ಕರ್ನಾಟಕಕ್ಕೆ ಸೈಯದ್ ಮುಷ್ತಾಕ್ ಅಲಿ ಕಪ್; ತಮಿಳುನಾಡಿನ ವಿರುದ್ಧ ಗೆಲ್ಲಲು ಕಾರಣವಾಯ್ತು ಆ ಒಂದು ಅಂಶ

ಮನೀಶ್​ ಪಾಂಡೆ ಕ್ಯಾಪ್ಟನ್​ ಆಟ ಹಾಗೂ ಕೊನೆಯ ಓವರ್​ನಲ್ಲಿ ಗೌತಮ್​ ಬೌಲಿಂಗ್​ ಮೋಡಿ ಕರ್ನಾಟಕಕ್ಕೆ ಗೆಲುವು ತಂದುಕೊಡಲು ಪ್ರಮುಖ ಕಾರಣ. ಕರ್ನಾಟಕದ ಗೆಲುವಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಳೆ ಹರಿದು ಬಂದಿದೆ.

news18-kannada
Updated:December 2, 2019, 11:21 AM IST
ಕರ್ನಾಟಕಕ್ಕೆ ಸೈಯದ್ ಮುಷ್ತಾಕ್ ಅಲಿ ಕಪ್; ತಮಿಳುನಾಡಿನ ವಿರುದ್ಧ ಗೆಲ್ಲಲು ಕಾರಣವಾಯ್ತು ಆ ಒಂದು ಅಂಶ
ಮನೀಶ್​ ಪಾಂಡೆ
  • Share this:
ಬೆಂಗಳೂರು (ಡಿ.2): ಸೈಯದ್ ಮುಷ್ತಾಕ್​ ಅಲಿ ಕಪ್​ಗಾಗಿ ನಡೆದ ಕರ್ನಾಟಕ-ತಮಿಳುನಾಡು ನಡುವಿನ ಅಂತಿಮ ಪಂದ್ಯದಲ್ಲಿ ಮನಿಶ್​ ಪಾಂಡೆ ಟೀಂ ಒಂದು ರನ್​ಗಳ ಜಯ ಸಾಧಿಸಿತು. ಈ ಮೂಲಕ ರೋಚಕ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಕರ್ನಾಟಕ ಕಪ್​ ತನ್ನದಾಗಿಸಿಕೊಂಡಿತು.

ಮೊದಲು ಬ್ಯಾಟಿಂಗ್​ಗೆ ಇಳಿದ ಕರ್ನಾಟಕಕ್ಕೆ ಆರಂಭಿಕ ಆಘಾತ ಉಂಟಾಗಿತ್ತು. ಕೆಎಲ್​ ರಾಹುಲ್​ ಕೇವಲ 22 ರನ್​ ಹಾಗೂ ದೇವದತ್​ ಪಡಿಕ್ಕಲ್​ 32 ರನ್​ಗಳಿಗೆ ಔಟ್​ ಆದರು. ಉತ್ತಮ ಫಾರ್ಮ್​​ನಲ್ಲಿರುವ ಮಯಾಂಕ್​ ಅಗರ್​ವಾಲ್​ ಡಕ್​ಔಟ್​ ಆದರು. ನಂತರ ಮನೀಶ್​ ಪಾಂಡೆ​ ಕ್ಯಾಪ್ಟನ್​ ಆಟವಾಡಿದರು. 60 ರನ್​ ಗಳಿಸಿ ಔಟ್​ ಆಗದೆ ಉಳಿದರು. ರೋಹನ್​ ಕದಮ್​ 35 ರನ್​ ಕಲೆ ಹಾಕಿದರು. ಕರ್ನಾಟಕ 20 ಓವರ್​ಗೆ ಐದು ವಿಕೆಟ್​ ಕಳೆದುಕೊಂಡು 180 ರನ್​ ಗಳಿಸಿತು. ರವಿ ಚಂದ್ರನ್​ ಅಶ್ವಿನ್​, ಮುರುಗನ್​​ ಅಶ್ವಿನ್​ ತಲಾ ಎರಡು ವಿಕೆಟ್​ ಪಡೆದರು.

181 ರನ್​ಗಳ ಬೃಹತ್​ ಮೊತ್ತ ಬೆನ್ನತ್ತಿದ ತಮಿಳುನಾಡು ಕೂಡ ಆರಂಭಿಕ ಆಘಾತ ಎದುರಿಸಿತ್ತು. ಓಪನರ್​ಗಳಾದ ಶಾರುಖ್​ ಖಾನ್​ (16), ಹರಿ ನಿಶಾಂತ್​ (14) ಆರಂಭದಲ್ಲೇ ಔಟ್​ ಆದರು. ಮಧ್ಯಮ ಕ್ರಮಾಂಕದ ಆಟಗಾರರಾದ ಬಾಬಾ ಅಪರಿಜಿತ್​ (40), ವಿಜಯ್​ ಶಂಕರ್​ (44) ಗಳಿಸಿದರು.

ಇದನ್ನೂ ಓದಿ: ಲಾರಾ ವಿಶ್ವ ದಾಖಲೆಯನ್ನು ಭಾರತದ ಈ ಆಟಗಾರನಿಂದ ಮಾತ್ರ ಮುರಿಯಲು ಸಾಧ್ಯ: ವಾರ್ನರ್ ಭವಿಷ್ಯ

ಕೊನೆಯ ಓವರ್​ನಲ್ಲಿ 11 ರನ್​ ಬೇಕಿತ್ತು. ಈ ವೇಳೆ ಕೃಷ್ಣಪ್ಪ ಗೌತಮ್​ ಬೌಲಿಂಗ್​ಗೆ ಇಳಿದಿದ್ದರು. ಮೊದಲ ಎರಡು ಬಾಲ್​ನಲ್ಲಿ ಅಶ್ವಿನ್​ ಎರಡು ಬೌಂಡರಿ ಬಾರಿಸಿದರು. ನಂತರ ಒಂದು ಬಾಲ್​ ಡಾಟ್​ ಆಗಿತ್ತು. ನಾಲ್ಕನೇ ಬಾಲ್​ಗೆ ಅಶ್ವಿನ್​ ಒಂದು ರನ್​ ಗಳಿಸಿದರು. ಐದನೇ ಬಾಲ್​ನಲ್ಲಿ ಒಂದು ವಿಕೆಟ್​ ಕಬಳಿಸಿದರು ಗೌತಮ್​. ಕೊನೆಯ ಬಾಲ್​ನಲ್ಲಿ ಮೂರು ರನ್​ ಬೇಕಿತ್ತು. ಈ ವೇಳೆ ಒಂದು ರನ್​ ತೆಗೆಯಲು ಅಶ್ವಿನ್​ಗೆ ಸಾಧ್ಯವಾಯಿತು. ಈ ಮೂಲಕ ಕರ್ನಾಟಕ ಒಂದು ರನ್​ಗಳ ಜಯ ಸಾಧಿಸಿತು.

ಮನೀಶ್​ ಪಾಂಡೆ ಕ್ಯಾಪ್ಟನ್​ ಆಟ ಹಾಗೂ ಕೊನೆಯ ಓವರ್​ನಲ್ಲಿ ಗೌತಮ್​ ಬೌಲಿಂಗ್​ ಮೋಡಿ ಕರ್ನಾಟಕಕ್ಕೆ ಗೆಲುವು ತಂದುಕೊಡಲು ಪ್ರಮುಖ ಕಾರಣ. ಕರ್ನಾಟಕದ ಗೆಲುವಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಳೆ ಹರಿದು ಬಂದಿದೆ.
First published: December 2, 2019, 9:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading