ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆಯಲ್ಲಿ ಇಬ್ಬರು ಕನ್ನಡಿಗರು?

ICC World cup 2019: ಮಯಾಂಕ್​ಗೆ ಇಂಗ್ಲೆಂಡ್​ ನೆಲದಲ್ಲಿ ಆಡಿದ ಅನುಭವ ಇದೆ. ಅವರು ಅಲ್ಲಿ ಸಾಕಷ್ಟು ಕೌಂಟಿ ಪಂದ್ಯಗಳನ್ನು ಆಡಿದ್ದಾರೆ. ಹಾಗಾಗಿ, ಅವರ ಅನುಭವ  ಭಾರತಕ್ಕೆ ಲಾಭವಾಗಲಿದೆ.

Rajesh Duggumane | news18
Updated:July 6, 2019, 10:57 AM IST
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆಯಲ್ಲಿ ಇಬ್ಬರು ಕನ್ನಡಿಗರು?
ಮಯಾಂಕ್​-ರಾಹುಲ್​
  • News18
  • Last Updated: July 6, 2019, 10:57 AM IST
  • Share this:
ವಿಶ್ವಕಪ್​ನ ಲೀಗ್​ ಹಂತದ ಕೊನೆಯ ದಿನವಾದ ಇಂದು ಭಾರತ ತಂಡ ಶ್ರೀಲಂಕಾವನ್ನು ಎದುರಿಸುತ್ತಿದೆ. ವಿರಾಟ್​ ಕೊಹ್ಲಿ ಪಡೆಗೆ ಮಧ್ಯಮ ಕ್ರಮಾಂಕದಲ್ಲಿ ಯಾರನ್ನು ಇಳಿಸಬೇಕು ಎನ್ನುವ ಚಿಂತೆ ಕಾಡಿದೆ. ಇದಕ್ಕೆ ಈಗ ಪರಿಹಾರ ಕಂಡುಕೊಳ್ಳಲು ಕೊಹ್ಲಿ ಮುಂದಾಗಿದ್ದು, ಇಬ್ಬರು ಕನ್ನಡಿಗರನ್ನು ಕಣಕ್ಕೆ ಇಳಿಸುತ್ತಿದ್ದಾರೆ ಎನ್ನಲಾಗಿದೆ.

ವಿಶ್ವಕಪ್​ಗೂ ಮುನ್ನವೇ ಮಧ್ಯಮ ಕ್ರಮಾಂಕದಲ್ಲಿ ಯಾರನ್ನು ಇಳಿಸಬೇಕು ಎನ್ನುವ ಗೊಂದಲ ಭಾರತ ತಂಡವನ್ನು ಕಾಡಿತ್ತು. ಇದು ಈಗ ಗೊಂದಲವಾಗಿಯೇ ಉಳಿದುಕೊಂಡಿದೆ. ಧೋನಿ, ಕೇದಾರ್​ ಜಾಧವ್​ ನಿಧಾನಗತಿಯಲ್ಲಿ ಆಡುತ್ತಿದ್ದಾರೆ. ಸೆಮಿಫೈನಲ್​ಗೆ ಮುನ್ನ ಭಾರತ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ.

ಕಳೆದ ಪಂದ್ಯದಲ್ಲಿ ದಿನೇಶ್​ ಕಾರ್ತಿಕ್​ ಭಾರತದ ಪರ ಬ್ಯಾಟ್​ ಬೀಸಿದ್ದರು. ಆದರೆ, ಅವರು ಗಳಿಸಿದ್ದು ಕೇವಲ 8 ರನ್​ಗಳು. ಆಡಿದ ಮೊದಲ ಪಂದ್ಯದಲ್ಲೇ ಅವರು ಫೇಲ್​ ಆಗಿದ್ದಾರೆ. ಈ ಜಾಗಕ್ಕೆ ಬದಲಿ ಆಟಗರನ್ನು ಆಡಿಸಬೇಕಿದೆ. ಕಾರ್ತಿಕ್​ ಬದಲು ಮಯಾಂಕ್​ ಅಗರ್​ವಾಲ್​ ತಂಡಕ್ಕೆ ಸೇರುವ ಸಾಧ್ಯತೆ ಇದೆ. ವಿಜಯ್​ ಶಂಕರ್​ ಗಾಯಗೊಂಡಾಗ ಅವರ ಸ್ಥಾನಕ್ಕೆ ಮಾಯಾಂಕ್​ಗೆ ಸ್ಥಾನ ನೀಡಲಾಗಿತ್ತು. ಇದಕ್ಕೂ ಸಾಕಷ್ಟು ಕಾರಣವಿದೆ ಎನ್ನುತ್ತಾರೆ ಕ್ರಿಕೆಟ್​ ಪಂಡಿತರು.

ಇದನ್ನೂ ಓದಿ: ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನ: ಧೋನಿಯ ನಿವೃತ್ತಿ ದಿನಾಂಕ ಫಿಕ್ಸ್..?

ಮಯಾಂಕ್​ಗೆ ಇಂಗ್ಲೆಂಡ್​ ನೆಲದಲ್ಲಿ ಆಡಿದ ಅನುಭವ ಇದೆ. ಅವರು ಅಲ್ಲಿ ಸಾಕಷ್ಟು ಕೌಂಟಿ ಪಂದ್ಯಗಳನ್ನು ಆಡಿದ್ದಾರೆ. ಹಾಗಾಗಿ, ಅವರ ಅನುಭವ  ಭಾರತಕ್ಕೆ ಲಾಭವಾಗಲಿದೆ. ಈಗಾಗಲೇ ಕನ್ನಡಿಗ ಆರಂಭಿಕ ಆಟಗಾರನಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈಗ ಮಯಾಂಕ್​ ಕೂಡ ತಂಡಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎನ್ನುವ ವಿಚಾರ ಕನ್ನಡಿಗರ ಪಾಲಿಗೆ ಖುಷಿ ನೀಡಿದೆ.

First published: July 6, 2019, 9:42 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading