SMAT – ಸಯದ್ ಮುಷ್ತಾಕ್ ಅಲಿ ಟ್ರೋಫಿ: ಪಂಜಾಬ್ ಎದುರು ಕರ್ನಾಟಕಕ್ಕೆ ಸೋಲು

ಬೆಂಗಳೂರಿನಲ್ಲಿ ನಡೆದ ಮುಷ್ತಾಕ್ ಅಲಿ ಟ್ರೋಫಿಯ ಇಲೈಟ್ ಎ ಗುಂಪಿನ ಪಂದ್ಯದಲ್ಲಿ ಕರ್ನಾಟಕದ 125 ರನ್ ಮೊತ್ತವನ್ನ ಪಂಜಾಬ್ ಇನ್ನೂ 32 ಎಸೆತ ಬಾಕಿ ಇರುವಂತೆಯೇ ನಿರಾಯಾಸವಾಗಿ ಗೆಲುವು ಸಾಧಿಸಿದೆ.

Cricket

Cricket

  • Share this:
    ಬೆಂಗಳೂರು(ಜ. 12): ಸಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಜಮ್ಮು-ಕಾಶ್ಮೀರ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದ ಕರ್ನಾಟಕ ತನ್ನ ಎರಡನೇ ಪಂದ್ಯದಲ್ಲಿ ಪಂಜಾಬ್ ಎದುರು ಸೋಲಪ್ಪಿದೆ. ಇಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ 9 ವಿಕೆಟ್​ಗಳಿಂದ ಸುಲಭವಾಗಿ ಶರಣಾಯಿತು. ಪಂಜಾಬ್ ತಂಡ ಸತತ ಎರಡನೇ ಗೆಲುವಿನೊಂದಿಗೆ ಇಲೈಟ್ ಎ ಗ್ರೂಪ್​ನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಈ ಪಂದ್ಯದಲ್ಲಿ ಕರ್ನಾಟಕದ 125 ರನ್​ಗಳ ಸಾಧಾರಣ ಮೊತ್ತಕ್ಕೆ ಪ್ರತಿಯಾಗಿ ಪಂಜಾಬ್ ಇನ್ನೂ 5 ಓವರ್ ಬಾಕಿ ಇರುವಂತೆಯೇ ಗೆಲುವಿನ ದಡ ಮುಟ್ಟಿತು.

    ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ ನಿಗದಿತ 20 ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 125 ರನ್ ಪೇರಿಸಿತು. ರೋಹನ್ ಕದಮ್ 32 ರನ್ ಗಳಿಸಿದ್ದು ಗರಿಷ್ಠ ಸ್ಕೋರೆನಿಸಿತು. ಉಳಿದವರಾರೂ 20 ರನ್​ಗಿಂತ ಹೆಚ್ಚು ರನ್ ಗಳಿಸಲಿಲ್ಲ. ಕೆಎಲ್ ರಾಹುಲ್, ಮಯಂಕ್ ಅಗರ್ವಾಲ್ ಅನುಪಸ್ಥಿತಿಯಲ್ಲಿ ಕರ್ನಾಟಕದ ಬ್ಯಾಟುಗಾರರು ಪರದಾಡಿದರು. ದೇವದತ್ ಪಡಿಕ್ಕಲ್, ಕರುಣ್ ನಾಯರ್ ಅವರು ಹೆಚ್ಚು ಹೊತ್ತು ಕ್ರೀಸ್​ನಲ್ಲಿ ಉಳಿಯಲಿಲ್ಲ.

    ಗೆಲ್ಲಲು ಕರ್ನಾಟಕ ಒಡ್ಡಿದ 126 ರನ್ ಗುರಿಯನ್ನು ಮುಟ್ಟಲು ಪಂಜಾಬ್ ಹೆಚ್ಚು ಆಯಾಸ ಪಡಲಿಲ್ಲ. ಪ್ರಭಸಿಮ್ರಾನ್ ಸಿಂಗ್ 52 ಎಸೆತಗಳಲ್ಲಿ ಅಜೇಯ 89 ರನ್ ಗಳಿಸಿ ತಂಡದ ಗೆಲುವಿನ ಓಟವನ್ನು ಸುಲಭಗೊಳಿಸಿದರು. ಕರ್ನಾಟಕಕ್ಕೆ ಇನ್ನು ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶ, ರೈಲ್ವೇಸ್ ಮತ್ತು ತ್ರಿಪುರಾ ರಾಜ್ಯ ತಂಡಗಳ ಸವಾಲು ಇದೆ.

    ಇದನ್ನೂ ಓದಿ: Sreesanth: ಶ್ರೀಶಾಂತ್ ಭರ್ಜರಿ ಕಮ್​ಬ್ಯಾಕ್: 7 ವರ್ಷಗಳ ಬಳಿಕ ಆಡಿದ ಮೊದಲ ಪಂದ್ಯದಲ್ಲೇ ವಿಕೆಟ್: ವಿಡಿಯೋ

    ಸ್ಕೋರು ವಿವರ:

    ಕರ್ನಾಟಕ 20 ಓವರ್ 125/8
    (ರೋಹನ್ ಕದಮ್ 32, ದೇವದತ್ ಪಡಿಕ್ಕಲ್ 19, ಪವನ್ ದೇಶಪಾಂಡೆ 16, ಕೃಷ್ಣಪ್ಪ ಗೌತಮ್ 13, ಕರುಣ್ ನಾಯರ್ 13 ರನ್ – ಸಿದ್ಧಾರ್ಥ್ ಕೌಲ್ 26/4, ಅರ್ಷದೀಪ್ ಸಿಂಗ್ 18/2)

    ಪಂಜಾಬ್ 14.4 ಓವರ್ 127/1
    (ಪ್ರಭಸಿಮ್ರಾನ್ ಸಿಂಗ್ ಅಜೇಯ 89, ಅಭಿಷೇಕ್ ಶರ್ಮಾ 30 ರನ್)
    Published by:Vijayasarthy SN
    First published: