MS Dhoni: ಅಪ್ಪನ ಜೊತೆ ಬೈಕ್ ಏರಿ ಜಾಲಿ ರೈಡ್ ನಡೆಸಿದ ಝೀವಾ ಧೋನಿ; ಇಲ್ಲಿದೆ ವಿಡಿಯೋ

Ziva Dhoni: ಸದ್ಯ ಧೋನಿ ಅವರು ಝೀವಾ ಜೊತೆ ತೋಟದ ಒಳಗೆ ಬೈಕು ಸವಾರಿ ಮಾಡುತ್ತಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಎಮ. ಎಸ್ ಧೋನಿ ಹಾಗೂ ಝೀವಾ.

ಎಮ. ಎಸ್ ಧೋನಿ ಹಾಗೂ ಝೀವಾ.

  • Share this:
    ಭಾರತದಲ್ಲಿ ಕೊರೋನಾ ವೈರಸ್ ರುದ್ರನರ್ತನ ತೋರುತ್ತಿರುವ ಪರಿಣಾಮ ಲಾಕ್​ಡೌನ್ ಚಾಲ್ತಿಯಲ್ಲಿದೆ. ಕ್ರೀಡಾ ಲೋಕವೂ ಕೊರೋನಾ ಹೊಡೆತಕ್ಕೆ ಸಿಲುಕಿ ಇಡೀ ಕ್ರಿಕೆಟ್ ಜಗತ್ತು ಸ್ತಬ್ದಗೊಂಡಿದೆ. ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೂಡ ಮುಂದಿನ ಆದೇಶದ ವರೆಗೆ ರದ್ದು ಮಾಡಲಾಗಿದೆ.

    ಹೀಗಾಗಿ ಆಟಗಾರರೆಲ್ಲ ಮನೆಯಲ್ಲಿಯೇ ಕುಳಿತು ಕುಟುಂಬದವರ ಜೊತೆ ಸಮಯ ಕಳೆಯುತ್ತಿದ್ದಾರೆ. ಅದರಲ್ಲೂ ಟೀಂ ಇಂಡಿಯಾ ಆಟಗಾರರು ಸಾಮಾಜಿಕ ತಾಲತಾಣಗಳಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಲೈವ್​ ಬರುವುದರಿಂದ ಹಿಡಿದು ಟಿಕ್​ಟಾಕ್ ವಿಡಿಯೋ ಮಾಡುವುದರಲ್ಲಿ ಭಾರತೀಯ ಆಟಗಾರರು ಬ್ಯುಸಿ ಆಗಿದ್ದಾರೆ.

    Hardik Pandya: ನೆನಪಿನ ಬುತ್ತಿ ಬಿಚ್ಚಿಟ್ಟ ಹಾರ್ದಿಕ್ ಪಾಂಡ್ಯ; 2011ರ ಫೋಟೋ ಭಾರೀ ವೈರಲ್

    ಅಂತೆಯೆ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಬಿಡುವಿನ ವೇಳೆಯನ್ನು ಪತ್ನಿ ಸಾಕ್ಷಿ ಮತ್ತು ಮಗಳು ಝೀವಾ ಜೊತೆ ಕಳೆಯುತ್ತಿದ್ದಾರೆ. ಸದ್ಯ ಧೋನಿ ಅವರು ಝೀವಾ ಜೊತೆ ತೋಟದ ಒಳಗೆ ಬೈಕು ಸವಾರಿ ಮಾಡುತ್ತಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

    ಸಾಕ್ಷಿ ಧೋನಿ ಈ ವಿಡಿಯೋ ಹಂಚಿಕೊಂಡಿದ್ದು, 'ಇಬ್ಬರು ಮಕ್ಕಳು ಆಟವಾಡುತ್ತಿದ್ದಾರೆ. ಒಂದು ದೊಡ್ಡ ಮಗು ಮತ್ತೊಂದು ಸಣ್ಣ ಮಗು' ಎಂದು ಬರೆದುಕೊಂಡಿದ್ದಾರೆ.

     



    ಇತ್ತೀಚೆಗಷ್ಟೆ ಧೋನಿ ಪತ್ನಿ ಸಾಕ್ಷಿ ತನ್ನ ಇನ್‌ಸ್ಟಾಗ್ರಾಂನಲ್ಲಿ ಮುದ್ದಾದ ಚಿತ್ರವೊಂದನ್ನು ಶೇರ್ ಮಾಡಿಕೊಂಡಿದ್ದರು. ಧೋನಿ ಮತ್ತು ಸಾಕ್ಷಿ ಬೆಡ್‌ರೂಮಿನಲ್ಲಿರುವ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 'ಮಿಸ್ಟರ್ ಸ್ವೀಟಿಯಿಂದ ನೀವು ಗಮನ ಹರಿಸಿಕೊಳ್ಳುವ ಸಮಯ. ವೀಡಿಯೋ ಗೇಮ್ಸ್ vs ವೈಫ್' ಎಂದು ಇನ್‌ಸ್ಟಾಗ್ರಾಂ ಚಿತ್ರದಲ್ಲಿ ಸಾಕ್ಷಿ ಬರೆದುಕೊಂಡಿದ್ದರು.

    ಕನ್ನಡಿಗನ ಸಾಧನೆಗೆ ತಕ್ಕ ಗೌರವ ಸಿಕ್ಕಿಲ್ಲವೆಂದ ಖ್ಯಾತ ವಿದೇಶಿ ಆಟಗಾರ..!

     




    ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೋತು ಹೊರ ಬಿದ್ದಿತ್ತು. ಧೋನಿ ಆಡಿದ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಅದೇ ಆಗಿದೆ. ಆ ಬಳಿಕ ಧೋನಿ ಮೈದಾನಕ್ಕಿಳಿಯಲಿಲ್ಲ.

    ಐಪಿಎಲ್ ಬಳಿಕ ಧೋನಿ ಮತ್ತೆ ಕ್ರಿಕೆಟ್ ಅಂಗಳಕ್ಕೆ ಬರಲಿದ್ದಾರೆ ಎನ್ನಲಾಗಿತ್ತು. ಆದರೆ ಸದ್ಯ ಕೊರೊನಾದಿಂದಾಗಿ ಐಪಿಎಲ್ ಟೂರ್ನಿಯೇ ರದ್ದಾಗಿಬಿಟ್ಟಿದೆ. ಹೀಗಾಗ ಧೋನಿ ಕ್ರಿಕೆಟ್ ಭವಿಷ್ಯವೂ ತೂಗುಯ್ಯಾಲೆಯಲ್ಲಿದೆ.

     



     




    View this post on Instagram




     

    ❤️


    A post shared by Sakshi Singh Dhoni (@sakshisingh_r) on








     




    View this post on Instagram




     

    ❤️


    A post shared by Sakshi Singh Dhoni (@sakshisingh_r) on








     




    View this post on Instagram





     

    A post shared by ZIVA SINGH DHONI (@ziva_singh_dhoni) on




    First published: