೇಕು ಅನ್ನೋ ಬಯಕೆಯಿಂದ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದ ವರದ್‍ಗೆ ಈ ಅಪರೂಪದ ಕಾಯಿಲೆ ಬಾದಿಸಿದ್ದು, ಮಧ್ಯಮ ವರ್ಗದ ಕುಟುಂಬವಾಗಿದ್ದರಿಂದ ಈತನ ಚಿಕಿತ್ಸೆ ತಂದೆ ಫಿಎಫ್ ಹಣವನ್ನು ಸಹ ಬಳಕೆ ಮಾಡಿದ್ರು, ಜೊತೆಗೆ ಎನ್‍ಜಿಒ ಮೂಲಕ ವರದ್ ಚಿಕಿತ್ಸೆಗೆ ಹಣ ಸಂಗ್ರಹ ಮಾಡಲು ಮುಂದಾಗಿದ್ರು.


  ರಾಹುಲ್ ಸಹಾಯದಿಂದ ಬಾಲಕನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ


  ರಾಹುಲ್ ಅವರು ಅಗತ್ಯ ಸಂದರ್ಭದಲ್ಲಿ ಮಾಡಿದ ಸಹಾಯದಿಂದ ವರದ್ ಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಪ್ರಸ್ತುತ ಚೇತರಿಕೆಯ ಹಂತದಲ್ಲಿದ್ದಾರೆ. ದೇಣಿಗೆ ಕುರಿತು ಮಾತನಾಡಿದ ರಾಹುಲ್, "ವರದ್ ಅವರ ಸ್ಥಿತಿಯ ಬಗ್ಗೆ ನನಗೆ ತಿಳಿದಾಗ, ನನ್ನ ತಂಡವು ಗಿವ್‌ಇಂಡಿಯಾದೊಂದಿಗೆ ಸಂಪರ್ಕ ಸಾಧಿಸಿತ್ತು. ಇದರಿಂದ ನಾವು ಅವರಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಬಹುದು ಎನ್ನುವುದನ್ನು ಅರಿತುಕೊಂಡೆವು" ಎಂದು ರಾಹುಲ್ ಹೇಳಿದ್ದಾರೆ.


  ವರದ್ ಕನಸುಗಳನ್ನು ನನಸಾಗಿಸಿಕೊಳ್ಳಲಿ ಎಂದ ರಾಹುಲ್


  "ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಮತ್ತು ಅವರು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ನನಗೆ ಖುಷಿಯಾಗಿದೆ. ವರದ್ ಅವರು ಬೇಗನೆ ಚೇತರಿಸಿಕೊಂಡು ಕ್ರಿಕೆಟ್ ಗೆ ಮರಳುತ್ತಾರೆ ಮತ್ತು ಅವರ ಕನಸುಗಳನ್ನು ನನಸಾಗಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ನನ್ನ ಕೊಡುಗೆಯು ಹೆಚ್ಚು ಹೆಚ್ಚು ಜನರಿಗೆ ಸಹಾಯ ಮಾಡಲು ಪ್ರೇರೇಪಣೆ ನೀಡುತ್ತದೆ ಎಂದು ಭಾವಿಸುತ್ತೇನೆ ಎಂದು ರಾಹುಲ್ ಹೇಳಿದ್ದಾರೆ.


  ಇದನ್ನೂ ಓದಿ: ಕ್ಯಾಚ್​ ಬಿಟ್ಟಿದ್ದಕ್ಕೆ ಕಪಾಳಕ್ಕೆ ಹೊಡೆದ್ಬಿಟ್ಟ ಬೌಲರ್​, ಲೋ.. ನೀನೇನ್​ ಆಟಗಾರನಾ? ಎಂದು ನೆಟ್ಟಿಗರಿಂದ ಕ್ಲಾಸ್​!


  ಇನ್ನು ಕೆಎಲ್ ರಾಹುಲ್ ಮಾಡಿದ ಧನ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿರುವ ವರದ್ ಅವರ ತಾಯಿ ಕೆಎಲ್ ರಾಹುಲ್ ಧನ ಸಹಾಯ ಮಾಡದೇ ಇದ್ದಿದ್ದರೆ ತಮ್ಮ ಮಗನಿಗೆ ಇಷ್ಟು ದೊಡ್ಡ ಮೊತ್ತದ ಚಿಕಿತ್ಸೆಯನ್ನು ಕೊಡಿಸಲು ಆಗುತ್ತಲೇ ಇರಲಿಲ್ಲ ಎಂದಿದ್ದಾರೆ.

  Published by:ranjumbkgowda1 ranjumbkgowda1
  First published: