Syed Mushtaq Ali Trophy: ಸೂಪರ್​ಲೀಗ್​ನಲ್ಲಿ ಕರ್ನಾಟಕ ಶುಭಾರಂಭ; ತಮಿಳುನಾಡು ವಿರುದ್ಧ 9 ವಿಕೆಟ್ ಭರ್ಜರಿ ಜಯ

ಸಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಸೂಪರ್ ಲೀಗ್ ಹಂತಕ್ಕೆ ಅರ್ಹತೆ ಪಡೆದಿವೆ. ಡೆಲ್ಲಿ, ಬರೋಡಾ, ಹರಿಯಾಣ, ರಾಜಸ್ಥಾನ ಮತ್ತು ಮಹಾರಾಷ್ಟ್ರ ತಂಡಗಳು ಎ ಗುಂಪಿನಲ್ಲಿವೆ. ಪಂಜಾಬ್, ಕರ್ನಾಟಕ, ತಮಿಳುನಾಡು, ಮುಂಬೈ ಮತ್ತು ಜಾರ್ಖಂಡ್ ತಂಡಗಳು ಬಿ ಗುಂಪಿನಲ್ಲಿವೆ. ಈ ಎರಡೂ ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.

Vijayasarthy SN | news18
Updated:November 21, 2019, 10:18 PM IST
Syed Mushtaq Ali Trophy: ಸೂಪರ್​ಲೀಗ್​ನಲ್ಲಿ ಕರ್ನಾಟಕ ಶುಭಾರಂಭ; ತಮಿಳುನಾಡು ವಿರುದ್ಧ 9 ವಿಕೆಟ್ ಭರ್ಜರಿ ಜಯ
ಕೆ ಎಲ್ ರಾಹುಲ್
  • News18
  • Last Updated: November 21, 2019, 10:18 PM IST
  • Share this:
ಸೂರತ್(ನ. 21): ಸಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕದ ಜೈತ್ರಯಾತ್ರೆ ಮುಂದುವರಿದಿದೆ. ಲೀಗ್ ಹಂತ ದಾಟಿ ಈಗ ಸೂಪರ್ ಲೀಗ್ ಹಂತದಲ್ಲೂ ಕರ್ನಾಟಕ ಗೆಲುವಿನ ಶುಭಾರಂಭ ಮಾಡಿದೆ. ಬಿ ಗುಂಪಿನ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಕರ್ನಾಟಕ 9 ವಿಕೆಟ್​ಗಳಿಂದ ಜಯಭೇರಿ ಭಾರಿಸಿದೆ. ಗೆಲುವಿಗೆ ತಮಿಳುನಾಡು ಒಡ್ಡಿದ 159 ರನ್​ಗಳ ಗುರಿಯನ್ನು ಇನ್ನೂ 22 ಎಸೆತ ಬಾಕಿ ಇರುವಂತೆಯೇ ನಿರಾಯಾಸವಾಗಿ ಮುಟ್ಟಿದೆ. ಕೆ.ಎಲ್. ರಾಹುಲ್ ಮತ್ತು ಮನೀಶ್ ಪಾಂಡೆ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ರಾಜ್ಯ ತಂಡದ ಗೆಲುವನ್ನು ಸುಗಮಗೊಳಿಸಿದರು.

ಮೊದಲು ಬ್ಯಾಟ್ ಮಾಡಿದ ತಮಿಳುನಾಡು 20 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ದಿನೇಶ್ ಕಾರ್ತಿಕ್, ವಾಷಿಂಗ್ಟನ್ ಸುಂದರ್ ಮತ್ತು ವಿಜಯ್ ಶಂಕರ್ ಬಿಟ್ಟರೆ ಉಳಿದವರು ಕರ್ನಾಟಕದ ಬೌಲರ್​ಗಳ ಮೇಲೆ ಪ್ರಾಬಲ್ಯ ಸಾಧಿಸಲು ವಿಫಲರಾದರು. ಈ ಮೂವರಲ್ಲಿ ಯಾರೂ ಕೂಡ ಅರ್ಧಶತಕ ಗಡಿ ಮುಟ್ಟಲಿಲ್ಲ. ವಿ. ಕೌಶಿಕ್, ರೋನಿತ್ ಮೋರೆ ಮಾರಕ ಬೌಲಿಂಗ್ ಪ್ರದರ್ಶನ ನೀಡಿದರು.

ಇದನ್ನೂ ಓದಿ: IND vs BAN: ಪಿಂಕ್ ಬಾಲ್​ ಕ್ರಿಕೆಟ್ ಕೊಹ್ಲಿಯ ನಿದ್ದೆಗೆಡಿಸಿದ್ದೇಕೆ? ಅಷ್ಟಕ್ಕೂ ಈ ಚೆಂಡಿನ ವಿಶೇಷತೆಗಳೇನು?

ತಮಿಳುನಾಡಿನ ಈ ಮೊತ್ತವು ಬಲಿಷ್ಠ ಬ್ಯಾಟಿಂಗ್ ಪಡೆ ಇರುವ ಕರ್ನಾಟಕಕ್ಕೆ ಸ್ವಲ್ಪವೂ ಸವಾಲೆನಿಸಲಿಲ್ಲ. ಕೆಎಲ್ ರಾಹುಲ್ ಮತ್ತು ದೇವದತ್ತ ಪಡಿಕ್ಕಲ್ ಮೊದಲ ವಿಕೆಟ್​ಗೆ 70 ರನ್ ಜೊತೆಯಾಟ ಆಡಿದರು. ಪಡಿಕ್ಕಲ್ ನಿರ್ಗಮನದ ಬಳಿಕ ರಾಹುಲ್ ಮತ್ತು ಮನೀಶ್ ಪಾಂಡೆ ಇನ್ನಷ್ಟು ಸುಗಮವಾಗಿ ಚೇಸಿಂಗ್ ನಡೆಸಿ 2ನೇ ವಿಕೆಟ್​ಗೆ 91 ರನ್​ಗಳ ಮುರಿಯದ ಜೊತೆಯಾಟವಾಡಿ ಗುರಿ ಮುಟ್ಟಿಸಿದರು.

ಸಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಸೂಪರ್ ಲೀಗ್ ಹಂತಕ್ಕೆ ಅರ್ಹತೆ ಪಡೆದಿವೆ. ಡೆಲ್ಲಿ, ಬರೋಡಾ, ಹರಿಯಾಣ, ರಾಜಸ್ಥಾನ ಮತ್ತು ಮಹಾರಾಷ್ಟ್ರ ತಂಡಗಳು ಎ ಗುಂಪಿನಲ್ಲಿವೆ. ಪಂಜಾಬ್, ಕರ್ನಾಟಕ, ತಮಿಳುನಾಡು, ಮುಂಬೈ ಮತ್ತು ಜಾರ್ಖಂಡ್ ತಂಡಗಳು ಬಿ ಗುಂಪಿನಲ್ಲಿವೆ. ಈ ಎರಡೂ ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.

ಹಾಲಿ ಚಾಂಪಿಯನ್ಸ್ ಕರ್ನಾಟಕವೇ ಈ ಬಾರಿಯೂ ಈ ಟೂರ್ನಿ ಗೆಲ್ಲುವ ಫೇವರಿಟ್ ಎನಿಸಿದೆ. ತಮಿಳುನಾಡು ವಿರುದ್ಧ ಗೆದ್ದು ಸೂಪರ್​ಲೀಗ್​ನಲ್ಲಿ ಶುಭಾರಂಭ ಮಾಡಿರುವ ಕರ್ನಾಟಕ ತಂಡ ನಾಳೆ ಜಾರ್ಖಂಡ್ ತಂಡವನ್ನು ಎದಿರುಗೊಳ್ಳಲಿದೆ. ನ. 24 ಮತ್ತು 25ರಂದು ಪಂಜಾಬ್ ಹಾಗೂ ಮುಂಬೈ ತಂಡಗಳ ವಿರುದ್ಧ ಪಂದ್ಯವಾಡಲಿದೆ.

ಇದನ್ನೂ ಓದಿ: ಕೆರಿಬಿಯನ್ನರ ನಾಡಲ್ಲಿ ಮೆರೆದ ಭಾರತೀಯ ವನಿತೆಯರು; 5-0 ಅಂತರದಿಂದ ಟಿ-20 ಸರಣಿ ಕ್ಲೀನ್​ಸ್ವೀಪ್ನವೆಂಬರ್ 29ರಂದು ಎರಡೂ ಸೆಮಿಫೈನಲ್ ಪಂದ್ಯಗಳು ನಡೆಯಲಿದೆ. ಡಿಸೆಂಬರ್ 1ರಂದು ಪ್ರಶಸ್ತಿಗಾಗಿ ಅಂತಿಮ ಹಣಾಹಣಿಯಾಗಲಿದೆ.

ಕರ್ನಾಟಕ-ತಮಿಳುನಾಡು ಪಂದ್ಯದ ಸ್ಕೋರು ವಿವರ:

ತಮಿಳುನಾಡು 20 ಓವರ್ 158/7
(ದಿನೇಶ್ ಕಾರ್ತಿಕ್ 43, ವಾಷಿಂಗ್ಟನ್ ಸುಂದರ್ 39, ವಿಜಯ್ ಶಂಕರ್ 25, ಹರಿ ನಿಶಾಂತ್ 15 ರನ್ – ವಿ. ಕೌಶಿಕ್ 23/2, ರೋನಿತ್ ಮೋರೆ 25/2)

ಕರ್ನಾಟಕ 16.2 ಓವರ್ 161/1
(ಕೆಎಲ್ ರಾಹುಲ್ ಅಜೇಯ 69, ಮನೀಶ್ ಪಾಂಡೆ ಅಜೇಯ 52, ದೇವದತ್ ಪಡಿಕ್ಕಲ್ 36 ರನ್)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 21, 2019, 10:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading