Kevin Pietersen- ನರೇಂದ್ರ ಮೋದಿಯನ್ನ ಹೀರೋ ಎಂದು ಹೊಗಳಿದ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್

Rhinoceros Protection Measures- ನರೇಂದ್ರ ಮೋದಿ ಥರದ ನಾಯಕರು ಇನ್ನೂ ಬರಬೇಕು. ಮೋದಿ ಒಬ್ಬ ಹೀರೋ ಎಂದು ಮಾಜಿ ಇಂಗ್ಲೆಂಡ್ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಹೊಗಳಿ ಟ್ವೀಟ್ ಮಾಡಿದ್ದಾರೆ.

ಕೆವಿನ್ ಪೀಟರ್ಸನ್

ಕೆವಿನ್ ಪೀಟರ್ಸನ್

  • Cricketnext
  • Last Updated :
  • Share this:
    ನವದೆಹಲಿ, ಸೆ. 23: ಘೇಂಡಾ ಮೃಗ ಅಥವಾ ಖಡ್ಗ ಮೃಗ (Single Horn Rhinoceros) ಸಂರಕ್ಷಣೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ (India Prime Minister Narendra Modi) ಅವರು ಮಾಡಿದ ಒಂದು ಟ್ವೀಟ್ ಇಂಗ್ಲೆಂಡ್ ಕ್ರಿಕೆಟಿಗ ಕೆವಿನ್ ಪೀಟರ್ಸನ್ (Kevin Pietersen) ಅವರಿಂದ ಪ್ರಶಂಸೆಯ ಮಾತುಗಳನ್ನ ಆಡಿಸಿದೆ. ಘೇಂಡಾ ಮೃಗದ ಸಂತತಿನ್ನ ಉಳಿಸಲು ಜಾಗತಿಕ ನಾಯಕ ಕಂಕಣಬದ್ಧರಾಗಿದ್ದಾರೆ. ಇವರಂತೆ ಇನ್ನೂ ಹೆಚ್ಚು ನಾಯಕರು ಈ ಕಾರ್ಯ ಮಾಡಬಾರದೇ ಎಂದು ಹೇಳಿರುವ ಕೆವಿನ್ ಪೀಟರ್ಸನ್ ಅವರು ನರೇಂದ್ರ ಮೋದಿ ಅವರನ್ನ ಹೀರೋ ಎಂದು ಗುಣಗಾನ ಮಾಡಿದ್ದಾರೆ.

    ಅಸ್ಸಾಮ್​ನಲ್ಲಿ ಖಡ್ಗ ಮೃಗಗಳ 2,479 ಕೋಡುಗಳನ್ನ ಒಟ್ಟಿಗೆ ಸುಟ್ಟು ಹಾಕಲಾಯಿತು (Burning the stockpile of Rhinoceros horns). ಅಳಿವಿನಿಂಚಿನಲ್ಲಿರುವ ಈ ಕಾಡುಮೃಗದ ಸಂತತಿಯನ್ನ ಬೇಟೆಗಾರರಿಂದ ರಕ್ಷಿಸಲು ಅಸ್ಸಾಮ್ ಸರ್ಕಾರ ಇಂಥದ್ದೊಂದು ಕ್ರಮ ಕೈಗೊಂಡಿದೆ. ಇಷ್ಟೊಂದು ಡೊಡ್ಡ ಪ್ರಮಾಣದಲ್ಲಿ ಖಡ್ಗ ಮೃಗಗಳ ಕೋಡುಗಳ ಸಂಗ್ರಹವನ್ನು ಸುಟ್ಟುಹಾಕಿದ್ದು ವಿಶ್ವದಲ್ಲಿ ಇದೇ ಮೊದಲಾಗಿದೆ. ಫೋಟೋ ಸಮೇತ ಈ ವಿಚಾರವನ್ನು ಅಸ್ಸಾಮ್ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಟ್ವೀಟ್ ಮಾಡಿ ತಿಳಿಸಿದ್ದರು. ಘೇಂಡಾ ಮೃಗದ ಸಂತತಿಯನ್ನ ಉಳಿಸುವ ನರೇಂದ್ರ ಮೋದಿ ಅವರ ಸಂಕಲ್ಪವನ್ನು ಈಡೇರಿಸುತ್ತಿದ್ದೇವೆ ಎಂದು ಸಿಎಂ ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದರು.

    ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, ಅಸ್ಸಾಮ್ ರಾಜ್ಯದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಒಂಟಿ ಕೋಡಿನ ಘೇಂಡಾ ಮೃಗ ಭಾರತದ ಹೆಮ್ಮೆಯ ಪ್ರಾಣಿಯಾಗಿದ್ದು, ಅದರ ರಕ್ಷಣೆಗೆ ಎಲ್ಲಾ ಕ್ರಮಗಳನ್ನ ತೆಗೆದುಕೊಳ್ಳಲಾಗುವುದು ಎಂದು ಟ್ವೀಟ್ ಮಾಡಿದರು. ಈ ಟ್ವೀಟ್​ಗೆ ಕೆವಿನ್ ಪೀಟರ್ಸನ್ ಪ್ರತಿಕ್ರಿಯಿಸಿ ಪ್ರಧಾನಿ ಮೋದಿ ಅವರನ್ನ ಹಾಡಿಹೊಗಳಿದ್ದಾರೆ.

    “ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಈ ಭೂಮಿಯಲ್ಲಿ ಘೇಂಡಾ ಮೃಗ ಪ್ರಾಣಿಗಳ ರಕ್ಷಣೆಗೆ ಜಾಗತಿಕ ನಾಯಕ ಕಟಿಬದ್ಧರಾಗಿ ನಿಂತಿದ್ದಾರೆ. ಇನ್ನೂ ಹೆಚ್ಚು ನಾಯಕರು ಈ ಕಾರ್ಯ ಮಾಡಬೇಕು. ಭಾರತದಲ್ಲಿ ಘೇಂಡಾ ಮೃಗಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಇದೇ ಕಾರಣ. ಎಂಥ ಹೀರೋ” ಎಂದು ಕೆವಿನ್ ಪೀಟರ್ಸನ್ ತಮ್ಮ ಟ್ವೀಟ್​ನಲ್ಲಿ ಹೊಗಳಿಸಿದ್ದಾರೆ.






    ವಿಶ್ವದ ಘೇಂಡಾ ಮೃಗಗಳ ಸಂತತಿಗಳಲ್ಲಿ ಭಾರತೀಯ ಉಪಖಂಡದಲ್ಲಿರುವ ಒಂಟಿ ಕೋಡಿನ ಘೇಂಡಾ ಮೃಗವೂ ಒಂದು. ಇದು ಅಳಿವಿನಂಚಿನಲ್ಲಿರುವ ಪ್ರಾಣಿಯಾಗಿದೆ. ಇಡೀ ವಿಶ್ವದಲ್ಲಿ ಇವುಗಳ ಸಂಖ್ಯೆ ಅಂದಾಜು ಮೂರೂವರೆ ಸಾವಿರದಷ್ಟಿದೆ. ಭಾರತದಲ್ಲೇ ಮೂರು ಸಾವಿರ ಘೇಂಡಾ ಮೃಗಗಳಿವೆ. ಅದರಲ್ಲೂ ಅಸ್ಸಾಮ್ ರಾಜ್ಯವೊಂದರಲ್ಲೇ 2 ಸಾವಿರಕ್ಕೂ ಹೆಚ್ಚು ಖಡ್ಗ ಮೃಗಗಳಿವೆ.

    ಇದನ್ನೂ ಓದಿ: KKR vs MI- ಅಯ್ಯರ್, ತ್ರಿಪಾಠಿ ಆಕರ್ಷಕ ಬ್ಯಾಟಿಂಗ್; ಮುಂಬೈ ವಿರುದ್ಧವೂ ಗೆದ್ದ ಕೆಕೆಆರ್

    ಆನೆಯ ದಂತದಂತೆ ಘೇಂಡಾ ಮೃಗಗಳ ಕೋಡಿಗೆ ಬಹಳಷ್ಟು ಬೇಡಿಕೆ ಇದೆ. ಚೀನಾ, ವಿಯೆಟ್ನಾಂ ಮೊದಲಾದ ಕೆಲ ದೇಶಗಳಲ್ಲಿ ಇವುಗಳಿಗೆ ಬೇಡಿಕೆ ಇದೆ. ಔಷಧ ಮತ್ತಿತರೆ ಉದ್ದೇಶಕ್ಕೆ ಈ ಕೋಡುಗಳನ್ನ ಬಳಕೆ ಮಾಡಲಾಗುತ್ತದೆ. ಚೀನಾದ ಸಾಂಪ್ರದಾಯಿಕ ಔಷಧ ಪದ್ಧತಿಯಲ್ಲಿ ಘೇಂಡಾ ಮೃಗದ ಕೋಡುಗಳನ್ನ ಬಳಕೆ ಮಾಡಲಾಗುತ್ತದೆ. ಆದರೆ, ಅಳಿವಿನಿಂಚಿನಲ್ಲಿರುವ ಘೇಂಡಾ ಮೃಗಗಳನ್ನ ಬೇಟೆಯಾಡುವುದು ನಿಷಿದ್ಧ. ಹೀಗಾಗಿ, ಈ ಪ್ರಾಣಿಗಳ ಕೋಡುಗಳ ಕಳ್ಳಸಾಗಾಣಿಕೆ ನಡೆಯುತ್ತದೆ. ಭಾರತದಲ್ಲಿ ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿರುವ ಘೇಂಡಾ ಮೃಗಗಳನ್ನ ಬೇಟೆಗಾರರು ಕೊಂದು ಕೋಡುಗಳನ್ನ ಕತ್ತರಿಸಿ ಚೀನಾ, ವಿಯೆಟ್ನಾಂ ಮತ್ತಿತರರ ದೇಶಗಳಿಗೆ ಕಳ್ಳಸಾಗಾಣಿಕೆ ಮಾಡುತ್ತಾರೆ. ಹೀಗೆ ಕಳ್ಳರಿಂದ ವರ್ಷಗಳಿಂದ ವಶಪಡಿಸಿಕೊಳ್ಳಲಾದ ಘೇಂಡಾ ಮೃಗ ಕೋಡುಗಳನ್ನ ಅಸ್ಸಾಮ್ ಸರ್ಕಾರ ಇಂದು ಒಟ್ಟಿಗೆ ಹಾಕಿ ಸುಟ್ಟುಹಾಕಿದೆ.
    Published by:Vijayasarthy SN
    First published: