• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • Syed Mushtaq Ali Trophy – ಕ್ವಾರ್ಟರ್​ಫೈನಲ್​ನಲ್ಲಿ ಕರ್ನಾಟಕಕ್ಕೆ ಪಂಜಾಬ್ ಸವಾಲು; ಇಲ್ಲಿದೆ ವಿವರ

Syed Mushtaq Ali Trophy – ಕ್ವಾರ್ಟರ್​ಫೈನಲ್​ನಲ್ಲಿ ಕರ್ನಾಟಕಕ್ಕೆ ಪಂಜಾಬ್ ಸವಾಲು; ಇಲ್ಲಿದೆ ವಿವರ

Cricket

Cricket

ಕರ್ನಾಟಕ, ಪಂಜಾಬ್, ತಮಿಳುನಾಡು, ಹಿಮಾಚಲ ಪ್ರದೇಶ, ಹರಿಯಾಣ, ಬರೋಡಾ, ರಾಜಸ್ಥಾನ ಮತ್ತು ಬಿಹಾರ ತಂಡಗಳು ಕ್ವಾರ್ಟರ್​ಫೈನಲ್ ಪ್ರವೇಶಿಸಿವೆ. ಜ. 26 ಮತ್ತು 27ರಂದು ಅಹ್ಮದಾಬಾದ್​ನಲ್ಲೇ ಎಲ್ಲಾ ನಾಕೌಟ್ ಪಂದ್ಯಗಳು ನಡೆಯಲಿವೆ.

 • Cricketnext
 • 2-MIN READ
 • Last Updated :
 • Share this:

  ಬೆಂಗಳೂರು(ಜ. 22): ಸಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕಕ್ಕೆ ಹ್ಯಾಟ್ರಿಕ್ ಪ್ರಶಸ್ತಿ ಪಡೆಯಲು ಇನ್ನು ಮೂರು ಗೆಲುವು ಬಾಕಿ ಇದೆ. ಕೊನೆ ಕ್ಷಣದವರೆಗೆ ಇದ್ದ ತೂಗುಯ್ಯಾಲೆ ಸ್ಥಿತಿಯಲ್ಲಿ ಕರ್ನಾಟಕ ಕ್ವಾರ್ಟರ್​ಫೈನಲ್ ಸುತ್ತು ಪ್ರವೇಶಿಸಿದ್ದಾಗಿದೆ. ಇದೀಗ ಎಂಟರ ಹಂತದ ಪಂದ್ಯಗಳ ಎದುರಾಳಿಗಳ ಪಟ್ಟಿ ಸಿದ್ಧವಾಗಿದೆ. ಕರ್ನಾಟಕಕ್ಕೆ ಪಂಜಾಬ್ ಸವಾಲೊಡ್ಡುತ್ತಿದೆ. ಗ್ರೂಪ್ ಹಂತದಲ್ಲಿ ಪಂಜಾಬ್ ಎದುರು ಸೋತಿದ್ದ ಕರ್ನಾಟಕ್ಕೆ ಈಗ ಸೇಡು ತೀರಿಸಿಕೊಂಡು ಸೆಮಿಫೈನಲ್ ತಲುಪುವ ಅವಕಾಶ ಸಿಕ್ಕಿದೆ. ಅಹ್ಮದಾಬಾದ್​ನಲ್ಲಿ ಜ. 26ರಂದು ಮಧ್ಯಾಹ್ನ 12ಕ್ಕೆ ಪಂದ್ಯ ನಡೆಯಲಿದೆ. ಸ್ಟಾರ್ ಸ್ಪೋರ್ಟ್ ಟಿವಿ ವಾಹಿನಿಗಳಲ್ಲಿ ಮತ್ತು ಹಾಟ್​ಸ್ಟಾರ್​ನಲ್ಲಿ ನೇರ ಪ್ರಸಾರ ಇರಲಿದೆ.


  ಕರ್ನಾಟಕ ಮತ್ತು ಪಂಜಾಬ್ ತಂಡಗಳ ಜೊತೆ ತಮಿಳುನಾಡು, ಹಿಮಾಚಲ ಪ್ರದೇಶ, ಹರಿಯಾಣ, ಬರೋಡಾ, ರಾಜಸ್ಥಾನ ಮತ್ತು ಬಿಹಾರ ತಂಡಗಳು ಕ್ವಾರ್ಟರ್​ಫೈನಲ್ ಪ್ರವೇಶಿಸಿವೆ. ಕರ್ನಾಟಕ ಮತ್ತು ಹಿಮಾಚಲ ಪ್ರದೇಶ ಬಿಟ್ಟು ಉಳಿದ ತಂಡಗಳು ತಮ್ಮ ತಮ್ಮ ಗುಂಪುಗಳಲ್ಲಿ ಅಗ್ರಸ್ಥಾನ ಪಡೆದು ಕ್ವಾಲಿಫೈ ಆಗಿವೆ. ಕರ್ನಾಟಕ, ಹಿ.ಪ್ರ. ತಂಡಗಳು ರನ್ ರೇಟ್ ಮತ್ತು ಪಾಯಿಂಟ್ ಆಧಾರದಲ್ಲಿ ಅರ್ಹತೆ ಪಡೆದಿವೆ. ಪ್ಲೇಟ್ ಗ್ರೂಪ್​ನಿಂದ ಬಿಹಾರ ತಂಡ ಕ್ವಾಲಿಫೈ ಆಗಿದೆ. ಸೆಮಿಫೈನಲ್, ಫೈನಲ್ ಅನ್ನೂ ಒಳಗೊಂಡಂತೆ ಎಲ್ಲಾ ನಾಕೌಟ್ ಪಂದ್ಯಗಳು ಅಹ್ಮದಾಬಾದ್​ನಲ್ಲೇ ನಡೆಯಲಿವೆ.


  ಇದನ್ನೂ ಓದಿ: IPL 2021: ಹರಾಜಿಗೂ ಮುನ್ನ ಅಚ್ಚರಿ ಮೂಡಿಸಿದ RCB ನಡೆ..!


  ಈ ಟೂರ್ನಿಯಲ್ಲಿ ಅತಿ ಹೆಚ್ಚು ಅಚ್ಚರಿ ಮೂಡಿಸಿದ್ದು ಮುಂಬೈ ತಂಡದ ಸಾಧನೆ. ಇಲೈಟ್ ಇ ಗ್ರೂಪ್​ನಲ್ಲಿದ್ದ ಮುಂಬೈ ಕೇವಲ ಒಂದು ಗೆಲುವಿನೊಂದಿಗೆ ಕೊನೆಯ ಸ್ಥಾನ ಗಳಿಸಿ ನಿರಾಶೆ ಉಂಟು ಮಾಡಿದೆ. ಡೆಲ್ಲಿ, ಹೈದರಾಬಾದ್, ಸೌರಾಷ್ಟ್ರ, ಉತ್ತರ ಪ್ರದೇಶದಂಥ ಬಲಿಷ್ಠ ತಂಡಗಳೂ ನಾಕೌಟ್ ಹಂತಕ್ಕೆ ಅರ್ಹತೆ ಪಡೆಯಲು ವಿಫಲವಾಗಿವೆ.  ಸಯದ್ ಮುಷ್ತಾಕ್ ಅಲಿ ಟ್ರೋಫಿ ನಾಕೌಟ್ ಹಂತದ ವೇಳಾಪಟ್ಟಿ:


  ಕ್ವಾರ್ಟರ್​ಫೈನಲ್ ಪಂದ್ಯಗಳು (ಮಧ್ಯಾಹ್ನ 12ರಿಂದ):
  ಜ. 26 – ಕರ್ನಾಟಕ ಮತ್ತು ಪಂಜಾಬ್
  ಜ. 26 – ತಮಿಳುನಾಡು ಮತ್ತು ಹಿಮಾಚಲ ಪ್ರದೇಶ
  ಜ. 27 – ಹರಿಯಾಣ ಮತ್ತು ಬರೋಡಾ
  ಜ. 27 – ರಾಜಸ್ಥಾನ ಮತ್ತು ಬಿಹಾರ


  ಸೆಮಿಫೈನಲ್ ಪಂದ್ಯಗಳು: ಜ. 29 (ಸಂಜೆ 7ರಿಂದ)


  ಫೈನಲ್ ಪಂದ್ಯ: ಜ. 31 (ಸಂಜೆ 7ರಿಂದ)

  Published by:Vijayasarthy SN
  First published: