ತಾಯಿಯ ಬೌಲಿಂಗ್, ಮಗನ ಬ್ಯಾಟಿಂಗ್: ವೈರಲ್ ಆಯ್ತು ಬೀದಿಬದಿಯ ಕ್ರಿಕೆಟ್ ವಿಡಿಯೋ

ಸೋಮವಾರ ಕೈಫ್ ವಿಡಿಯೋವೊಂದು ಟ್ವೀಟ್ ಮಾಡಿದ್ದರು. 27 ಸೆಕೆಂಡ್‌ಗಳ ವಿಡಿಯೊದಲ್ಲಿ ಪೋರನೊಬ್ಬ ಬ್ಯಾಟಿಂಗ್ ಮಾಡುತ್ತಿದ್ದರೆ, ಆತನ ತಾಯಿ ಬೌಲಿಂಗ್ ಮಾಡುತ್ತಿದ್ದಾರೆ.

zahir | news18-kannada
Updated:January 15, 2020, 9:01 AM IST
ತಾಯಿಯ ಬೌಲಿಂಗ್, ಮಗನ ಬ್ಯಾಟಿಂಗ್: ವೈರಲ್ ಆಯ್ತು ಬೀದಿಬದಿಯ ಕ್ರಿಕೆಟ್ ವಿಡಿಯೋ
Kid bats
  • Share this:
ಭಾರತದಲ್ಲಿ ಕ್ರಿಕೆಟ್ ಎಂಬುದು ಕೇವಲ ಆಟವಲ್ಲ. ಬದಲಾಗಿ ಅದೊಂದು ಧರ್ಮ ಎನ್ನಬಹುದು. ಈ ಕಾರಣದಿಂದಲೇ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿ ಬಿಸಿಸಿಐ ಬೆಳೆದು ನಿಂತಿದೆ. ಏಕೆಂದರೆ ಭಾರತದಲ್ಲಿ ಕುಂತರೂ ನಿಂತರೂ ಕ್ರಿಕೆಟ್ ಜಪ ಮಾಡುವವರು ಗಲ್ಲಿಗಲ್ಲಿಗಳಲ್ಲಿ ಸಿಗುತ್ತಾರೆ.

ದೇಶದಲ್ಲಿ ಹಿರಿಯರು, ಕಿರಿಯರನ್ನೆದೆ ಪ್ರತಿ ವಯೋಮಾನದ ಕ್ರಿಕೆಟ್ ಪ್ರೇಮಿಗಳಿದ್ದಾರೆ. ಹಾಗೆಯೇ ಬಾಲ್ಯದಲ್ಲಿ ಕ್ರಿಕೆಟ್ ಪಟುವಾಗಬೇಕೆಂದು ಕನಸು ಕಾಣುವ ಹಲವು ಪುಟಾಣಿಗಳು ಕೂಡ ಕಾಣಸಿಗುತ್ತಾರೆ. ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ ಟೀಂ ಇಂಡಿಯಾದ ಮಾಜಿ ಆಟಗಾರ ಮುಹಮ್ಮದ್ ಕೈಫ್ ಮಾಡಿರುವ ಒಂದು ಟ್ವೀಟ್.

ಹೌದು, ಸೋಮವಾರ ಕೈಫ್ ವಿಡಿಯೋವೊಂದು ಟ್ವೀಟ್ ಮಾಡಿದ್ದರು. 27 ಸೆಕೆಂಡ್‌ಗಳ ವಿಡಿಯೊದಲ್ಲಿ ಪೋರನೊಬ್ಬ ಬ್ಯಾಟಿಂಗ್ ಮಾಡುತ್ತಿದ್ದರೆ, ಆತನ ತಾಯಿ ಬೌಲಿಂಗ್ ಮಾಡುತ್ತಿದ್ದಾರೆ. ಅದು ಕೂಡ ಜನಬಿಡ ಪ್ರದೇಶದಲ್ಲಿ.

ಎರಡರಿಂದ ಮೂರು ವರ್ಷದ ಬಾಲಕ ಪ್ಲಾಸ್ಟಿಕ್ ಚೆಂಡನ್ನು ಜೋರಾಗಿ ಹೊಡೆಯುವ ದ್ಯಶ್ಯ ಈ ವಿಡಿಯೋದಲ್ಲಿದೆ. ​ದೇಶದಲ್ಲಿ ಕ್ರಿಕೆಟ್ ಬಡತನವನ್ನು ಮೀರಿ ನಿಂತಿದೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.


ತಾಯಿಯ ಬೌಲಿಂಗ್, ಮಗನ ಬ್ಯಾಟಿಂಗ್. ಇದನ್ನು ಒಂದೇ ಪದದಲ್ಲಿ ವರ್ಣಿಸಿದರೆ- 'ಬ್ಯೂಟಿಫುಲ್' ಎಂದು ಕೈಫ್ ಬರೆದುಕೊಂಡಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದ್ದು, ಹಲವರು ಟೀಂ ಇಂಡಿಯಾ ಮಾಜಿ ಆಟಗಾರನ ವಿಡಿಯೋವನ್ನು ರಿಟ್ವೀಟ್ ಮಾಡಿಕೊಂಡಿದ್ದಾರೆ.
First published:January 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading