ಕೇದಾರ್, ಗೌತಮ್ ಸ್ಫೋಟಕ ಬ್ಯಾಟಿಂಗ್; ದೇವಧರ್ ಟ್ರೋಫಿ ಎತ್ತಿಹಿಡಿದ ಭಾರತ ಬಿ ತಂಡ

ಭಾರತ ಬಿ ತಂಡದ 283 ರನ್​ಗೆ ಪ್ರತಿಯಾಗಿ ಭಾರತ ಸಿ ತಂಡ 232 ರನ್ ಮಾತ್ರ ಗಳಿಸಿ 51 ರನ್​ಗಳಿಂದ ಸೋಲಪ್ಪಿತು. ಕೇದಾರ್ ಜಾಧವ್ ಜಾಧವ್ ಭರ್ಜರಿ ಬ್ಯಾಟಿಂಗ್ ಮತ್ತು ಶದಾಬ್ ನದೀಮ್ ಅವರ ಮಾರಕ ಬೌಲಿಂಗ್ ನೆರವಿನಿಂದ ಪಾರ್ಥಿವ್ ಪಟೇಲ್ ನಾಯಕತ್ವದ ಬಿ ತಂಡ ಸುಲಭ ಗೆಲುವು ಪಡೆಯಿತು.

Vijayasarthy SN | cricketnext
Updated:November 4, 2019, 6:35 PM IST
ಕೇದಾರ್, ಗೌತಮ್ ಸ್ಫೋಟಕ ಬ್ಯಾಟಿಂಗ್; ದೇವಧರ್ ಟ್ರೋಫಿ ಎತ್ತಿಹಿಡಿದ ಭಾರತ ಬಿ ತಂಡ
ಕೇದಾರ್ ಜಾಧವ್
Vijayasarthy SN | cricketnext
Updated: November 4, 2019, 6:35 PM IST
ರಾಂಚಿ(ನ. 04): ಟೀಮ್ ಇಂಡಿಯಾ ಆಕಾಂಕ್ಷಿಗಳ ನಡುವಿನ ಪೈಪೋಟಿಯಲ್ಲಿ ಭಾರತ ಬಿ ತಂಡ ಜಯಭೇರಿ ಭಾರಿಸಿದೆ. ದೇವಧರ್ ಟ್ರೋಫಿ ಫೈನಲ್​ನಲ್ಲಿ ಸಿ ತಂಡವನ್ನು ನಿರಾಯಾಸವಾಗಿ ಸೋಲಿಸಿದ ಬಿ ತಂಡ ಚಾಂಪಿಯನ್ ಪಟ್ಟ ಪಡೆದಿದೆ. ಭಾರತ ಬಿ ತಂಡದ 283 ರನ್​ಗೆ ಪ್ರತಿಯಾಗಿ ಭಾರತ ಸಿ ತಂಡ 232 ರನ್ ಮಾತ್ರ ಗಳಿಸಿ 51 ರನ್​ಗಳಿಂದ ಸೋಲಪ್ಪಿತು. ಕೇದಾರ್ ಜಾಧವ್ ಜಾಧವ್ ಭರ್ಜರಿ ಬ್ಯಾಟಿಂಗ್ ಮತ್ತು ಶದಾಬ್ ನದೀಮ್ ಅವರ ಮಾರಕ ಬೌಲಿಂಗ್ ನೆರವಿನಿಂದ ಪಾರ್ಥಿವ್ ಪಟೇಲ್ ನಾಯಕತ್ವದ ಬಿ ತಂಡ ಸುಲಭ ಗೆಲುವು ಪಡೆಯಿತು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ಬಿ ತಂಡ ಆರಂಭಿಕ ಆಘಾತ ಪಡೆದರೂ ನಂತರ ಚೇತರಿಕೆ ಪಡೆಯಿತು. ಯಶಸ್ವಿ ಜೈಸ್ವಾಲ್ ಮತ್ತು ಕೇದಾರ್ ಜಾಧವ್ ಅರ್ಧ ಶತಕ ಭಾರಿಸಿ ತಂಡಕ್ಕೆ ಪ್ರಬಲ ಮೊತ್ತ ಕಲೆಹಾಕಲು ಬುನಾದಿಯಾದರು. ವಿಜಯ್ ಶಂಕರ್ ಮತ್ತು ಕೃಷ್ಣಪ್ಪ ಗೌತಮ್ ಕೊನೆಕೊನೆಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು 283 ರನ್​ಗೆ ಕೊಂಡೊಯ್ಯುವಲ್ಲಿ ಸಫಲರಾದರು. ಕೆ. ಗೌತಮ್ ಅವರಂತೂ ಕೇವಲ 10 ಎಸೆತಗಳಲ್ಲಿ 3 ಸಿಕ್ಕರ್, 3 ಬೌಂಡರಿಗಳೊಂದಿಗೆ 35 ರನ್ ಚಚ್ಚಿ ಅಜೇಯರಾಗಿ ಉಳಿದರು.

ಇದನ್ನೂ ಓದಿ: ಲೈವ್ ಪಂದ್ಯ ನಡೆಯುತ್ತಿರುವಾಗಲೇ ಸಂಪೂರ್ಣ ಬಟ್ಟೆ ಬಿಚ್ಚಿದ ಹುಡುಗಿಯರು!

ಇಶಾನ್ ಪೋರೆಲ್ 5 ವಿಕೆಟ್ ಪಡೆದು ಸಿ ತಂಡದ ಏಕೈಕ ಯಶಸ್ವಿ ಬೌಲರ್ ಎನಿಸಿದರು. ಅಕ್ಸರ್ ಪಟೇಲ್ ಮತ್ತು ಜಲಜ್ ಸಕ್ಸೇನಾ ತಲಾ ಒಂದೊಂದು ವಿಕೆಟ್ ಪಡೆದರೂ ಬಿ ತಂಡದ ಬ್ಯಾಟುಗಾರರನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದು ಹೌದು. ಇತರ ಬೌಲರ್​ಗಳಾದ ಮಯಂಕ್ ಮರ್ಕಂಡೆ ಮತ್ತು ದಿವೇಶ್ ಪಠಾನಿಯಾ ದುಬಾರಿ ಎನಿಸಿದರು.

ಇನ್ನು, ಗೆಲ್ಲಲು 284 ರನ್ ಗುರಿ ಹೊತ್ತ ಭಾರತ ಸಿ ತಂಡ 77 ರನ್ನಾಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಮಯಂಕ್ ಅಗರ್ವಾಲ್ ಆದಿಯಾಗಿ ದಿನೇಶ್ ಕಾರ್ತಿಕ್​ವರೆಗೂ ಟಾಪ್ 5 ಬ್ಯಾಟ್ಸ್​ಮೆನ್ ಪೆವಿಲಿಯನ್​ಗೆ ಮರಳಿದ್ದರು. ಈ ಹಂತದಲ್ಲೇ ಬಿ ತಂಡ ಗೆಲ್ಲುವ ಸಾಧ್ಯತೆ ಬಹುತೇಕ ಕ್ಷೀಣಿಸಿಹೋಗಿತ್ತು. 18 ವರ್ಷದ ಪ್ರಿಯಮ್ ಗರ್ಗ್, ಅಕ್ಸರ್ ಪಟೇಲ್, ಜಲಜ್ ಸಕ್ಸೇನಾ ಮತ್ತು ಮಯಂಕ್ ಮರ್ಕಂಡೆ ಒಂದಷ್ಟು ರನ್ ಕಲೆಹಾಕಿದರಾದರೂ ಗೆಲ್ಲುವ ಭರವಸೆ ಮೂಡಿಸಲಿಲ್ಲ. ಸಿ ತಂಡ ಯಾವುದೇ ಪ್ರತಿರೋಧ ತೋರದೆಯೇ ಫೈನಲ್​ನಲ್ಲಿ ಸೋಲಪ್ಪಿತು. ಬಿ ತಂಡದ ಎಲ್ಲಾ ಬೌಲರ್​ಗಳು ತಕ್ಕಮಟ್ಟಿಗೆ ಯಶಸ್ಸು ಕಂಡರು. ಶಬಾಜ್ ನದೀಮ್ 4 ವಿಕೆಟ್ ಕಬಳಿಸಿ ಮಿಂಚಿದರು.

ಇದನ್ನೂ ಓದಿ: ಟೀಂ ಇಂಡಿಯಾಕ್ಕೆ ಸಿಕ್ಕ ಮತ್ತೊಬ್ಬ ಯುವರಾಜ; ಯಾರೀತ ಗೊತ್ತೆ?, ಇಂದಿನ ಪಂದ್ಯದಲ್ಲಿ ಕಣಕ್ಕೆ ಸಾಧ್ಯತೆ!

ಸ್ಕೋರು ವಿವರ:
Loading...

ಭಾರತ ಬಿ ತಂಡ 50 ಓವರ್​ನಲ್ಲಿ 283/7
(ಕೇದಾರ್ ಜಾಧವ್ 86, ಯಶಸ್ವಿ ಜೈಸ್ವಾಲ್ 54, ವಿಜಯ್ ಶಂಕರ್ 45, ಕೆ. ಗೌತಮ್ ಅಜೇಯ 35, ನಿತೀಶ್ ರಾಣಾ 20 ರನ್ – ಇಶಾನ್ ಪೊರೆಲ್ 43/5)

ಭಾರತ ಸಿ ತಂಡ 50 ಓವರ್​ನಲ್ಲಿ 232/9
(ಪ್ರಿಯಮ್ ಗರ್ಗ್ 74, ಅಕ್ಸರ್ ಪಟೇಲ್ 38, ಜಲಜ್ ಸಕ್ಸೇನಾ ಅಜೇಯ 37, ಮಯಂಕ್ ಅಗರ್ವಾಲ್ 28, ಮಯಂಕ್ ಮರ್ಕಂಡೆ 27 ರನ್ – ಶಬಾಜ್ ನದೀಮ್ 32/4, ಮೊಹಮ್ಮದ್ ಸಿರಾಜ್ 43/2)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:November 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...