Syed Mushtaq Ali Trophy: ರಾಹುಲ್ ಭರ್ಜರಿ ಆಟ; ಪಂಜಾಬ್ ವಿರುದ್ಧ ಗೆದ್ದ ಕರ್ನಾಟಕಕ್ಕೆ ಹ್ಯಾಟ್ರಿಕ್ ಗೆಲುವು!

ಕರ್ನಾಟಕ ತಂಡ ಈವರೆಗೆ ಆಡಿರುವ 6 ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಮಾತ್ರ ಸೋಲುಂಡು 5ರಲ್ಲಿ ಗೆಲುವು ಕಂಡಿದೆ. 20 ಅಂಕದೊಂದಿಗೆ ಗ್ರೂಪ್ ಎ ಪಟ್ಟಿಯಲ್ಲಿ 20 ಅಂಕ ಸಂಪಾದಿಸಿ ಅಗ್ರಸ್ಥಾನದಲ್ಲಿದೆ.

Vinay Bhat | news18-kannada
Updated:November 24, 2019, 4:13 PM IST
Syed Mushtaq Ali Trophy: ರಾಹುಲ್ ಭರ್ಜರಿ ಆಟ; ಪಂಜಾಬ್ ವಿರುದ್ಧ ಗೆದ್ದ ಕರ್ನಾಟಕಕ್ಕೆ ಹ್ಯಾಟ್ರಿಕ್ ಗೆಲುವು!
ಇದಕ್ಕೂ ಮುನ್ನ 2016ರಲ್ಲಿ ಜಿಂಬಾಬ್ವೆ ವಿರುದ್ಧ ಕೆ.ಎಲ್.ರಾಹುಲ್ -ಕರುಣ್ ನಾಯರ್ ಓಪನರ್ಗಳಾಗಿ ಪದಾರ್ಪಣೆ ಮಾಡಿದ್ದರು.
  • Share this:
ಸೂರತ್ (ನ. 24): ಸೈಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿಯ ಸೂಪರ್ ಲೀಗ್ ಹಂತದಲ್ಲಿ ಕರ್ನಾಟಕ ಸತತ ಮೂರನೇ ಗೆಲುವು ದಾಖಲಿಸಿದೆ. ಕಳೆದ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ರೋಚಕ ಜಯ ಸಾಧಿಸಿದ ಪಾಂಡೆ ಪಡೆ ಇಂದು ಪಂಜಾಬ್ ವಿರುದ್ಧ 7 ವಿಕೆಟ್​ಗಳಿಂದ ಸುಲಭ ಗೆಲುವು ಕಂಡಿತು.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಪಂಜಾಬ್​ಗೆ ಉತ್ತಮ ಆರಂಭ ಸಿಕ್ಕಿಲ್ಲವಾದರು, ನಾಯಕ ಮಂದೀಪ್ ಸಿಂಗ್ ತಮ್ಮ ಜಾವಾಬ್ದಾರಿ ಅರಿತು ಆಡಿದರು. ಇವರಿಗೆ ಗುರ್​​ಕೀರತ್ ಸಿಂಗ್ ಬಿಟ್ಟರೆ ಮತ್ಯಾವ ಬ್ಯಾಟ್ಸ್​ಮನ್​ಗಳು ಸಾಥ್ ನೀಡದೆ ಇದ್ದದ್ದು ಹಿನ್ನಡೆಯಾಯಿತು.

IND vs BAN: ಮೂರನೇ ದಿನಕ್ಕೆ ಅಂತ್ಯಕಂಡ ಡೇ ನೈಟ್ ಟೆಸ್ಟ್​; ಐತಿಹಾಸಿಕ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ

ಕೊನೆಯವರೆಗೆ ಹೋರಾಟ ನಡೆಸಿದ ಮಂದೀಪ್ 50 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಿಡಿಸಿ 76 ರನ್ ಚಚ್ಚಿದರು. ಗುರ್​​ಕೀರತ್ 32 ಎಸೆತಗಳಲ್ಲಿ 44 ರನ್ ಬಾರಿಸಿದರು. ಪರಿಣಾಮ ಪಂಜಾಬ್ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ರಾಜ್ಯ ತಂಡದ ಪರ ರೋನಿತ್ ಮೋರೆ 4 ವಿಕೆಟ್ ಕಿತ್ತರು.

164 ರನ್​​ಗಳ ಸವಾಲಿನ ಗುರಿ ಬೆನ್ನಟ್ಟಿದ ಕರ್ನಾಟಕ ಪರ ಕೆ ಎಲ್ ರಾಹುಲ್ ಅಬ್ಬರಿಸಿದರು. ಕೇವಲ 48 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿ ಅಜೇಯ 84 ರನ್ ಬಾರಿಸಿ ಗೆಲುವು ತಂದಿಟ್ಟರು. ನಾಯಕ ಮನೀಶ್ ಪಾಂಡೆ 33 ರನ್ ಗಳಿಸಿದರೆ, ಕರುಣ್ ನಾಯರ್ 11 ಎಸೆತಗಳಲ್ಲಿ ಅಜೇಯ 23 ರನ್ ಚಚ್ಚಿದರು.

 IPL 2020: ಈ ಬಾರಿ ಹರಾಜಿನಲ್ಲಿ ಕೋಟಿ ಕೋಟಿಗೆ ಸೇಲ್ ಆಗಲಿದ್ದಾರೆ ಈ 5 ಸ್ಟಾರ್ ಆಟಗಾರರು!

ಈ ಮೂಲಕ ರಾಜ್ಯ ತಂಡ 18 ಓವರ್​ನಲ್ಲಿ 3 ವಿಕೆಟ್ ಕಳೆದುಕೊಂಡು 167 ರನ್ ಕಲೆಹಾಕಿ 7 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ಸೂಪರ್ ಲೀಗ್​ ಹಂತದಲ್ಲಿ ಕರ್ನಾಟಕ ಸತತ ಮೂರನೇ ಗೆಲುವು ದಾಖಲಿಸಿದೆ.

ಕರ್ನಾಟಕ ತಂಡ ಈವರೆಗೆ ಆಡಿರುವ 6 ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಮಾತ್ರ ಸೋಲುಂಡು 5ರಲ್ಲಿ ಗೆಲುವು ಕಂಡಿದೆ. 20 ಅಂಕದೊಂದಿಗೆ ಗ್ರೂಪ್ ಎ ಪಟ್ಟಿಯಲ್ಲಿ 20 ಅಂಕ ಸಂಪಾದಿಸಿ ಅಗ್ರಸ್ಥಾನದಲ್ಲಿದೆ.

First published: November 24, 2019, 4:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading