Ranji Trophy – ಸೌರಾಷ್ಟ್ರ ವಿರುದ್ಧ ಸೋಲಿನ ಭೀತಿಯಲ್ಲಿ ಕರ್ನಾಟಕ

ಸೌರಾಷ್ಟ್ರದ ಜಯದೇವ್ ಉನಾದ್ಕತ್ ಅವರ ಮಾರಕ ಬೌಲಿಂಗ್ ದಾಳಿಗೆ ಕರ್ನಾಟಕ ಪಡೆಯ ಬೆನ್ನೆಲುಬು ಮುರಿದುಹೋಯಿತು. ನಾಲ್ವರು ಟಾಪ್ ಬ್ಯಾಟುಗಾರರನ್ನು ಉನಾದ್ಕತ್ ಬಲಿಪಡೆದರು. 171 ರನ್​ಗೆ ಆಲೌಟ್ ಆದ ಕರ್ನಾಟಕ 410 ರನ್​ಗಳ ಭಾರೀ ಮೊದಲ ಇನ್ನಿಂಗ್ಸ್ ಹಿನ್ನಡೆ ಕಂಡಿತು.

Vijayasarthy SN | news18
Updated:January 13, 2020, 6:18 PM IST
Ranji Trophy – ಸೌರಾಷ್ಟ್ರ ವಿರುದ್ಧ ಸೋಲಿನ ಭೀತಿಯಲ್ಲಿ ಕರ್ನಾಟಕ
ಜಯದೇವ್ ಉನಾದ್ಕತ್
  • News18
  • Last Updated: January 13, 2020, 6:18 PM IST
  • Share this:
ರಾಜಕೋಟ್(ಜ. 13): ಈ ಬಾರಿಯ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡ ತನ್ನ ಐದನೇ ಪಂದ್ಯದಲ್ಲಿ ಸೋಲಿನ ಸುಳಿಗೆ ಸಿಲುಕಿದೆ. ಸೌರಾಷ್ಟ್ರ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಕರ್ನಾಟಕದ ಮೊದಲ ಇನ್ನಿಂಗ್ಸ್ 171 ರನ್​ಗೆ ಅಂತ್ಯಗೊಂಡು ಫಾಲೋ ಆನ್ ಪಡೆದಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಕರ್ನಾಟಕ ತನ್ನ ಎರಡನೇ ಇನ್ನಿಂಗ್ಸಲ್ಲಿ ವಿಕೆಟ್ ನಷ್ಟವಿಲ್ಲದೆ 30 ರನ್ ಗಳಿಸಿದೆ. ಶ್ರೇಯಸ್ ಗೋಪಾಲ್ ನಾಯಕತ್ವದ ಕರ್ನಾಟಕ ತಂಡಕ್ಕೆ ಗೆಲುವಿನ ಆಸೆ ಸಂಪೂರ್ಣ ಕಮರಿಹೋಗಿದೆ. ಈಗೇನಿದ್ದರೂ ಒಂದು ಅಂಕವನ್ನಾದರೂ ದಕ್ಕಿಸಿಕೊಳ್ಳುವ ಅವಕಾಶ ಮಾತ್ರ ಸ್ವಲ್ಪ ಜೀವಂತವಿದೆ.

ಸೌರಾಷ್ಟ್ರದ 581 ರನ್​ಗಳ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ನಿನ್ನೆ ಕರ್ನಾಟಕ ತಂಡ ಒಂದು ವಿಕೆಟ್ ನಷ್ಟಕ್ಕೆ 13 ರನ್ ಗಳಿಸಿ ದಿನಾಂತ್ಯಗೊಳಿಸಿತ್ತು. ಕರ್ನಾಟಕದ ನೂತನ ಸ್ಟಾರ್ ದೇವದತ್ ಪಡಿಕ್ಕಲ್ ಒಂದೇ ಎಸೆತಕ್ಕೆ ಬಲಿಯಾಗಿ ತಂಡಕ್ಕೆ ಆರಂಭಿಕ ಆಘಾತವಾಗಿತ್ತು. ಇಂದು ಮೂರನೇ ದಿನದಾಟ ಮುಂದುವರಿಸಿದ ಕರ್ನಾಟಕದ ಶೋಚನೀಯ ಸ್ಥಿತಿ ಮುಂದುವರಿಯುತ್ತಲೇ ಹೋಯಿತು. ರವಿಕುಮಾರ್ ಸಮರ್ಥ್, ರೋಹನ್ ಕದಮ್ ಮತ್ತು ಪ್ರವೀಣ್ ದುಬೇ ಹೊರತುಪಡಿಸಿ ಉಳಿದವರ್ಯಾರೂ ಹೆಚ್ಚು ರನ್ ಗಳಿಸಲಿಲ್ಲ. ಪಡಿಕ್ಕಲ್​ರಂತೆಯೇ ಕೆ. ಸಿದ್ಧಾರ್ಥ್ ಕೂಡ ಶೂನ್ಯ ಸಂಪಾದನೆ ಮಾಡಿದರು. ಯಾವ ಹಂತದಲ್ಲೂ ಉತ್ತಮ ಇನ್ನಿಂಗ್ಸ್ ಕಟ್ಟುವ ಪ್ರಯತ್ನ ಆಗಲೇ ಇಲ್ಲ.

ಇದನ್ನೂ ಓದಿ: ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ; ಕನ್ನಡಿಗ ಮಯಾಂಕ್, ಬುಮ್ರಾ, ಶಫಾಲಿ ಸೇರಿ ಅನೇಕರಿಗೆ ಗೌರವ!

ಸೌರಾಷ್ಟ್ರದ ಜಯದೇವ್ ಉನಾದ್ಕತ್ ಅವರ ಮಾರಕ ಬೌಲಿಂಗ್ ದಾಳಿಗೆ ಕರ್ನಾಟಕ ಪಡೆಯ ಬೆನ್ನೆಲುಬು ಮುರಿದುಹೋಯಿತು. ನಾಲ್ವರು ಟಾಪ್ ಬ್ಯಾಟುಗಾರರನ್ನು ಉನಾದ್ಕತ್ ಬಲಿಪಡೆದರು. 171 ರನ್​ಗೆ ಆಲೌಟ್ ಆದ ಕರ್ನಾಟಕ 410 ರನ್​ಗಳ ಭಾರೀ ಮೊದಲ ಇನ್ನಿಂಗ್ಸ್ ಹಿನ್ನಡೆ ಕಂಡಿತು.

ಸೌರಾಷ್ಟ್ರ ಫಾಲೋ ಆನ್ ಹೇರಿದ್ದರಿಂದ ಬೃಹತ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಯಾವುದೇ ವಿಕೆಟ್ ಕಳೆದುಕೊಳ್ಳದೇ ದಿನಾಂತ್ಯಗೊಳಿಸಿ ನಿಟ್ಟುಸಿರು ಬಿಟ್ಟಿತು. ದೇವದತ್ ಪಡಿಕ್ಕಲ್ ಬದಲು ಆರಂಭಿಕರಾಗಿ ಬಂದ ರೋಹನ್ ಕದಮ್ ಮತ್ತು ಆರ್. ಸಮರ್ಥ್ ಯಾವುದೇ ಅಪಾಯವಿಲ್ಲದೇ ಕೊನೆಯವರೆಗೂ ಉಳಿದರು.

ಇನ್ನೂ 380 ರನ್​ಗಳ ಹಿನ್ನಡೆಯಲ್ಲೇ ಇರುವ ಕರ್ನಾಟಕಕ್ಕೆ ಈಗ ಸೋಲಿನ ಸುಳಿಗೆ ಸಿಲುಕಿದೆ. ಗೆಲುವು ಕೈಗೆಟುಕದಷ್ಟು ಎತ್ತರಕ್ಕೆ ಹೋಗಿದೆ. ಡ್ರಾ ಮಾಡಿಕೊಳ್ಳುವ ಅವಕಾಶವಷ್ಟೇ ಇದೆ. ಆಲೌಟ್ ಆಗದೇ ಇಡೀ ದಿನ ಆಡಿದಲ್ಲಿ ಪಂದ್ಯ ಡ್ರಾ ಆಗಲಿದೆ. ಕರ್ನಾಟಕಕ್ಕೆ ಒಂದು ಅಂಕ ದಕ್ಕಲಿದೆ. ಅಂಕಪಟ್ಟಿಯಲ್ಲಿ ಮೇಲಿರುವ ಕರ್ನಾಟಕಕ್ಕೆ ಈ ಸೋಲು ಅಂಥ ಆಘಾತಕಾರಿಯಾಗಿ ಪರಿಣಮಿಸುವುದಿಲ್ಲ ಎಂಬುದಷ್ಟೇ ಸಮಾಧಾನ.

ಇದನ್ನೂ ಓದಿ: 4ನೇ ಕ್ರಮಾಂಕ ಸಮಸ್ಯೆ ಮುಗಿದ ಬೆನ್ನಲ್ಲೆ ಟೀಂ ಇಂಡಿಯಾಕ್ಕೆ ಎದುರಾಗಿದೆ ಮತ್ತೊಂದು ಕಂಟಕ!ಸೌರಾಷ್ಟ್ರ-ಕರ್ನಾಟಕ ಸ್ಕೋರು ವಿವರ (3ನೇ ದಿನಾಂತ್ಯಕ್ಕೆ)

ಸೌರಾಷ್ಟ್ರ ಮೊದಲ ಇನ್ನಿಂಗ್ಸ್ 166 ಓವರ್ 581/7 (ಡಿಕ್ಲೇರ್)
ಚೇತೇಶ್ವರ್ ಪೂಜಾರ 248, ಶೆಲ್ಡನ್ ಜಾಕ್ಸನ್ 161, ಪ್ರೇರಕ್ ಮಂಕಡ್ 86, ಅರ್ಪಿತ್ ವಸವಾಡ 35 ರನ್ – ಪ್ರವೀಣ್ ದುಬೇ 80/2, ಪವನ್ ದೇಶಪಾಂಡೆ 98/2, ಜೆ. ಸುಚಿತ್ 129/2)

ಕರ್ನಾಟಕ ಮೊದಲ ಇನ್ನಿಂಗ್ಸ್ 79 ಓವರ್ 171/10
(ರವಿಕುಮಾರ್ ಸಮರ್ಥ್ 63, ಪ್ರವೀಣ್ ದುಬೇ 46, ರೋಹನ್ ಕದಮ್ 29 ರನ್ – ಜಯದೇವ್ ಉನಾದ್ಕತ್ 49/5, ಕಮಲೇಶ್ ಮಕ್ವಾನ 27/3)

ಕರ್ನಾಟಕ ಎರಡನೇ ಇನ್ನಿಂಗ್ಸ್ 16 ಓವರ್ 30/0
(ಆರ್. ಸಮರ್ಥ್ ಅಜೇಯ 14, ರೋಹನ್ ಕದಮ್ ಅಜೇಯ 16 ರನ್)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ

Published by: Vijayasarthy SN
First published: January 13, 2020, 6:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading