2016 ರಲ್ಲಿ ಕೊನೆಯ ಏಕದಿನ ಪಂದ್ಯವನ್ನಾಡಿದ ಆಟಗಾರ ವಿಂಡೀಸ್ ತಂಡದ ಹೊಸ ನಾಯಕ!

ನವೆಂಬರ್ 5 ರಿಂದ ಅಫ್ಘಾನಿಸ್ತಾನ ವಿರುದ್ಧ ವೆಸ್ಟ್​ ಇಂಡೀಸ್ ಟಿ-20 ಹಾಗೂ ಏಕದಿನ ಸರಣಿ ಆರಂಭಿಸಲಿದೆ. ಇದು ಪೊಲಾರ್ಡ್​ ನಾಯಕತ್ವಕ್ಕೆ ಮೊದಲ ಅಗ್ನಿ ಪರೀಕ್ಷೆಯಾಗಿದೆ.

Vinay Bhat | news18-kannada
Updated:September 10, 2019, 10:44 AM IST
2016 ರಲ್ಲಿ ಕೊನೆಯ ಏಕದಿನ ಪಂದ್ಯವನ್ನಾಡಿದ ಆಟಗಾರ ವಿಂಡೀಸ್ ತಂಡದ ಹೊಸ ನಾಯಕ!
ವೆಸ್ಟ್​ ಇಂಡೀಸ್ ಕ್ರಿಕೆಟ್ ತಂಡ
  • Share this:
ಬೆಂಗಳೂರು (ಸೆ. 10): ವಿಶ್ವಕಪ್​ನಲ್ಲಿ ಹೀನಾಯ ಪ್ರದರ್ಶನ ತೋರಿದ ಬೆನ್ನಲ್ಲೆ ತವರಿನಲ್ಲೂ ಭಾರತ ವಿರುದ್ಧ ಕಳಪೆ ಪ್ರದರ್ಶನ ನೀಡಿದ ಪರಿಣಾಮ ವೆಸ್ಟ್​ ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್​ರನ್ನು ಕ್ಯಾಪ್ಟನ್ ಪಟ್ಟದಿಂದ ಕೆಳಗಿಳಿಸಲಾಗಿದೆ. ಜೊತೆಗೆ ವೆಸ್ಟ್​ ಇಂಡೀಸ್ ಕ್ರಿಕೆಟ್ ಹೊಸ ನಾಯಕನ ಘೋಷಣೆ ಮಾಡಿದೆ.

ಏಕದಿನ ಹಾಗೂ ಟಿ-20 ಕ್ರಿಕೆಟ್​ ನಾಯಕತ್ವದಿಂದ ಜೇಸನ್ ಹೋಲ್ಡರ್​​ರನ್ನು ತೆಗೆದು ಹಾಕಲಾಗಿದ್ದು, ಅನುಭವಿ ಆಲ್ರೌಂಡರ್ ಆಟಗಾರ ಕೀರನ್ ಪೊಲಾರ್ಡ್​ಗೆ ಕ್ಯಾಪ್ಟನ್ ಪಟ್ಟ ನೀಡಲಾಗಿದೆ.

ಹೋಲ್ಡರ್​ ಟೆಸ್ಟ್​ ಕ್ರಿಕೆಟ್​ಗಷ್ಟೆ ನಾಯಕನಾಗಿ ಮುಂದುವರೆಯಲಿದ್ದಾರೆ. ಈ ವಿಚಾರವನ್ನು ಮಂಡಳಿ ಅಧ್ಯಕ್ಷ ರಿಕ್ಕಿ ಸ್ಕೆರಿಟ್ ಅಧಿಕೃತವಾಗಿ ಘೋಷಿಸಿದ್ದಾರೆ.

Virat Kohli: ವಿರಾಟ್ ಕೊಹ್ಲಿ ಫೋಟೋವನ್ನು ಫೋಟೋಶಾಪ್ ಮಾಡಿದ ಅಭಿಮಾನಿ; ಹೇಗಿದೆ ಗೊತ್ತಾ..?

 ವಿಶೇಷ ಎಂದರೆ 32ರ ಹರೆಯದ ಪೊಲಾರ್ಡ್ 2016ರಲ್ಲಿ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು. ಇದಾದ ಬಳಿಕ ಫಾರ್ಮ್​ ಕಳೆದಕೊಂಡ ಇವರನ್ನು ಏಕದಿನ ಕ್ರಿಕೆಟ್​ನಿಂದ ಕೈಬಿಡಲಾಗಿತ್ತು.

ಏಕದಿನ ವಿಶ್ವಕಪ್‌ನಲ್ಲಿ ಮೀಸಲು ಪಡೆಯಲ್ಲಿದ್ದ ಪೊಲಾರ್ಡ್ ಬಳಿಕ ಭಾರತ ವಿರುದ್ಧ ಟಿ-20 ಸರಣಿಯಲ್ಲಿ ಭಾಗವಹಿಸಿದ್ದರು.

ನವೆಂಬರ್ 5 ರಿಂದ ಅಫ್ಘಾನಿಸ್ತಾನ ವಿರುದ್ಧ ವೆಸ್ಟ್​ ಇಂಡೀಸ್ ಟಿ-20 ಹಾಗೂ ಏಕದಿನ ಸರಣಿ ಆರಂಭಿಸಲಿದೆ. ಇದು ಪೊಲಾರ್ಡ್​ ನಾಯಕತ್ವಕ್ಕೆ ಮೊದಲ ಅಗ್ನಿ ಪರೀಕ್ಷೆಯಾಗಿದೆ.

First published:September 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ