Ranji Trophy 2019-20: ಡ್ರಾನಲ್ಲಿ ಅಂತ್ಯಕಂಡ ಕರ್ನಾಟಕ- ಮಧ್ಯಪ್ರದೇಶ ರಣಜಿ ಪಂದ್ಯ!

5 ರನ್​ಗಳ ಹಿನ್ನಡೆಯೊಂದಿಗೆ ತನ್ನ 2ನೇ ಇನ್ನಿಂಗ್ಸ್​ ಆರಂಭಿಸಿದ ಕರ್ನಾಟಕ 15 ಓವರ್​ನಲ್ಲಿ 1 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿದ್ದಾಗ ಪಂದ್ಯವನ್ನು ಡ್ರಾ ಮಾಡಲಾಯಿತು.

ಕೃಷ್ಣಪ್ಪ ಗೌತಮ್

ಕೃಷ್ಣಪ್ಪ ಗೌತಮ್

 • Share this:
  ಶಿವಮೊಗ್ಗ (ಫೆ. 07): ಕರ್ನಾಟಕ ಹಾಗೂ ಮಧ್ಯಪ್ರದೇಶ ನಡುವಣ ರಣಜಿ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದೆ. ಮ. ಪ್ರದೇಶ ಬ್ಯಾಟ್ಸ್​ಮನ್ ಆದಿತ್ಯ ಶ್ರೀವಸ್ತವ್ ಅತ್ಯುತ್ತಮ ಪ್ರದರ್ಶನ ತಂಡ ಸೋಲದಿರಲು ಕಾರಣವಾಯಿತು. ಈ ಮೂಲಕ ಕರ್ನಾಟಕ 1 ಅಂಕ ಸಂಪಾದಿಸಿದರೆ, ಮಧ್ಯಪ್ರದೇಶ 3 ಪಾಯಿಂಟ್​ ತನ್ನದಾಗಿಸಿತು.

  ಮಧ್ಯಪ್ರದೇಶ ರಾಜ್ಯ ತಂಡದ ವಿರುದ್ಧದ ದಿಟ್ಟ ಹೋರಾಟ  ನಡೆಸಿತು. ಆರಂಭಲ್ಲೆ ಪ್ರಮುಖ ವಿಕೆಟ್ ಕಳೆದುಕೊಂಡಿತಾದರು ಬಳಿಕ ಆದಿತ್ಯ ಶ್ರೀವಸ್ತವ್ ಅವರ ಶತಕ ಹಾಗೂ ವೆಂಕಟೇಶ್ ಅಯ್ಯರ್ ಅರ್ಧಶತಕದ ನೆರವಿನಿಂದ  ಮೂರನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 311 ರನ್ ಕಲೆಹಾಕಿತ್ತು.

  IND vs NZ: ನಾಳೆ ಎರಡನೇ ಏಕದಿನ; ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 3 ಬದಲಾವಣೆ?

  ಮಧ್ಯಪ್ರದೇಶ ಎರಡನೇ ದಿನದಾಟದ ಮುಕ್ತಾಯಕ್ಕೆ 34 ಓವರ್‌ಗಳಲ್ಲಿ 2 ವಿಕೆಟ್‌ಗೆ 60 ರನ್‌ ಗಳಿಸಿತ್ತು. ನಿನ್ನೆ ಮೂರನೇ ದಿನದಾಟದ ಆರಂಭದಲ್ಲೇ ಯಶ್ ದುಬೆ 45 ರನ್ ಗಳಿಸಿ ಶ್ರೇಯಸ್ ಗೋಪಾಲ್ ಬೌಲಿಂಗ್​ನಲ್ಲಿ ಔಟ್ ಆದರೆ, ನಾಯಕ ಶುಭಂ ಶರ್ಮಾ ಆಟ 25 ರನ್​ಗೆ ಅಂತ್ಯವಾಯಿತು.

     ಬಳಿಕ ನಡೆದಿದ್ದು ಆದಿತ್ಯ ಶ್ರೀವಸ್ತವ್ ಹಾಗೂ ವೆಂಕಟೇಶ್ ಅಯ್ಯರ್ ಆಟ. ಕ್ರೀಸ್ ಕಚ್ಚಿ ಆಡಿದ ಈ ಜೋಡಿ ತಂಡಕ್ಕೆ ಆಸರೆಯಾಗಿ ನಿಂತಿತು. ಕರ್ನಾಟಕ ಬೌಲರ್​ಗಳನ್ನು ಕಾಡಿದ ಈ ಜೋಡಿ 200 ರನ್​ಗಳ ಜೊತೆಯಾಟ ಆಡಿತು. ವೇಂಕಟೇಶ್ 217 ಎಸೆತಗಳಲ್ಲಿ 86 ರನ್ ಗಳಿಸಿದರು.

  ತ್ರಿಕೋನ ಸರಣಿ; ಭಾರತದ ಮಹಿಳೆಯರಿಗೆ ಮತ್ತೊಂದು ಸೋಲು; ಇಂಗ್ಲೆಂಡ್​ಗೆ 4 ವಿಕೆಟ್​ಗಳ ಜಯ

  ಇತ್ತ ಆದಿತ್ಯ ಅಮೋಘ ಆಟ ಪ್ರದರ್ಶಿಸಿ 339 ಎಸೆತಗಳಲ್ಲಿ 192 ರನ್ ಕಲೆಹಾಕಿ ತಂಡಕ್ಕೆ ನೆರವಾದರು. ಅಂತಿಮವಾಗಿ ಮ. ಪ್ರದೇಶ 156.4 ಓವರ್​ನಲ್ಲಿ 431 ರನ್​ಗೆ ಆಲೌಟ್ ಆಯಿತು. ರಾಜ್ಯ ತಂಡದ ಪರ ಅಭಿಮನ್ಯು ಮಿಥುನ್ 3 ವಿಕೆಟ್ ಕಿತ್ತರೆ, ರೋನ್ ಮೋರ್ ಹಾಗೂ ಕೆ. ಗೌತಮ್ ತಲಾ 2 ವಿಕೆಟ್ ಪಡೆದರು.

  5 ರನ್​ಗಳ ಹಿನ್ನಡೆಯೊಂದಿಗೆ ತನ್ನ 2ನೇ ಇನ್ನಿಂಗ್ಸ್​ ಆರಂಭಿಸಿದ ಕರ್ನಾಟಕ 15 ಓವರ್​ನಲ್ಲಿ 1 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿದ್ದಾಗ ಪಂದ್ಯವನ್ನು ಡ್ರಾ ಮಾಡಲಾಯಿತು. ದೇವದತ್ ಪಡಿಕ್ಕಲ್ 31 ಹಾಗೂ ರೋಹನ್ ಕದಮ್ 16 ರನ್ ಗಳಿಸಿದ್ದರು.

  ಇದಕ್ಕೂ ಮೊದಲು ಕರ್ನಾಟಕ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಭರ್ಜರಿ ಆಟ ಪ್ರದರ್ಸಿಸಿತು. 83 ರನ್​ಗೆ 3 ವಿಕೆಟ್ ಕಳೆದುಕೊಂಡ ಕರ್ನಾಟಕ ತುಸು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಆರ್. ಸಮರ್ಥ್ ಮತ್ತು ಕೃಷ್ಣಮೂರ್ತಿ ಸಿದ್ಧಾರ್ಥ್ ಜೊತೆಗೂಡಿ 4ನೇ ವಿಕೆಟ್​ಗೆ 161 ರನ್​ಗಳ ಜೊತೆಯಾಟದಲ್ಲಿ ಭಾಗಿಯಾದರು.

  7th February 1999: ಒಂದೇ ಇನ್ನಿಂಗ್ಸ್​ನಲ್ಲಿ 10 ವಿಕೆಟ್; ಕುಂಬ್ಳೆ ಐತಿಹಾಸಿಕ ದಾಖಲೆಗೆ 21 ವರ್ಷ

  ಸಮರ್ಥ್​​ 300 ಎಸೆತಗಳಲ್ಲಿ 108 ರನ್ ಬಾರಿಸಿದರೆ, ಸಿದ್ಧಾರ್ಥ್​ 146 ಎಸೆತಗಳಲ್ಲಿ 62 ರನ್ ಗಳಿಸಿದರು. ಬಳಿಕ ಬಂದ ಬ್ಯಾಟ್ಸ್​ಮನ್​ಗಳ ಪೈಕಿ ಕೃಷ್ಣಪ್ಪ ಗೌಥಮ್ ಸ್ಫೋಟಕ ಬ್ಯಾಟಿಂಗ್ ನಡೆಸಿ 68 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್ ಸಿಡಿಸಿ 82 ರನ್ ಚಚ್ಚಿದರೆ, ಶ್ರೆಯಸ್ ಗೋಪಾಲ್ 50 ರನ್ ಕಲೆಹಾಕಿದರು. ಕರ್ನಾಟಕ ತಂಡ ಅಂತಿಮವಾಗಿ 132 ಓವರ್​​​ನಲ್ಲಿ 426 ರನ್​ಗೆ ಆಲೌಟ್ ಆಯಿತು.

  ಸದ್ಯ ಕರ್ನಾಟಕ ತಂಡ ಆಡಿದ 7 ಪಂದ್ಯಗಳ ಪೈಕಿ ಮೂರರಲ್ಲಿ ಗೆದ್ದರೆ, 4 ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದೆ. 25 ಅಂಕ ಸಂಪಾದಿಸಿ ಐದನೇ ಸ್ಥಾನದಲ್ಲಿದೆ.

  First published: