Syed Mushtaq Ali Trophy: ಪಡಿಕ್ಕಲ್ ಅಮೋಘ ಆಟ - ಜಾರ್ಖಂಡ್ ವಿರುದ್ಧ ಕರ್ನಾಟಕಕ್ಕೆ ರೋಚಕ ಜಯ

ಸೂಪರ್​ಲೀಗ್​ನ ಬಿ ಗುಂಪಿನಲ್ಲಿ ಈಗಾಗಲೇ ಎರಡು ಪಂದ್ಯ ಗೆದ್ದಿರುವ ಕರ್ನಾಟಕಕ್ಕೆ ಇನ್ನೆರಡು ಪಂದ್ಯಗಳು ಬಾಕಿ ಇವೆ. ಸೆಮಿಫೈನಲ್ ತಲುಪುವ ಸಾಧ್ಯತೆ ಹೆಚ್ಚಾಗಿದೆ. ಗುಂಪಿನಲ್ಲಿ ಮೊದಲೆರಡು ಸ್ಥಾನ ಸಿಕ್ಕರೆ ಸೆಮಿಫೈನಲ್ ಪ್ರವೇಶಿಸಬಹುದು.

Vijayasarthy SN | news18
Updated:November 22, 2019, 10:33 PM IST
Syed Mushtaq Ali Trophy: ಪಡಿಕ್ಕಲ್ ಅಮೋಘ ಆಟ - ಜಾರ್ಖಂಡ್ ವಿರುದ್ಧ ಕರ್ನಾಟಕಕ್ಕೆ ರೋಚಕ ಜಯ
ದೇವದತ್ ಪಡಿಕ್ಕಲ್
  • News18
  • Last Updated: November 22, 2019, 10:33 PM IST
  • Share this:
ಸೂರತ್(ನ. 22): ಸಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಸೂಪರ್ ಲೀಗ್ ಹಂತದಲ್ಲಿ ಕರ್ನಾಟಕ ಸತತ ಎರಡನೇ ಗೆಲುವು ದಾಖಲಿಸಿದೆ. ತಮಿಳುನಾಡು ವಿರುದ್ಧ ನಿರಾಯಾಸವಾಗಿ ಮೊದಲ ಪಂದ್ಯ ಗೆದ್ದಿದ್ದ ಕರ್ನಾಟಕ ಇಂದು ಎರಡನೇ ಪಂದ್ಯದಲ್ಲಿ ಜಾರ್ಖಂಡ್ ತಂಡವನ್ನು 13 ರನ್​ಗಳಿಂದ ಮಣಿಸಿದೆ. ಕರ್ನಾಟಕದ 189 ರನ್ ಮೊತ್ತಕ್ಕೆ ಪ್ರತಿಯಾಗಿ ಜಾರ್ಖಂಡ್ ತಂಡ 176 ರನ್ ಗಳಿಸಿತು. ಜಾರ್ಖಂಡ್ ಬ್ಯಾಟ್ಸ್​​ಮನ್ ವಿರಾಟ್ ಸಿಂಗ್ ಅವರ ವೀರೋಚಿತ ಹೋರಾಟ ವ್ಯರ್ಥವಾಯಿತು. 46 ಎಸೆತದಲ್ಲಿ ಅಜೇಯ 76 ರನ್ ಗಳಿಸಿದ ವಿರಾಟ್ ಸಿಂಗ್ ತಮ್ಮ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಕೊನೆಯವರೆಗೂ ಹರಸಾಹಸ ನಡೆಸಿದರು. ಆದರೆ, ಅಂತಿಮವಾಗಿ ಗೆಲುವು ಕರ್ನಾಟಕಕ್ಕೆ ಒಲಿಯಿತು.

ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡದ 189 ರನ್ ಇನ್ನಿಂಗ್ಸಲ್ಲಿ ಹೈಲೈಟ್ ಆಗಿದ್ದು ದೇವದತ್ ಪಡಿಕ್ಕಲ್ ಅವರ ಸ್ಫೋಟಕ ಆಟ. ಅವರು ಕೇವಲ 30 ಎಸೆತದಲ್ಲಿ 63 ರನ್ ಚಚ್ಚಿದರು. ಇವರ ಆಟದಿಂದಾಗಿ ಕರ್ನಾಟಕ 189 ರನ್ ತಲುಪಲು ಸಾಧ್ಯವಾಯಿತು. ಕೆಎಲ್ ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಮೊದಲ ವಿಕೆಟ್​ಗೆ ಬರೋಬ್ಬರಿ 114 ರನ್ ಜೊತೆಯಾಟ ಆಡಿದರು. ಇವಿಷ್ಟೂ ರನ್ ಕೇವಲ 9 ಓವರ್​ಗಳಲ್ಲಿ ಬಂದಿದ್ದು ಗಮನಾರ್ಹ. ಪಡಿಕ್ಕಲ್ ಕ್ರೀಸ್​ನಲ್ಲಿರುವವರೆಗೂ ಕರ್ನಾಟಕದ ಮೊತ್ತ 200 ರನ್ ದಾಟಬಹುದು ಎಂಬ ನಿರೀಕ್ಷೆ ಮೂಡಿತ್ತು. ಅವರು  ನಿರ್ಗಮನದ ಬಳಿಕ ತಂಡದ ಸ್ಕೋರಿಂಗ್ ನಿಧಾನಗೊಂಡಿತು.

ಇದನ್ನೂ ಓದಿ: ಯಶಸ್ವಿ ಜೈಸ್ವಾಲ್ ಭರ್ಜರಿ ಆಟ; ಭಾರತೀಯರ ದಾಳಿಗೆ ಆಫ್ಘನ್ ಕಿರಿಯರ ತಂಡ ಧೂಳೀಪಟ

ಇನ್ನು, 190 ರನ್ ಸವಾಲನ್ನು ಬೆನ್ನತ್ತಿದ ಜಾರ್ಖಂಡ್ ಇನ್ನಿಂಗ್ಸಲ್ಲಿ ಹೈಲೈಟ್ ಆಗಿದ್ದು ವಿರಾಟ್ ಸಿಂಗ್ ಅವರ ಆಟವೇ. ಹೆಚ್ಚೂಕಡಿಮೆ ಅವರು ಏಕಾಂಗಿ ಹೋರಾಟ  ನಡೆಸಿದರು. ಆನಂದ್ ಸಿಂಗ್ ಮತ್ತು ಸುಮಿತ್ ಕುಮಾರ್ ಒಂದಷ್ಟು ನೆರವಿಗೆ ಬಂದರು. ಆದರೆ, ಗೆಲುವಿಗೆ ಅದು ಸಾಕಾಗಲಿಲ್ಲ.

ಸೂಪರ್​ಲೀಗ್​ನ ಬಿ ಗುಂಪಿನಲ್ಲಿ ಈಗಾಗಲೇ ಎರಡು ಪಂದ್ಯ ಗೆದ್ದಿರುವ ಕರ್ನಾಟಕಕ್ಕೆ ಇನ್ನೆರಡು ಪಂದ್ಯಗಳು ಬಾಕಿ ಇವೆ. ಸೆಮಿಫೈನಲ್ ತಲುಪುವ ಸಾಧ್ಯತೆ ಹೆಚ್ಚಾಗಿದೆ. ಗುಂಪಿನಲ್ಲಿ ಮೊದಲೆರಡು ಸ್ಥಾನ ಸಿಕ್ಕರೆ ಸೆಮಿಫೈನಲ್ ಪ್ರವೇಶಿಸಬಹುದು.

ಸ್ಕೋರು ವಿವರ:

ಕರ್ನಾಟಕ 20 ಓವರ್ 189/6(ದೇವದತ್ ಪಡಿಕ್ಕಲ್ 63, ಕೆಎಲ್ ರಾಹುಲ್ 36, ಕರುಣ್ ನಾಯರ್ 19 ರನ್ – ಸೋನು ಸಿಂಗ್ 28/3, ಮೋನು ಕುಮಾರ್ 29/2)

ಜಾರ್ಖಂಡ್ 20 ಓವರ್ 176/5
(ವಿರಾಟ್ ಸಿಂಗ್ ಅಜೇಯ 76, ಆನಂದ್ ಸಿಂಗ್ 41, ಸುಮಿತ್ ಕುಮಾರ್ 23 ರನ್ – ಪವನ್ ದೇಶಪಾಂಡೆ 34/2)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 22, 2019, 10:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading