ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿ ಆರಂಭಕ್ಕೆ ಇನ್ನೇನು ಕೆಲವು ದಿನಗಳಷ್ಟೆ ಬಾಕಿಯಿದೆ. ಮಾರ್ಚ್ 29 ರಂದು ಈ ಹೊಡಬಡಿ ಆಟಕ್ಕೆ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣೆಸಾಟ ನಡೆಸಲಿವೆ. ಅಭಿಮಾನಿಗಳಂತು ಐಪಿಎಲ್ ಆರಂಭಕ್ಕೆ ತುದಿಗಾಲಿನಲ್ಲಿ ನಿಂತು ಕಾದುಕುಳಿತಿದ್ದು, ತಮ್ಮ ನೆಚ್ಚಿನ ತಂಡಕ್ಕೆ ಬೆಂಬಲಿಸುವ ಹುಮ್ಮಸ್ಸಿನಲ್ಲಿದ್ದಾರೆ.
ನಮ್ಮ ಬೆಂಗಳೂರು ಕುಟುಂಬ ರೆಡಿನಾ; ಚಹಾಲ್ ಕನ್ನಡ ಟ್ವೀಟ್ಗೆ ಬೆಂಗಳೂರು ಅಭಿಮಾನಿಗಳು ಫಿದಾ!
ಈ ನಡುವೆ ಬೆಂಗಳೂರಿನಲ್ಲೂ ಐಪಿಎಲ್ ಫೀವರ್ ಶುರುವಾಗಿದೆ. ಅಭಿಮಾನಿಗಳು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿ ಹಿಡಿಯಲಿದೆ ಎಂದು ಬಲವಾಗಿ ನಂಬಿದ್ದಾರೆ.
ಸದ್ಯ ಆರ್‌ಸಿಬಿ ಅಭಿಮಾನಿಗಳ ಗುಂಪೊಂದು, ಈ ಬಾರಿ ಕೊಹ್ಲಿ ಟೀಂ ಐಪಿಎಲ್ ಗೆದ್ದು ಬೀಗಲಿ ಎಂದು ಚಾಮುಂಡಿ ಅಮ್ಮನ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಅಭಿಮಾನಿಗಳು ಚಾಮಂಡಿ ಅಮ್ಮನವರ ದೇವಸ್ಥಾನಕ್ಕೆ ತೆರಳಿ ಆರ್‌ಸಿಬಿ ಧ್ವಜಕ್ಕೆ ಪೂಜೆ ಸಲ್ಲಿಸಿದ್ದಾರೆ. ನಂತರ 'ನಾನು ಕೆಲಸ ಬೇಕು ಎಂದು ಕೇಳಿಲ್ಲ, ಹಳೇ ಹುಡುಗಿ ವಾಪಸ್ ಬರಲಿ ಎಂದೂ ಕೇಳಿಕೊಂಡಿಲ್ಲ. ಆದರೆ, ಈ ಬಾರಿ ಆರ್‌ಸಿಬಿ ಪ್ರಶಸ್ತಿ ಗೆಲ್ಲಲಿ ಎಂದು ಬೇಡುತ್ತಿದ್ದೇನೆ. ಪ್ರಶಸ್ತಿ ಗೆಲ್ಲುವ ಹಾಗೆ ಮಾಡು ತಾಯಿ' ಎಂದು ಆರ್‌ಸಿಬಿ ಅಭಿಮಾನಿಗಳ ಗುಂಪೊಂದು ಪಾರ್ಥನೆ ಸಲ್ಲಿಸಿದೆ.
Shafali Verma: ಟಿ-20 ವಿಶ್ವಕಪ್ ಮುಗಿದ ಬೆನ್ನಲ್ಲೇ ಶಫಾಲಿಗೆ ಶಾಕ್ ಮೇಲೆ ಶಾಕ್!
“I am not praying for a job or for a girlfriend, I only want @RCBTweets to win this IPL, kindly bless the team,” says #RCB fans seeking blessings of goddess Chamundeshwari in #Mysuru. Holding the RCB flag fans also broke the ‘Edugayi’ to fulfil their vows. @XpressBengaluru pic.twitter.com/XNll5B1lwV
— Karthik Nayaka (@Karthiknayaka) March 9, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ