HOME » NEWS » Sports » CRICKET KHAWAJA SURVIVES SCARE AFTER BEING HIT BY RUSSELL BOUNCER

VIDEO: ಆಂಡ್ರೆ ರಸೆಲ್​ ಭಯಂಕರ ಬೌನ್ಸರ್: ವಿಶ್ವಕಪ್​ನಿಂದ ಉಸ್ಮಾನ್ ಖ್ವಾಜಾ ಔಟ್?

ಸ್ಪೋಟಕ ಆಟಗಾರ ಖ್ವಾಜಾ ತಂಡದಲ್ಲಿ ಕಾಣಿಸಿಕೊಳ್ಳದಿದ್ದರೆ ಆಸ್ಟ್ರೇಲಿಯಾ ಆರಂಭಿಕರಾಗಿ ಡೇವಿಡ್​ ವಾರ್ನರ್ ಹಾಗೂ ಆರೊನ್ ಫಿಂಚ್ ಕಣಕ್ಕಿಳಿಯುವ ಸಾಧ್ಯತೆಯಿದೆ.

zahir | news18
Updated:May 24, 2019, 7:51 PM IST
VIDEO: ಆಂಡ್ರೆ ರಸೆಲ್​ ಭಯಂಕರ ಬೌನ್ಸರ್: ವಿಶ್ವಕಪ್​ನಿಂದ ಉಸ್ಮಾನ್ ಖ್ವಾಜಾ ಔಟ್?
@OLI
  • News18
  • Last Updated: May 24, 2019, 7:51 PM IST
  • Share this:
ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ದಿನಗಳು ಉಳಿದಿರುವ ಬೆನ್ನಲ್ಲೇ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಗೆ ಮತ್ತೊಂದು ಆಘಾತ ಎದುರಾಗಿದೆ. ಗುರುವಾರ ನಡೆದ ವೆಸ್ಟ್​ ಇಂಡೀಸ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ ಗಾಯಗೊಂಡಿದ್ದಾರೆ.

ವಿಂಡೀಸ್ ಆಲ್​ರೌಂಡರ್ ಆಂಡ್ರೆ ರಸೆಲ್ ಎಸೆದ ಭಯಾನಕ ಬೌನ್ಸರ್​ ಖ್ವಾಜಾ ದವಡೆಯ ಭಾಗಕ್ಕೆ ಬಡಿದಿದ್ದು, ಇದರಿಂದ ಖ್ವಾಜಾ ಅರ್ಧದಲ್ಲೇ ಮೈದಾನ ತೊರೆದಿದ್ದರು. ಬಳಿಕ ಆಸೀಸ್​ ಆಟಗಾರನನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಗಿದೆ ಎನ್ನಲಾಗಿದೆ. ಈ ಗಾಯವು ಗಂಭೀರವಾಗಿದ್ದರೆ, ಉಸ್ಮಾನ್ ಖ್ವಾಜಾ ಅವರನ್ನು ವಿಶ್ವಕಪ್​ ತಂಡದಿಂದ ಕೈಬಿಡುವ ಸಾಧ್ಯತೆ ಹೆಚ್ಚಿದೆ.

ಕೆಲ ದಿನಗಳ ಹಿಂದೆಯಷ್ಟೇ ಭುಜದ ನೋವಿನಿಂದ ಬಳಲುತ್ತಿದ್ದ ತಂಡದ ಪ್ರಮುಖ ವೇಗಿ ಜೆ.ರಿಚರ್ಡ್​ಸನ್ ವಿಶ್ವಕಪ್​ನಿಂದ ಹೊರಗುಳಿದಿದ್ದರು. ಇದೀಗ ಪಂದ್ಯ ಆರಂಭವಾಗಲು ಕೇವಲ 5 ದಿನಗಳು ಮಾತ್ರ ಉಳಿದಿರುವಾಗ ಮತ್ತೊಬ್ಬ ಆಟಗಾರ ಗಾಯಗೊಂಡಿರುವುದು ಆಸೀಸ್​ ತಂಡದ ಚಿಂತೆಗೆ ಕಾರಣವಾಗಿದೆ.

ಸ್ಪೋಟಕ ಆಟಗಾರ ಖ್ವಾಜಾ ತಂಡದಲ್ಲಿ ಕಾಣಿಸಿಕೊಳ್ಳದಿದ್ದರೆ ಆಸ್ಟ್ರೇಲಿಯಾ ಆರಂಭಿಕರಾಗಿ ಡೇವಿಡ್​ ವಾರ್ನರ್ ಹಾಗೂ ಆರೊನ್ ಫಿಂಚ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಇನ್ನು ನಿನ್ನೆ ನಡೆದ ಅಭ್ಯಾಸ ಪಂದ್ಯದಲ್ಲಿ ವೆಸ್ಟ್​ ಇಂಡೀಸ್ ನೀಡಿದ 230 ರನ್​ಗಳನ್ನು ಸುಲಭವಾಗಿ ಬೆನ್ನತ್ತುವ ಮೂಲಕ ವಿಶ್ವಕಪ್​ಗಾಗಿ ಸಕಲ ತಯಾರಿಯಲ್ಲಿರುವುದನ್ನು ಆಸೀಸ್ ಸಾಬೀತು ಪಡಿಸಿದೆ. ಜೂನ್ 1 ರಂದು ವಿಶ್ವಕಪ್​ ಅಭಿಯಾನ ಆರಂಭಿಸಲಿರುವ ಫಿಂಚ್ ಪಡೆ ಮೊದಲ ಪಂದ್ಯವನ್ನು ಅಫ್ಘಾನಿಸ್ತಾನದ ವಿರುದ್ಧ ಆಡಲಿದೆ.
 
First published: May 24, 2019, 6:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories