HOME » NEWS » Sports » CRICKET KARNATAKAS ALL ROUNDER VINAY KUMAR ANNOUNCES HIS RETIREMENT FROM ALL FORMS OF CRICKET MAK

Vinay Kumar: ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಕರ್ನಾಟಕದ ಖ್ಯಾತ ಆಲ್​ರೌಂಡರ್​ ವಿನಯ್​ ಕುಮಾರ್!

ಎರಡು ಪುಟಗಳ ಪತ್ರವನ್ನು ಬರೆದು ಅದನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳುವ ಮೂಲಕ ವಿನಯ್​ ಕುಮಾರ್​ ತಮ್ಮ ಕ್ರಿಕೆಟ್​ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದಾರೆ.

news18-kannada
Updated:February 26, 2021, 3:53 PM IST
Vinay Kumar: ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಕರ್ನಾಟಕದ ಖ್ಯಾತ ಆಲ್​ರೌಂಡರ್​ ವಿನಯ್​ ಕುಮಾರ್!
ವಿನಯ್ ಕುಮಾರ್.
  • Share this:
ಬೆಂಗಳೂರು (ಫೆಬ್ರವರಿ 26); ಕರ್ನಾಟಕದ ಖ್ಯಾತ ಆಲ್​ರೌಂಡರ್​, ರಾಜ್ಯದಲ್ಲಿ ಎರಡು ರಣಜಿ ಟ್ರೋಫಿ ಗೆದ್ದು ಕೊಟ್ಟ ನಾಯಕ ಮತ್ತು ದಾವಣಗೆರೆ ಎಕ್ಸ್​ಪ್ರೆಸ್​ ಖ್ಯಾತಿಯ ಕ್ರಿಕೆಟರ್​ ವಿನಯ್ ಕುಮಾರ್​ ಇಂದು ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ. ಎರಡು ಪುಟಗಳ ಪತ್ರವನ್ನು ಬರೆದು ಅದನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳುವ ಮೂಲಕ ವಿನಯ್​ ಕುಮಾರ್​ ತಮ್ಮ ಕ್ರಿಕೆಟ್​ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದಾರೆ.

ಭಾರತದ ರಾಷ್ಟ್ರೀಯ ತಂಡಕ್ಕೆ 2010ರಲ್ಲಿ ಜಿಂಬಾಂಬ್ವೆ ವಿರುದ್ಧ ಏಕದಿನ ಪಂದ್ಯಕ್ಕೆ ಪಾದಾಪರ್ಣೆ ಮಾಡಿದ್ದ ವಿನಯ್​ ಕುಮಾರ್ ಭಾರತದ ಪರ ಒಟ್ಟು 31 ಪಂದ್ಯಗಳನ್ನು ಆಡಿದ್ದು, 31 ವಿಕೆಟ್​ ಕಬಳಿಸಿದ್ದಾರೆ. ಒಂದು ಬಾರಿ ನಾಲ್ಕು ವಿಕೆಟ್​ ಗೊಂಚಲನ್ನೂ ಸಾಧಿಸಿದ್ದಾರೆ. ಇನ್ನೂ ಆಸ್ಟ್ರೇಲಿಯಾ ವಿರುದ್ಧ 2012ರಲ್ಲಿ ಒಂದೇ ಒಂದು ಟೆಸ್ಟ್​ ಪಂದ್ಯವನ್ನು ಆಡಿರುವ ವಿನಯ್ ಕುಮಾರ್​ 1 ವಿಕೆಟ್​ ಕಬಳಿಸುವಲ್ಲಿ ಮಾತ್ರ ಸಫಲರಾಗಿದ್ದಾರೆ.
ಇನ್ನೂ ಟಿ-20 ಯಲ್ಲೂ ಕಮಾಲ್ ಮಾಡಿರುವ ವಿನಯ್ ಕುಮಾರ್​ 9 ಪಂದ್ಯಗಳನ್ನು ಆಡಿದ್ದು, 10 ವಿಕೆಟ್​ ಕಬಳಿಸಿದ್ದಾರೆ. ಆದರೆ, ಟಿ-20 ಮಾದರಿಯಲ್ಲಿ ಕೇವಲ 7.84 ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು ಉತ್ತಮ ಬೌಲರ್​ ಎನಿಸಿದ್ದರು. ಆದರೆ, ತಮ್ಮ ವೇಗದಲ್ಲಿ ವೇರಿಯೇಷನ್​ ಇಲ್ಲದ ಪರಿಣಾಮ ಕ್ರಮೇಣ ಅವರು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡರು. ವಿನಯ್ ಕುಮಾರ್​ ಭಾರತದ ಪರ 2013 ನವೆಂಬರ್​ನಲ್ಲಿ ಆಸ್ಟ್ರೇಲಿಯಾ ಪರ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು.ಇದನ್ನೂ ಓದಿ: India vs England 3rd Test: ಇಂತಹ ಪಿಚ್ ಸಿಕ್ಕಿದ್ರೆ ಕುಂಬ್ಳೆ, ಹರ್ಭಜನ್ 1000 ವಿಕೆಟ್ ಕ್ಲಬ್ ನಲ್ಲಿರ್ತಿದ್ರು; ಯುವರಾಜ್ ಸಿಂಗ್ ಟೀಕೆ!

ಆದರೆ, ಕರ್ನಾಟಕ ನಾಯಕನಾಗಿ ವಿನಯ್ ಕುಮಾರ್​ ಅವರ ಹೆಸರಿನಲ್ಲಿ ಅತ್ಯುತ್ತಮ ರೆಕಾರ್ಡ್​ ಇದೆ. ವಿನಯ್ ಕುಮಾರ್​ ಕರ್ನಾಟಕ ತಂಡದ ನಾಯಕನಾಗಿದ್ದ ಅವಧಿಯಲ್ಲಿ 2013-14 ಮತ್ತು 2014-15ರ ಅವಧಿಯಲ್ಲಿ ಕರ್ನಾಟಕ ಎರಡು ಬಾರಿ ರಣಜಿ ಟ್ರೋಫಿಯನ್ನು ಗೆದ್ದ ಸಾಧನೆ ಮಾಡಿತ್ತು. ಆದರೆ, 2018ರ ವೇಳೆಗೆ ಪಾಂಡಿಚೇರಿ ತಂಡಕ್ಕೆ ವಲಸೆ ಹೋಗಿದ್ದ ವಿನಯ್ ಕುಮಾರ್​ ಅದೇ ವರ್ಷ 100 ಪಂದ್ಯವಾಡಿದ ಸಾಧನೆ ಮಾಡಿದ್ದರು. ಅಲ್ಲದೆ, ಅವರು ಈವರೆಗೆ 400 ರಣಿಜಿ ವಿಕೆಟ್​ಗಳನ್ನು ಕಬಳಿಸಿದ್ದಾರೆ.

ಇದಲ್ಲದೆ, ಐಪಿಎಲ್​ನಲ್ಲೂ ಆರ್​ಸಿಬಿ, ಕೋಲ್ಕತ್ತಾ ನೈಟ್​ ರೈಡರ್ಸ್​ ಮತ್ತು ಮುಂಬೈ ಇಂಡಿಯನ್ಸ್​ ಸೇರಿದಂತೆ ಹಲವಾರು ಫ್ರಾಂಚೈಸಿಗಳಿಗಾಗಿ ಆಡಿರುವ ವಿನಯ್ ಕುಮಾರ್​ 105 ಪಂದ್ಯಗಳಲ್ಲಿ 105 ವಿಕೆಟ್​ ಕಬಳಿಸಿದ್ದಾರೆ. 8.39 ಎಕಾನಮಿಯಲ್ಲಿ ರನ್​ ಬಿಟ್ಟುಕೊಟ್ಟಿದ್ದು, 310 ರನ್​ಗಳನ್ನೂ ಭಾರಿಸಿದ್ದಾರೆ. ಒಟ್ಟಾರೆ ಕರ್ನಾಟಕದ ಬೆಸ್ಟ್​ ಆಲ್​ರೌಂಡರ್​ ಎಂದೇ ಖ್ಯಾತಿ ಪಡೆದಿದ್ದ ವಿನಯ್ ಕುಮಾರ್​ ಕೊನೆಗೂ ಕ್ರಿಕೆಟ್​ ಅಂಗಳದಿಂದ ವಿದಾಯ ಪಡೆದಿದ್ದು, ಅವರ ಮುಂದಿನ ಬದುಕು ಸುಖಕರವಾಗಿರಲಿ ಎಂದು ಅನೇಕರು ಹಾರೈಸಿದ್ದಾರೆ.
Published by: MAshok Kumar
First published: February 26, 2021, 3:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories