Stats: ಚೇತೇಶ್ವರ್ ಪೂಜಾರ 29ನೇ ಬಾರಿ ಫ್ರಂಟ್ ಫೂಟ್ ಡಿಫೆನ್ಸ್ ಆಡಲು ಹೋಗಿ ಔಟ್; ಕೆಎಲ್ ರಾಹುಲ್ ಸೆಂಚುರಿ ಗಮ್ಮತ್ತು

KL Rahul Century Importance: ಕೆಎಲ್ ರಾಹುಲ್ ತಾವು ಟೆಸ್ಟ್ ಕ್ರಿಕೆಟ್ ಆಡಿದ ಎಲ್ಲಾ ದೇಶಗಳಲ್ಲೂ ಒಂದಾದರೂ ಶತಕ ಭಾರಿಸಿದ್ದಾರೆ. ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ, ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ಸೌತ್ ಆಫ್ರಿಕಾದಲ್ಲಿ ಅವರು ಶತಕ ಭಾರಿಸಿದ್ಧಾರೆ.

ಕೆಎಲ್ ರಾಹುಲ್

ಕೆಎಲ್ ರಾಹುಲ್

 • Share this:
  ಸೆಂಚೂರಿಯನ್, ಡಿ. 26: ಇಂದು ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಆಟದಲ್ಲಿ ಭಾರತ ತಂಡವೇ ಸಂಪೂರ್ಣ ಪ್ರಾಬಲ್ಯ ಮೆರೆಯಿತು. ಚೇತೇಶ್ವರ್ ಪೂಜಾರ (Cheteshwar Pujara) ಶೂನ್ಯಕ್ಕೆ ಔಟ್ ಆಗಿದ್ದು, ವಿರಾಟ್ ಕೊಹ್ಲಿ (Virat Kohli) ಅರ್ಧಶತಕ ಭಾರಿಸದೇ ಹೋಗಿದ್ದು ಬಿಟ್ಟರೆ ಭಾರತಕ್ಕೆ ನಿರಾಸೆ ಆಗಲಿಲ್ಲ. ಕೆ ಎಲ್ ರಾಹುಲ್ ಏಳನೇ ಟೆಸ್ಟ್ ಶತಕ ಭಾರತದ ಇನ್ನಿಂಗ್ಸನ್ನು ಕಳೆಗಟ್ಟಿಸಿತು. ಮಯಂಕ್ ಅಗರ್ವಾಲ್ ಮತ್ತು ಅವರು ಮೊದಲ ವಿಕೆಟ್​ಗೆ ಆಡಿದ ಜೊತೆಯಾಟ ಭಾರತ ಯಾಕೆ ನಂಬರ್ ಒನ್ ಟೆಸ್ಟ್ ತಂಡ ಎಂಬುದಕ್ಕೆ ದ್ಯೋತಕವಾಗಿತ್ತು.

  ಆಡಿರುವ ಎಲ್ಲಾ ದೇಶಗಳಲ್ಲೂ ಶತಕ: ಕೆಎಲ್ ರಾಹುಲ್ ಅವರು ಸೆಂಚೂರಿಯನ್​ನಲ್ಲಿ ಗಳಿಸಿದ ಶತಕ ಟೆಸ್ಟ್ ಕ್ರಿಕೆಟ್​ನಲ್ಲಿ ಅವರ 7ನೇ ಶತಕವಾಗಿದೆ. ಕೆಎಲ್ ರಾಹುಲ್ ದಾಖಲೆ ವಿಚಾರದಲ್ಲಿ ಬಹಳ ಕುತೂಹಲಕಾರಿ ಸಂಗತಿ ಎಂದರೆ, ಅವರು ಟೆಸ್ಟ್ ಪಂದ್ಯ ಆಡಿರುವ ಎಲ್ಲಾ ದೇಶಗಳಲ್ಲೂ ಶತಕ ಭಾರಿಸಿದಂತಾಗಿದೆ. ಇಂಗ್ಲೆಂಡ್​ನಲ್ಲಿ ಎರಡು ಶತಕ ಭಾರಿಸಿದ್ಧಾರೆ. ಆಸ್ಟ್ರೇಲಿಯಾ, ಭಾರತ, ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ಈಗ ಸೌತ್ ಆಫ್ರಿಕಾದಲ್ಲಿ ತಲಾ ಒಂದೊಂದು ಟೆಸ್ಟ್ ಶತಕ ಗಳಿಸಿದ್ಧಾರೆ.

  ಕೆಎಲ್ ರಾಹುಲ್ ದಾಖಲೆ ಮತ್ತು ಮೈಲಿಗಲ್ಲುಗಳು:

  * ಕೆಎಲ್ ರಾಹುಲ್, ಸೆಂಚೂರಿಯನ್​ನಲ್ಲಿ ಟೆಸ್ಟ್ ಶತಕ ಭಾರಿಸಿದ ಭಾರತದ ಮೊದಲ ಆರಂಭಿಕ ಆಟಗಾರ
  * ದಕ್ಷಿಣ ಆಫ್ರಿಕಾದಲ್ಲಿ ವಾಸಿಂ ಜಾಫರ್ ಬಳಿಕ ಟೆಸ್ಟ್ ಶತಕ ಗಳಿಸಿದ ಮೊದಲ ಭಾರತೀಯ ಓಪನರ್ ಕೆಎಲ್ ರಾಹುಲ್. 2006ರಲ್ಲಿ ಕೇಪ್​ಟೌನ್​ನಲ್ಲಿ ವಾಸಿಂ ಜಾಫರ್ ಶತಕ ಭಾರಿಸಿದ್ದರು.
  * ಸೆಂಚೂರಿಯನ್​ನಲ್ಲಿ ಡೇವಿಡ್ ವಾರ್ನರ್ ಮತ್ತು ಕ್ರಿಸ್ ಗೇಲ್ ಬಳಿಕ ಶತಕ ಗಳಿಸಿದ ಮೊದಲ ಆರಂಭಿಕ ಆಟಗಾರ ಕೆಎಲ್ ರಾಹುಲ್
  * ಸೆಂಚೂರಿಯನ್​ನಲ್ಲಿ ಶತಕ ಗಳಿಸಿದ ಮೂರನೆ ಭಾರತೀಯ ಆಟಗಾರ
  * ಸೆಂಚೂರಿಯನ್​ನಲ್ಲಿ ಶತಕ ಭಾರಿಸಿದ ವಿಶ್ವದ 11ನೇ ಆಟಗಾರ.
  * ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಶತಕ ಭಾರಿಸಿದ ವಿಶ್ವದ 54ನೇ ಬ್ಯಾಟುಗಾರ ರಾಹುಲ್.

  ಇದನ್ನೂ ಓದಿ: IND vs SA ಮೊದಲ ಟೆಸ್ಟ್: ಕೆಎಲ್ ರಾಹುಲ್ ಅಮೋಘ ಶತಕ; ಟೀಮ್ ಇಂಡಿಯಾ ಭರ್ಜರಿ ಆರಂಭ

  ಚೇತೇಶ್ವರ್ ಪೂಜಾರ ಅವರ ಫ್ರಂಟ್ ಫೂಟ್ ಸಮಸ್ಯೆ:

  ಒಂದೆಡೆ ಕೆಎಲ್ ರಾಹುಲ್ ಅವರು ಐಪಿಎಲ್, ಟಿ20 ವಿಶ್ವಕಪ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿನ ತಮ್ಮ ಅಮೋಘ ಫಾರ್ಮ್ ಅನ್ನು ಟೆಸ್ಟ್ ಸರಣಿಗೂ ಕೊಂಡೊಯ್ದಿರುವಂತಿದೆ. ಆದೇ ರೀತಿ ಚೇತೇಶ್ವರ್ ಅವರು ತಮ್ಮ ಕಳಪೆ ಫಾರ್ಮ್ ಅನ್ನು ಮುಂದುವರಿಸಿಕೊಂಡು ಬಂದಂತಿದೆ.

  ಇಂದಿನ ಆಟದಲ್ಲಿ ಪೂಜಾರ ತಾವು ಎದುರಿಸಿದ ಮೊದಲ ಎಸೆತದಲ್ಲೇ ಲುಂಗಿ ಎನ್​ಗಿಡಿಗೆ ಬಲಿಯಾಗಿಹೋದರು. ಫ್ರಂಟ್ ಫೂಟ್ ಡಿಫೆನ್ಸ್ ಆಡಲು ಹೋಗಿ ಪೀಟರ್ಸನ್​ಗೆ ಕ್ಯಾಚಿತ್ತು ಔಟಾದರು.

  ಇದನ್ನೂ ಓದಿ: Vijay Hazare Trophy: ವಿಜಯ್ ಹಜಾರೆ ಟ್ರೋಫಿ- ಹಿಮಾಚಲ ನೂತನ ಚಾಂಪಿಯನ್ಸ್; ತಮಿಳುನಾಡಿಗೆ ನಿರಾಸೆ

  65 ಇನ್ನಿಂಗ್ಸಲ್ಲಿ 29 ಬಾರಿ ಔಟ್:

  ಕಳೆದ ಮೂರು ವರ್ಷಗಳಿಂದ ಚೇತೇಶ್ವರ್ ಪೂಜಾರ ಅವರಿಗೆ ಫ್ರಂಟ್ ಫೂಟ್ ಡಿಫೆನ್ಸ್ ಟೆಕ್ನಿಕ್ ಸಮಸ್ಯೆ ಕಾಡುತ್ತಿರುವಂತಿದೆ. 2018ರಿಂದ ಅವರು ಫ್ರಂಟ್ ಫೂಟ್ ಡಿಫೆನ್ಸ್ ಆಡುವ ಪ್ರಯತ್ನದಲ್ಲಿ 29 ಬಾರಿ ಔಟಾಗಿದ್ದಾರೆ. ಈ ಮೂರು ವರ್ಷದ ಅವಧಿಯಲ್ಲಿ ಅವರು ಆಡಿರುವ 65 ಟೆಸ್ಟ್ ಇನಿಂಗ್ಸ್​ಗಳಲ್ಲಿ ಫ್ರಂಟ್ ಫೂಟ್ ರಕ್ಷಣಾತ್ಮಕ ಆಟ ಆಡಲು ಹೋಗಿ 29 ಬಾರಿ ವಿಕೆಟ್ ಒಪ್ಪಿಸಿರುವುದು ಅಂಕಿ ಅಂಶಗಳಿಂದ ತಿಳಿದುಬರುತ್ತದೆ.

  2018ರಿಂದ ಇವರು ಫ್ರಂಟ್ ಫೂಟ್ ಡಿಫೆನ್ಸ್ ಆಡಿದ ಸರಾಸರಿ 40 ಎಸೆತಗಳಿಗೆ ಒಮ್ಮೆ ಔಟ್ ಆಗಿದ್ದಾರೆ. ಕೆಎಲ್ ರಾಹುಲ್ ಕೂಡ ಫ್ರಂಟ್ ಫುಟ್ ಡಿಫೆನ್ಸ್​ನಲ್ಲಿ ದೌರ್ಬಲ್ಯ ಹೊಂದಿದ್ಧಾರೆ. ಕಳೆದ ಮೂರು ವರ್ಷಗಳಲ್ಲಿ ಅವರು ಆ ರೀತಿಯಲ್ಲಿ 11 ಬಾರಿ ಔಟ್ ಆಗಿದ್ಧಾರೆ. ಪ್ರತೀ 35 ಎಸೆತಗಳಿಗೊಮ್ಮೆ ಅವರು ಔಟ್ ಆಗಿರುವುದು ತಿಳಿದುಬಂದಿದೆ.
  Published by:Vijayasarthy SN
  First published: