T20 Trophy- ಕರ್ನಾಟಕಕ್ಕೆ ಸತತ 4ನೇ ಜಯ; ಪ್ರೀಕ್ವಾರ್ಟರ್ ಫೈನಲ್ ಪ್ರವೇಶ; ಇಲ್ಲಿದೆ ಅಂಕಪಟ್ಟಿ

Syed Mushtaq Ali Trophy T20 Tournament- ಬರೋಡಾ ವಿರುದ್ಧ ಕರ್ನಾಟಕ ಇಂದು 7 ವಿಕೆಟ್ಗಳಿಂದ ಸೋಲಿಸಿ ಟಿ20 ಟೂರ್ನಿಯ ಪ್ರೀಕ್ವಾರ್ಟರ್​ಫೈನಲ್ ಪ್ರವೇಶಿಸಿದೆ. ಸತತ ನಾಲ್ಕು ಗೆಲುವು ಪಡೆದಿರುವ ಕರ್ನಾಟಕಕ್ಕೆ ಗ್ರೂಪ್ ಹಂತ ಮುಗಿಸಲು ಇನ್ನೊಂದು ಪಂದ್ಯ ಬಾಕಿ ಇದೆ.

ದೇವದತ್ ಪಡಿಕ್ಕಲ್

ದೇವದತ್ ಪಡಿಕ್ಕಲ್

  • Share this:
    ಗುವಾಹಟಿ, ನ. 8: ಕರ್ನಾಟಕ ಕ್ರಿಕೆಟ್ ತಂಡ ಸಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಕ್ರಿಕೆಟ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್ ಹಂತದ ಪ್ರವೇಶ ಗಿಟ್ಟಿಸಿದೆ (Karnataka in Pre-Quarterfinals of Syed Mushtaq Ali Trophy T20). ಸತತ ನಾಲ್ಕು ಗೆಲುವು ಪಡೆದು ಕರ್ನಾಟಕ ನಾಕೌಟ್ ಪ್ರವೇಶ ಖಚಿಪಡಿಸಿಕೊಂಡಿದೆ. ಇಂದು ನಡೆದ ಪಂದ್ಯದಲ್ಲಿ ಕೃಣಾಲ್ ಪಾಂಡ್ಯ ನಾಯಕತ್ವದ ಬರೋಡಾ ವಿರುದ್ಧ ಕರ್ನಾಟಕ 7 ವಿಕೆಟ್​ಗಳಿಂದ ಭರ್ಜರಿ ಗೆಲುವು ಪಡೆಯಿತು. ಕೆ ಗೌತಮ್ ಮತ್ತು ದೇವದತ್ ಪಡಿಕ್ಕಲ್ ಕರ್ನಾಟಕ ಗೆಲುವಿನ ರೂವಾರಿಯಾದರು. ಬರೋಡಾದ 134 ರನ್ ಮೊತ್ತವನ್ನು ಕರ್ನಅಟಕ 5 ಎಸೆತ ಇರುವಂತೆ ಯಶಸ್ವಿಯಾಗಿ ಬೆನ್ನಟ್ಟಿತು.

    ಟಾಸ್ ಗೆದ್ದ ಬರೋಡಾ ತಂಡವೇ ಮೊದಲು ಬ್ಯಾಟ್ ಮಾಡಿತು. ಮಧ್ಯಮ ಕ್ರಮಾಂಕದಲ್ಲಿ ಭಾನು ಪಾನಿಯಾ ಮತ್ತು ಪಾರ್ತ್ ಕೊಹ್ಲಿ ಮಧ್ಯೆ 51 ರನ್ ಜೊತೆಯಾಟ ಬಂದದ್ದು ಬರೋಡಾ ಇನ್ನಿಂಗ್ಸ್​ನ ಹೈಲೈಟ್ ಎನಿಸಿತು. ಕರ್ನಾಟಕದ ವೇಗದ ಬೌಲರ್ ವೈಶಾಖ್ ವಿಜಯಕುಮಾರ್ ಹಾಗೂ ಸ್ಪಿನ್ನರ್ ಕೆ ಗೌತಮ್ ತಲಾ ಎರಡು ವಿಕೆಟ್ ಪಡೆದರು. ಕೆ ಗೌತಮ್ 4 ಓವರ್​ಗಳಲ್ಲಿ ಕೇವಲ 17 ರನ್ ನೀಡಿ 2 ವಿಕೆಟ್ ಪಡೆದರು.

    ಪ್ರಬಲ ಬ್ಯಾಟರ್​ಗಳ ಪಡೆ ಇರುವ ಕರ್ನಾಟಕ ನಿರೀಕ್ಷೆಯಂತೆ ಈ ಸುಲಭ ಗುರಿಯನ್ನ ಸುಲಭವಾಗಿಯೇ ಬೆನ್ನಟ್ಟಿತು. ದೇವದತ್ ಪಡಿಕ್ಕಲ್ ಮತ್ತು ಮಯಂಕ್ ಅಗರ್ವಾಲ್ ಮೊದಲ ವಿಕೆಟ್​ಗೆ 73 ರನ್ ಜೊತೆಯಾಟ ಆಡಿ ಚೇಸಿಂಗ್ ಹಾದಿ ಸುಗಮಗೊಳಿಸಿದರು. ಪಡಿಕ್ಕಲ್ ಅರ್ಧಶತಕ ಭಾರಿಸಿದರು. ನಂತರ ಕರುಣ್ ನಾಯರ್ 25 ಬಾಲ್​ನಲ್ಲಿ ಅಜೇಯ 36 ರನ್ ಭಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

    ಕರ್ನಾಟಕದ ಮುಂದಿನ ಪಂದ್ಯ:

    ಇಲೈಟ್ ಬಿ ಗುಂಪಿನಲ್ಲಿರುವ ಕರ್ನಾಟಕ ತಂಡಕ್ಕೆ ಇದು ಸತತ ನಾಲ್ಕನೇ ಗೆಲುವಾಗಿದೆ. ಮುಂಬೈ ವಿರುದ್ಧದ ಗೆಲುವಿನೊಂದಿಗೆ ಶುಭಾರಂಭ ಮಾಡಿರುವ ಕರ್ನಾಟಕ, ನಂತರದ ಪಂದ್ಯಗಳಲ್ಲಿ ಛತ್ತೀಸ್​ಗಡ ಮತ್ತು ಸರ್ವಿಸಸ್ ತಂಡಗಳನ್ನೂ ಮಣಿಸಿತ್ತು. ಈಗ ತನ್ನ ಗುಂಪಿನ ಕೊನೆಯ ಹಾಗೂ ಐದನೇ ಪಂದ್ಯವನ್ನ ಬಂಗಾಳ ವಿರುದ್ಧ ನಾಳೆ (ನ. 9) ಆಡಲಿದೆ.

    ಕರ್ನಾಟಕದ ನಾಕೌಟ್ ಪ್ರವೇಶ ಖಚಿತ:

    ಕರ್ನಾಟಕ 4 ಪಂದ್ಯಗಳಿಂದ 16 ಅಂಕ ಗಳಿಸಿ ಅಗ್ರಸ್ಥಾನದಲ್ಲಿದೆ. ಬಂಗಾಳ 12 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮುಂಬೈ ತಂಡ 8, ಇನ್ನುಳಿದ ಮೂರು ತಂಡಗಳು ತಲಾ 4 ಅಂಕಗಳನ್ನ ಹೊಂದಿವೆ. ಕರ್ನಾಟಕ ತಂಡ ಪ್ರೀ ಕ್ವಾರ್ಟರ್​ಫೈನಲ್ ಹಂತದ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ. ನಾಳೆ ಬಂಗಾಳ ಎದುರು ಸೋತರೂ ಕರ್ನಾಟಕಕ್ಕೆ ಹಿನ್ನಡೆ ಏನೂ ಇಲ್ಲ. ಆದರೆ, ಎರಡನೇ ತಂಡವಾಗಿ 16ರ ಹಂತ ತಲುಪಲು ಬಂಗಾಳ ಮತ್ತು ಮುಂಬೈ ಮಧ್ಯೆ ಪೈಪೋಟಿ ಇದೆ. ಕರ್ನಾಟಕ ವಿರುದ್ಧ ಬಂಗಾಳ ಗೆದ್ದರೆ ಮುಂಬೈ ಆಸೆಗೆ ತಣ್ಣೀರು ಬೀಳಲಿದೆ.

    ಬಿ ಗುಂಪಿನ ಅಂಕಪಟ್ಟಿ (4 ಪಂದ್ಯಗಳ ನಂತರ):
    1) ಕರ್ನಾಟಕ: 16 ಪಾಯಿಂಟ್
    2) ಬಂಗಾಳ: 12
    3) ಮುಂಬೈ: 8
    4) ಬರೋಡಾ: 4
    5) ಛತ್ತೀಸ್​ಗಡ: 4
    6) ಸರ್ವಿಸಸ್: 4 ಪಾಯಿಂಟ್

    ಇದನ್ನೂ ಓದಿ: India vs Pak- ‘12-1ರ ಭೋಜನ’- ಭಾರತವನ್ನ ಅಣಗಿಸಿದ ಪಾಕಿಸ್ತಾನಕ್ಕೆ ಜಾಫರ್ ತಿರುಗೇಟು

    ಇತರ ಗುಂಪುಗಳ ಟಾಪರ್ಸ್:

    ಇನ್ನು, ಇತರ ಗುಂಪುಗಳನ್ನ ಗಮನಿಸಿದರೆ ಎ ಗುಂಪಿನಲ್ಲಿ ಪಂಜಾಬ್, ಮಹಾರಾಷ್ಟ್ರ ಮತ್ತು ತಮಿಳುನಾಡು ತಂಡಗಳು ತಲಾ 12 ಅಂಕಗಳನ್ನ ಹೊಂದಿವೆ. ಈ ಮೂರು ತಂಡಗಳ ಮಧ್ಯೆ ತುರುಸಿನ ಪೈಪೋಟಿ ಇದೆ.

    ಸಿ ಗುಂಪಿನಲ್ಲಿ ರಾಜಸ್ಥಾನ್ ಪ್ರೀಕ್ವಾರ್ಟರ್​ಫೈನಲ್ ಖಚಿತಪಡಿಸಿಕೊಂಡಿದೆ. ಆಂಧ್ರ, ಹರಿಯಾಣ ಮತ್ತು ಹಿಮಾಚಲ ಪ್ರದೇಶದ ಮಧ್ಯೆ ಇನ್ನೊಂದು ಸ್ಥಾನಕ್ಕೆ ಪೈಪೋಟಿ ಇದೆ.

    ಡಿ ಗುಂಪಿನಲ್ಲಿ ಮಧ್ಯಪ್ರೇಶ ಮತ್ತು ಗುಜರಾತ್ ತಂಡಗಳು, ಇ ಗುಂಪಿನಲ್ಲಿ ಹೈದರಾಬಾದ್, ಡೆಲ್ಲಿ, ಸೌರಾಷ್ಟ್ರ ತಂಡಗಳು, ಪ್ಲೇಟ್ ಗುಂಪಿನಲ್ಲಿ ವಿದರ್ಭ, ನಾಗಾಲೆಂಡ್, ತ್ರಿಪುರಾ ಮತ್ತು ಮೇಘಾಲಯ ತಂಡಗಳ ಮಧ್ಯೆ 16ರ ಹಂತ ಪ್ರವೇಶಕ್ಕಾಗಿ ಸ್ಪರ್ಧೆ ಇದೆ.
    Published by:Vijayasarthy SN
    First published: