Crime News| T-20 ವಿಶ್ವಕಪ್​ನಲ್ಲಿ ಪಾಕ್ ವಿರುದ್ಧ ಭಾರತಕ್ಕೆ ಸೋಲು; ಪಂಜಾಬ್‌ನಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ!

ಭಾರತ ಕ್ರಿಕೆಟ್​ ತಂಡ ಪಾಕಿಸ್ತಾನದ ಎದುರು ಸೋಲುತ್ತಿದ್ದಂತೆ ಕೆಲವು ಜನರ ಗುಂಪು ಕಾಶ್ಮೀರಿ ವಿದ್ಯಾರ್ಥಿಗಳಿದ್ದ ಕ್ಯಾಂಪಸ್​ಗೆ ಬಂದು ವಿದ್ಯಾರ್ಥಿಗಳನ್ನು ಥಳಿಸಲು ಆರಂಭಿಸಿದೆ. ಈ ಘಟನೆ ನಡೆದ ನಡೆದ ಕೆಲವೇ ಗಂಟೆಗಳಲ್ಲಿ ಪಂಜಾಬಿನ ಪೊಲೀಸ್‌ ಅಧಿಕಾರಿಗಳು ಕಾಲೇಜು ಕ್ಯಾಂಪಸ್‌ಗೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಕಾಶ್ಮೀರಿ ವಿದ್ಯಾರ್ಥಿಗಳಿದ್ದ ಹಾಸ್ಟೆಲ್.

ಕಾಶ್ಮೀರಿ ವಿದ್ಯಾರ್ಥಿಗಳಿದ್ದ ಹಾಸ್ಟೆಲ್.

 • Share this:
  ಭಾರತ ಮತ್ತು ಪಾಕಿಸ್ತಾನ (India vs Pakistan) ಕ್ರಿಕೆಟ್​ನಲ್ಲಿ (Cricket) ಮುಖಾಮುಖಿಯಾಗುವುದು ವಿಶ್ವಕಪ್​ (T20 World Cup) ಟೂರ್ನಿಯಲ್ಲಿ ಮಾತ್ರ. ಹೀಗಾಗಿ ಈ ಪಂದ್ಯಕ್ಕೆ ಎಲ್ಲಿಲ್ಲದ ಮಹತ್ವ ಇದೆ. ಅಲ್ಲದೆ, ವಿಶ್ವಕಪ್​ ಟೂರ್ನಿಯಲ್ಲಿ ಭಾರತ ಈವರೆಗೆ ಪಾಕ್ ವಿರುದ್ಧ ಸೋಲನುಭವಿಸಿಲ್ಲ. ಹೀಗಾಗಿ ಈ ಬಾರಿಯ ಟಿ-20 ವಿಶ್ವಕಪ್​ ಟೂರ್ನಿಯಲ್ಲೂ ಭಾರತ ಗೆಲುವು ದಾಖಲಿಸಲಿದೆ ಎಂದೇ ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಸಹ ಭಾವಿಸಿದ್ದರು. ಆದರೆ, ಭಾನುವಾರ ರಾತ್ರಿ ನಡೆದ T20 ವರ್ಲ್ಡ್‌ ಕಪ್ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ ವಿರುದ್ಧ ಮೊದಲ ಬಾರಿಗೆ ಸೋಲನುಭವಿಸಿತ್ತು. ಆದರೆ, "ಭಾರತ ಈ ಪಂದ್ಯದಲ್ಲಿ ಸೋತದ್ದಕ್ಕೆ ಗುಂಪೊಂದು ನಮ್ಮ ಮೇಲೆ ಹಲ್ಲೆ ಮಾಡಿದೆ" ಎಂದು ಪಂಜಾಬ್‌ನ ಸರ್ಗೂರಿನಲ್ಲಿರುವ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ ಕೆಲವು ಕಾಶ್ಮೀರಿ ವಿದ್ಯಾರ್ಥಿಗಳು (Kashmir Students) ಆರೋಪಿಸಿದ್ದಾರೆ.

  ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ:

  ಭಾರತ ಕ್ರಿಕೆಟ್​ ತಂಡ ಪಾಕಿಸ್ತಾನದ ಎದುರು ಸೋಲುತ್ತಿದ್ದಂತೆ ಕೆಲವು ಜನರ ಗುಂಪು ಕಾಶ್ಮೀರಿ ವಿದ್ಯಾರ್ಥಿಗಳಿದ್ದ ಕ್ಯಾಂಪಸ್​ಗೆ ಬಂದು ವಿದ್ಯಾರ್ಥಿಗಳನ್ನು ಥಳಿಸಲು ಆರಂಭಿಸಿದೆ. ಈ ಘಟನೆ ನಡೆದ ನಡೆದ ಕೆಲವೇ ಗಂಟೆಗಳಲ್ಲಿ ಪಂಜಾಬಿನ ಪೊಲೀಸ್‌ ಅಧಿಕಾರಿಗಳು ಕಾಲೇಜು ಕ್ಯಾಂಪಸ್‌ಗೆ ಧಾವಿಸಿದ್ದು, ಭಾಯಿ ಗುರುದಾಸ್‌ ಆಫ್‌ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿ ಕಾಲೇಜಿನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.

  ವಿದ್ಯಾರ್ಥಿಗಳು ಹೇಳಿದ್ದೇನು?

  ಹಾನಿಯಾಗಿದ್ದ ಕೊಠಡಿಯನ್ನು ತೋರಿಸಿದ ಕಾಶ್ಮೀರಿ ವಿದ್ಯಾರ್ಥಿಯೊಬ್ಬರು, "ನಾವು ಇಲ್ಲಿ ಪಂದ್ಯವನ್ನು ನೋಡುತ್ತಿದ್ದೆವು. ಉತ್ತರ ಪ್ರದೇಶದ ಕೆಲವು ಬಂದು ಹಲ್ಲೆ ನಡೆಸಿದರು. ನಾವು ಇಲ್ಲಿಗೆ ಅಧ್ಯಯನ ನಡೆಸಲು ಬಂದಿದ್ದೇವೆ. ನಾವು ಭಾರತೀಯರೇ. ನಮಗೇನಾಗಿದೆ ಎಂಬುದನ್ನು ನೀವು ನೋಡಬಹುದು. ನಾವು ಭಾರತೀಯರಲ್ಲವೇ? ಮೋದಿ ಏನು ಹೇಳುತ್ತಾರೆ?" ಎಂದು ವಿವರಿಸಿದ್ದಾರೆ ಎದು ಎನ್‌ಡಿಟಿವಿ ವರದಿ ಮಾಡಿದೆ.

  ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರು, ಪಂಜಾಬಿನ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರಿಗೆ ಈ ವಿಷಯವನ್ನು ಪರಿಶೀಲಿಸುವಂತೆ ಮತ್ತು ಕಾಶ್ಮೀರಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವಂತೆ ಮನವಿ ಮಾಡಿದ್ದಾರೆ.

  ಘಟನೆಗೆ ಮಾಜಿ ಸಿಎಂ ಅಬ್ದುಲ್ಲಾ ಖಂಡನೆ;

  ‘ಕಳೆದ ರಾತ್ರಿ ಪಂಜಾಬಿನ ಕಾಲೇಜೊಂದರಲ್ಲಿ ಕೆಲವು ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ನಿಂದಿಸಿರುವ ಘಟನೆ ಬಗ್ಗೆ ಕೇಳಲು ತುಂಬ ದುಖಃವಾಗಿದೆ. ಈ ಘಟನೆ ಕುರಿತಂತೆ ಪೊಲೀಸರಿಗೆ ಸರಿಯಾಗಿ ತನಿಖೆ ನಡೆಸುವಂತೆ ನಿದೇಶಿಸಲು ಮತ್ತು ಪಂಜಾಬಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವಂತೆ ನಾನು ಚರಣ್‌ಜಿತ್‌ ಸಿಂಗ್‌ ಚೆನ್ನಿ ಅವರನ್ನು ಮನವಿ ಮಾಡುತ್ತೇನೆ’ ಎಂದು ಅಬ್ದುಲ್ಲಾ ಅವರು ಟ್ವಿಟ್‌ ಮಾಡಿದ್ದಾರೆ.

  ಇದುವರೆಗೂ ಯಾವುದೇ ಪೊಲೀಸ್‌ ದೂರು ದಾಖಲಾಗಿಲ್ಲ. ಇಂದು ಬೆಳಗ್ಗೆ ಎರಡೂ ಕಡೆಯವರು ಪೊಲೀಸ್‌ ಹಾಗೂ ಕಾಲೇಜು ಆಡಳಿತಾಧಿಕಾರಿಗಳ ಮುಂದೆ ಪರಸ್ಪರ ಕ್ಷಮೆ ಕೇಳಿರುವುದಾಗಿ ವರದಿಯಾಗಿದೆ.

  ಈ ಘಟನೆಗೆ ಸಂಬಂಧಿಸಿದಂತೆ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಒಡೆದ ಕುರ್ಚಿಗಳು, ಹರಿದು ಬಿದ್ದಿರುವ ಹಾಸಿಗೆಗಳು ಹಾಗೂ ಅವರ ದೇಹದ ಮೇಲೆ ಆಗಿರುವ ಗಾಯಗಳ ಗುರುತುಗಳು ಈ ವೀಡಿಯೋದಲ್ಲಿವೆ.

  ವಿಶ್ವಕಪ್​ನಲ್ಲಿ ಪಾಕ್ ವಿರುದ್ಧ ಭಾರತಕ್ಕೆ ಮೊದಲ ಸೋಲು:

  ಐಸಿಸಿ ಟಿಟ್ವೆಂಟಿ ವಿಶ್ವಕಪ್‌ನ ತನ್ನ ಆರಂಭಿಕ ಪಂದ್ಯದಲ್ಲಿ ಭಾರತವು ಪಾಕಿಸ್ತಾನದ ಎದರು 10 ವಿಕೆಟ್‌ಗಳ ಸೋಲು ಕಂಡಿತು. ಆದರೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪಂದ್ಯ ಮುಗಿದ ವೇಳೆ ಪಾಕಿಸ್ತಾನದ ಆಟಗಾರ ಮೊಹಮ್ಮದ್ ರಿಜ್ವಾನ್‌ರನ್ನು ಅಪ್ಪಿಕೊಂಡು ಅಭಿನಂದಿಸಿದರು. ಮತ್ತೊಬ್ಬ ಆಟಗಾರ ಪಾಕ್ ನಾಯಕ ಬಾಬರ್ ಅಜಂರಿಗೆ ಅಭಿನಂದನೆ ತಿಳಿಸಿದರು.

  ಈ ಫೋಟೊ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ "ನಿಜವಾದ ಕ್ರೀಡಾಸ್ಪೂರ್ತಿ" ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಅದೇ ರೀತಿ ಪಂದ್ಯದ ನಂತರ ಭಾರತದ ತಂಡದ ಮೆಂಟರ್ ಮಹೇಂದ್ರ ಸಿಂಗ್ ಧೋನಿ ಪಾಕಿಸ್ತಾನದ ಆಟಗಾರರ ಜೊತೆ ಮಾತುಕತೆ ನಡೆಸಿ ಕ್ರೀಡಾಭಿಮಾನಿಗಳ ಮನಗೆದ್ದಿದ್ದಾರೆ.

  ಇದನ್ನೂ ಓದಿ: Fake News in FaceBook| 2019ರ ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಸುಳ್ಳು ಸುದ್ದಿಗಳನ್ನು ಹರಡಲಾಗಿತ್ತು; ಸತ್ಯ ಬಿಚ್ಚಿಟ್ಟ ಫೇಸ್​ಬುಕ್

  ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ದುಕೊಂಡಿತು. ಪಾಕಿಸ್ತಾನದ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳು ತತ್ತರಿಸಿದರು. 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡ ಭಾರತ 151 ರನ್ ಪೇರಿಸಲಷ್ಟೇ ಸಾಧ್ಯವಾಯಿತು.

  ಇದನ್ನೂ ಓದಿ: T-Shirt for 50 paise: 50 ಪೈಸೆಗೆ 1 ಟಿ -ಶರ್ಟ್ ಕೊಡ್ತಾರೆ ಅಂತ ಮುಗಿಬಿದ್ದ ಜನ: ಕ್ರೌಡ್​ ಕಂಟ್ರೋಲ್​ ಮಾಡಲಾಗದೇ ಶಾಪ್​ ಕ್ಲೋಸ್​!

  ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ಯಾವುದೇ ವಿಕೆಟ್ ನಷ್ಟವಿಲ್ಲದೆ 152 ರನ್ ಗಳಿಸಿ ಗೆಲುವಿನ ಸಿಹಿ ಉಂಡಿತು. ಆ ಮೂಲಕ ಪಾಕಿಸ್ತಾನ ತಂಡವು ವಿಶ್ವಕಪ್ ಪಂದ್ಯಾವಳಿಗಳಲ್ಲಿ ಮೊದಲ ಬಾರಿಗೆ ಭಾರತದ ಎದುರು ಜಯ ದಾಖಲಿಸಿತು. ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್‌ ಅದ್ಭುತ ಜೊತೆಯಾಟವಾಡಿದರು.
  Published by:MAshok Kumar
  First published: