HOME » NEWS » Sports » CRICKET KINGS XI PUNJABS MANDEEP SINGH JOINS FARMERS PROTEST IN DELHI ZP

ರೈತರ ಹೋರಾಟಕ್ಕೆ ಕೈ ಜೋಡಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರ

ರಣಜಿ ಕ್ರಿಕೆಟ್​ನಲ್ಲಿ ಪಂಜಾಬ್‌ ತಂಡದ ನಾಯಕರಾಗಿರುವ 28 ವರ್ಷದ ಮಂದೀಪ್ ಸಿಂಗ್, ಐಪಿಎಲ್​ನಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್, ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್​ ಪರ ಆಡಿದ್ದಾರೆ.

news18-kannada
Updated:December 9, 2020, 7:13 PM IST
ರೈತರ ಹೋರಾಟಕ್ಕೆ ಕೈ ಜೋಡಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರ
KXIP
  • Share this:
ಕೇಂದ್ರ ಸರಕಾರದ ಕೃಷಿ ಮಸೂದೆ ವಿರುದ್ಧ ನಡೆಯುತ್ತಿರುವ ರೈತಪರ ಸಂಘಟನೆಗಳ ಪ್ರತಿಭಟನೆಗೆ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ಆಟಗಾರ ಮಂದೀಪ್ ಸಿಂಗ್ ಸಾಥ್ ನೀಡಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಪಂಜಾಬ್ ರೈತರ ಹೋರಾಟಕ್ಕೆ ಕೈ ಜೋಡಿಸಿರುವ ಮಂದೀಪ್ ಸಿಂಗ್, ಅನ್ನದಾತರರಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದ್ದಾರೆ.

ಐಪಿಎಲ್ 2020 ಯಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಮಂದೀಪ್ ಸಿಂಗ್ ಅರ್ಧಶತಕ ಬಾರಿಸಿ ಗಮನ ಸೆಳೆದಿದ್ದರು. ಇದೀಗ ದಿಲ್ಲಿಯ ಸಿಂಗೂ ಬಾರ್ಡರ್​​ನಲ್ಲಿ ರೈತರ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಈ ಹೋರಾಟಕ್ಕೆ ಸಾಥ್ ನೀಡಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
View this post on Instagram


A post shared by Mandeep Singh (@mandeeps12)


ರೈತ ಮಸೂದೆ ವಿರುದ್ಧ ಹೋರಾಡುತ್ತಿರುವವರಿಗೆ ನಾನು ಕೂಡ ನಿಮ್ಮ ಪರವಿದ್ದೀನಿ ಎಂದು ತೋರಿಸಲು ಅಲ್ಲಿಗೆ ತೆರಳಿದ್ದೆ. ಮೈ ಕೊರೆಯುವ ಚಳಿಯಲ್ಲಿ ಹಿರಿಯ ರೈತರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರೊಂದಿಗೆ ನಾನು ಕೂಡ ಕೈ ಜೋಡಿಸಿದ್ದೇನೆ. ಈಗ ನಮ್ಮ ತಂದೆಯವರು ಇದ್ದಿದ್ರೆ ಅವರು ಕೂಡ ಇದನ್ನೇ ಮಾಡುತ್ತಿದ್ದರು ಎಂದು ಮಂದೀಪ್ ಸಿಂಗ್ ತಿಳಿಸಿದ್ದಾರೆ.
View this post on Instagram


A post shared by Mandeep Singh (@mandeeps12)


ಐಪಿಎಲ್ 13ನೇ ಸೀಸನ್​ ಪಂದ್ಯದ ವೇಳೆ ಮಂದೀಪ್ ಸಿಂಗ್ ಅವರ ತಂದೆ ತೀರಿಕೊಂಡಿದ್ದರು. ಆದರೆ ಯುಎಇನಲ್ಲಿ ಟೂರ್ನಿ ನಡೆದಿದ್ದರಿಂದ ತಂದೆಯ ಅಂತ್ಯ ಸಂಸ್ಕಾರಕ್ಕೆ ಧಾವಿಸಲು ಕಿಂಗ್ಸ್​ ಇಲೆವೆನ್ ಆಟಗಾರರನಿಗೆ ಸಾಧ್ಯವಾಗಿರಲಿಲ್ಲ. ಇನ್ನು ಮಂದೀಪ್ ಸಿಂಗ್​ ಅವರಿಗೂ ಮುನ್ನ ರೈತರ ಹೋರಾಟಕ್ಕೆ ಕ್ರೀಡಾಪಟುಗಳಾದ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಕೌರ್ ಸಿಂಗ್‌, ಗುರುಬಕ್ಷ್‌ ಸಿಂಗ್‌ ಸಂಧೂ ಮತ್ತು ಜೈಪಾಲ್‌ ಸಿಂಗ್‌ ಕೂಡ ಬೆಂಬಲ ಸೂಚಿಸಿದ್ದರು.
View this post on Instagram


A post shared by Mandeep Singh (@mandeeps12)


ರಣಜಿ ಕ್ರಿಕೆಟ್​ನಲ್ಲಿ ಪಂಜಾಬ್‌ ತಂಡದ ನಾಯಕರಾಗಿರುವ 28 ವರ್ಷದ ಮಂದೀಪ್ ಸಿಂಗ್, ಐಪಿಎಲ್​ನಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್, ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್​ ಪರ ಆಡಿದ್ದಾರೆ. ಒಟ್ಟು 104 ಐಪಿಎಲ್​ ಪಂದ್ಯಗಳನ್ನು ಆಡಿರುವ ಮಂದೀಪ್ ಸಿಂಗ್ 6 ಅರ್ಧಶತಕಗಳೊಂದಿಗೆ 1659 ರನ್‌ ಕಲೆಹಾಕಿದ್ದಾರೆ.

ಇದನ್ನೂ ಓದಿ: 55 ಎಸೆತ, 5 ಬೌಂಡರಿ, 20 ಸಿಕ್ಸ್, ಸ್ಪೋಟಕ ಶತಕ: ಈ ಬ್ಯಾಟ್ಸ್​ಮನ್ ಮೇಲೆ ಕಣ್ಣಿಟ್ಟಿದೆ RCB..!
Published by: zahir
First published: December 9, 2020, 7:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories