ಟೀಂ ಇಂಡಿಯಾ ನೂತನ ಕೋಚ್ ಆಯ್ಕೆಗೆ ದಿನಾಂಕ ಫಿಕ್ಸ್​; ಕಪೀಲ್ ದೇವ್ ನೇತೃತ್ವದಲ್ಲಿ ಸಂದರ್ಶನ

ವೆಸ್ಟ್​ ಇಂಡೀಸ್ ಪ್ರವಾಸ ಅಂತ್ಯವಾಗುವರೆಗೆ ರವಿಶಾಸ್ತ್ರಿ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಮಧ್ಯೆ ಶಾಸ್ತ್ರಿ ಅವರೇ ಕೋಚ್ ಆಗಿ ಮುಂದುವರಿಯುವ ಸಾಧ್ಯತೆಗಳು ಹೆಚ್ಚಿದೆ ಎಂಬುದನ್ನು ಮೂಲಗಳು ತಿಳಿಸಿವೆ.

Vinay Bhat | news18
Updated:August 11, 2019, 11:08 AM IST
ಟೀಂ ಇಂಡಿಯಾ ನೂತನ ಕೋಚ್ ಆಯ್ಕೆಗೆ ದಿನಾಂಕ ಫಿಕ್ಸ್​; ಕಪೀಲ್ ದೇವ್ ನೇತೃತ್ವದಲ್ಲಿ ಸಂದರ್ಶನ
ಕಪೀಲ್ ದೇವ್
Vinay Bhat | news18
Updated: August 11, 2019, 11:08 AM IST
ಬೆಂಗಳೂರು (ಆ. 11): ಟೀಂ ಇಂಡಿಯಾಕ್ಕೆ ನೂತನ ಪ್ರಧಾನ ಕೋಚ್ ಹುಡುಕಾಟದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಬ್ಯುಸಿಯಾಗಿದ್ದು, ಕಪೀಲ್ ದೇವ್ ನೇತೃತ್ವದಲ್ಲಿ ಆಗಸ್ಟ್​ 16 ರಂದು ಅಭ್ಯರ್ಥಿಗಳ ಸಂದರ್ಶನ ನಡೆಸಲಿದೆ.

2019 ಏಕದಿನ ವಿಶ್ವಕಪ್ ಮುಗಿದ ಬೆನ್ನಲ್ಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಂ ಇಂಡಿಯಾಕ್ಕೆ ನೂತನ ಪ್ರಧಾನ ಕೋಚ್​ಗಾಗಿ ಅರ್ಜಿ ಆಹ್ವಾನಿಸಿತ್ತು. ಜುಲೈ 30ಕ್ಕೆ ಅರ್ಜಿ ನೀಡಲು ಕೊನೆಯ ದಿನಾಂಕವೆಂದು ಘೋಷಿಸಿತ್ತು. ಸದ್ಯ ಟೀಂ ಇಂಡಿಯಾ ಕೋಚ್ ಆಗಲು ಎರಡು ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ.

ಆ. 16 ರಂದು ಮುಂಬೈನಲ್ಲಿ ಭಾರತದ ಹೊಸ ಕೋಚ್ ಹುದ್ದೆಗೆ ಸಂದರ್ಶನ ನಡೆಯಲಿದ್ದು, ಕೆಲವು ದಿನಗಳ ಕಾಲ ಇದು ಮುಂದುವರೆಯಲಿದೆ. ಅಂತಿಮವಾಗಿ 5 ಅಥವಾ 6 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಇದರಲ್ಲಿ ಒಬ್ಬರು ಟೀಂ ಇಂಡಿಯಾದ ನೂತನ ಕೋಚ್ ಆಗಿ ನೇಮಕ ಆಗಲಿದ್ದಾರೆ.

India vs West Indies: ಸರಣಿ ವಶಕ್ಕೆ ಗೆಲುವೊಂದೆ ಮಂತ್ರ; ಏಕದಿನಕ್ಕೂ ಕಾಲಿಡಲಿದ್ದಾರ ಸೈನಿ..?

ವೆಸ್ಟ್​ ಇಂಡೀಸ್ ಪ್ರವಾಸ ಅಂತ್ಯವಾಗುವರೆಗೆ ರವಿಶಾಸ್ತ್ರಿ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಮಧ್ಯೆ ಶಾಸ್ತ್ರಿ ಅವರೇ ಕೋಚ್ ಆಗಿ ಮುಂದುವರಿಯುವ ಸಾಧ್ಯತೆಗಳು ಹೆಚ್ಚಿದೆ ಎಂಬುದನ್ನು ಮೂಲಗಳು ತಿಳಿಸಿವೆ.

ಆಸ್ಟ್ರೇಲಿಯಾ ಆಲ್​​ರೌಂಡರ್ ಟಾಮ್ ಮೂಡಿ, ನ್ಯೂಜಿಲೆಂಡ್​ ಮಾಜಿ ಆಟಗಾರ ಮೈಕ್ ಹೆಸ್ಸನ್​​, ರಾಬಿನ್ ಸಿಂಗ್​​, ಲಾಲ್​ಚಂದ್ ರಜಪೂತ್ ಸೇರಿ ಪ್ರಮುಖರು ಅರ್ಜಿ ಸಲ್ಲಿಸಿದ್ದಾರೆ. ಇವರ ಜೊತೆಗೆ ದ. ಆಫ್ರಿಕಾ ಮಾಜಿ ಆಟಗಾರ ಜಾಂಟಿ ರೋಡ್ಸ್ ಫೀಲ್ಡಿಂಗ್ ಕೋಚ್ ಹುದ್ದೆಗೆ ಆಸಕ್ತಿ ತೋರಿದ್ದಾರೆ.

First published:August 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...