Kapil XI: ಕಪಿಲ್ ದೇವ್ ಅವರ ಸಾರ್ವಕಾಲಿಕ ಟೀಮ್ ಇಂಡಿಯಾದಲ್ಲಿ ಮೂವರು ಕನ್ನಡಿಗರಿಗೆ ಸ್ಥಾನ

ತಮ್ಮ ತಂಡದಲ್ಲಿ ಆರಂಭಿಕರಾಗಿ ಸಚಿನ್ ತೆಂಡೂಲ್ಕರ್ ಹಾಗೂ ವಿರೇಂದ್ರ ಸೆಹ್ವಾಗ್ ಅವರನ್ನು ಕಪಿಲ್ ದೇವ್ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಮೂರನೇ ಕ್ರಮಾಂಕವನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ ನೀಡಿದ್ದಾರೆ.

ಕಪಿಲ್ ದೇವ್

ಕಪಿಲ್ ದೇವ್

 • Share this:
  ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ನಾಯಕ ಕಪಿಲ್ ದೇವ್ ಸಾರ್ವಕಾಲಿಕ ಭಾರತ ಏಕದಿನ ತಂಡ ಪ್ರಕಟಿಸಿದ್ದಾರೆ. ಇದರಲ್ಲಿ ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್‌ಮನ್‌ ಒಬ್ಬರು ಹೊರಗುಳಿದಿದ್ದಾರೆ. ಹಾಗೆಯೇ ಈ ತಂಡದಲ್ಲಿ ಮೂವರು ಕನ್ನಡಿಗರಿಗೆ ಸ್ಥಾನ ನೀಡಿರುವುದು ವಿಶೇಷ. ಹೌದು, ಜನಪ್ರಿಯ ಚಾಟ್ ಶೋ ನೋ ಫಿಲ್ಟರ್ ನೇಹಾ ಕಾರ್ಯಕ್ರಮದಲ್ಲಿ ಮಾತನಾಡಿದ ತಮ್ಮ ಅನುಭವಗಳನ್ನು ಹಂಚಿಕೊಂಡರು. ಇದೇ ವೇಳೆ ಟೆಸ್ಟ್ ಕ್ರಿಕೆಟ್ ಹಾಗೂ ಏಕದಿನ ಪಂದ್ಯಗಳ ವ್ಯತ್ಯಾಸ ತಿಳಿಸಿದ ಕಪಿಲ್, ಸಾರ್ವಕಾಲಿಕ ಟೀಮ್ ಇಂಡಿಯಾವನ್ನು ಪ್ರಕಟಿಸಿದರು. ಆದರೆ ಭಾರತ ಕಂಡಂತಹ ಶ್ರೇಷ್ಠ ಆಲ್​ರೌಂಡರ್​ ಆಗಿದ್ದರೂ ತಂಡದಲ್ಲಿ ತಮ್ಮ ಹೆಸರನ್ನು ಸೂಚಿಸಿಲ್ಲ ಎಂಬುದು ಮತ್ತೊಂದು ವಿಶೇಷ.

  ತಮ್ಮ ತಂಡದಲ್ಲಿ ಆರಂಭಿಕರಾಗಿ ಸಚಿನ್ ತೆಂಡೂಲ್ಕರ್ ಹಾಗೂ ವಿರೇಂದ್ರ ಸೆಹ್ವಾಗ್ ಅವರನ್ನು ಕಪಿಲ್ ದೇವ್ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಮೂರನೇ ಕ್ರಮಾಂಕವನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ ನೀಡಿದ್ದಾರೆ. ಹಾಗೆಯೇ ನಾಲ್ಕನೇ ಕ್ರಮಾಂಕದಲ್ಲಿ ರಾಹುಲ್ ದ್ರಾವಿಡ್ ಕಣಕ್ಕಿಳಿಯುವುದು ಉತ್ತಮ ಎಂದಿದ್ದಾರೆ.

  5ನೇ ಕ್ರಮಾಂಕದಲ್ಲಿ ಆಲ್​ರೌಂಡರ್ ಆಗಿ ಯುವರಾಜ್ ಸಿಂಗ್ ಅವರನ್ನು ಆರಿಸಿದ್ದಾರೆ. ಅದೇ ರೀತಿ 6ನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಮಹೇಂದ್ರ ಸಿಂಗ್ ಧೋನಿ ಅವರನ್ನು ಆಯ್ಕೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಧೋನಿ ಅವರ ಸ್ಥಾನವನ್ನು ಬೇರೆ ಯಾರೂ ತುಂಬಲಾರರು ಎಂದಿದ್ದಾರೆ ಕಪಿಲ್‌ ದೇವ್.

  ಇನ್ನು ಬೌಲಿಂಗ್ ವಿಭಾಗವನ್ನು ಜಾವಗಲ್ ಶ್ರೀನಾಥ್ ಮುನ್ನಡೆಸಲಿದ್ದು, ಅವರಿಗೆ ಸಾಥ್ ನೀಡಲು ಎಡಗೈ ವೇಗಿಯಾಗಿ ಜಹೀರ್ ಖಾನ್ ಹಾಗೂ ಯಾರ್ಕರ್ ಮಾಂತ್ರಿಕ ಜಸ್​ಪ್ರೀತ್ ಬುಮ್ರಾ ಅವರನ್ನು ಆಯ್ಕೆ ಮಾಡಿದ್ದಾರೆ. ಸ್ಪಿನ್ನರ್​ಗಳಾಗಿ ಅನಿಲ್ ಕುಂಬ್ಳೆ ಹಾಗೂ ಹರ್ಭಜನ್ ಸಿಂಗ್ ಅವರಿಗೆ ಸ್ಥಾನ ನೀಡಲಾಗಿದೆ. ಆದರೆ ಏಕದಿನ ಕ್ರಿಕೆಟ್​ನಲ್ಲಿ 3 ದ್ವಿಶತಕ ಹಾಗೂ 29 ಶತಕ ಸಿಡಿಸಿರುವ ರೋಹಿತ್ ಶರ್ಮಾ ಹಾಗೂ ಟೀಮ್ ಇಂಡಿಯಾದ ಯಶಸ್ವಿ ನಾಯಕರಲ್ಲಿ ಒಬ್ಬರಾದ ಸೌರವ್ ಗಂಗೂಲಿ ಅವರನ್ನು ತಂಡದಲ್ಲಿ ಪರಿಗಣಿಸಿಲ್ಲ.

  ಕಪಿಲ್‌ ದೇವ್‌ ಆಯ್ಕೆ ಮಾಡಿದ ಸಾರ್ವಕಾಲಿಕ ಟೀಮ್ ಇಂಡಿಯಾ:

  1. ಸಚಿನ್ ತೆಂಡೂಲ್ಕರ್‌ (ಆರಂಭಿಕ)

  2. ವಿರೇಂದ್ರ ಸೆಹ್ವಾಗ್ (ಆರಂಭಿಕ)

  3. ವಿರಾಟ್ ಕೊಹ್ಲಿ (ಮೂರನೇ ಕ್ರಮಾಂಕ)

  4. ರಾಹುಲ್ ದ್ರಾವಿಡ್ (ನಾಲ್ಕನೇ ಕ್ರಮಾಂಕ)

  5. ಯುವರಾಜ್ ಸಿಂಗ್ (ಆಲ್‌ರೌಂಡರ್‌)

  6. ಎಂಎಸ್‌ ಧೋನಿ (ವಿಕೆಟ್‌ಕೀಪರ್‌)

  7. ಜಾವಗಲ್‌ ಶ್ರೀನಾಥ್‌ (ಬಲಗೈ ವೇಗಿ)

  8. ಜಹೀರ್‌ ಖಾನ್ (ಎಡಗೈ ವೇಗಿ)

  9. ಅನಿಲ್‌ ಕುಂಬ್ಳೆ (ಲೆಗ್‌ ಸ್ಪಿನ್ನರ್‌)

  10. ಹರ್ಭಜನ್‌ ಸಿಂಗ್ (ಆಫ್‌ ಸ್ಪಿನ್ನರ್‌)

  11. ಜಸ್‌ಪ್ರೀತ್‌ ಬುಮ್ರಾ (ಬಲಗೈ ವೇಗಿ)

  ಇದನ್ನೂ ಓದಿ: ರಾಹುಲ್‌, ಪಂತ್, ಸಂಜು, ಸಾಹ ಇವರಲ್ಲಿ ಇಬ್ಬರು ಬೆಸ್ಟ್‌ ಕೀಪರ್‌ಗಳನ್ನು ಹೆಸರಿಸಿದ ಗಂಗೂಲಿ..!
  Published by:zahir
  First published: