• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • ಆರ್​ಸಿಬಿ ತಂಡಕ್ಕೆ ನಾಚಿಕೆಯಾಗಬೇಕು!; ಕೊಹ್ಲಿ ತಂಡದ ವಿರುದ್ಧ ತಿರುಗಿ ಬಿದ್ದ ಕನ್ನಡಿಗರು; ಅಷ್ಟಕ್ಕೂ ಆಗಿದ್ದೇನು?

ಆರ್​ಸಿಬಿ ತಂಡಕ್ಕೆ ನಾಚಿಕೆಯಾಗಬೇಕು!; ಕೊಹ್ಲಿ ತಂಡದ ವಿರುದ್ಧ ತಿರುಗಿ ಬಿದ್ದ ಕನ್ನಡಿಗರು; ಅಷ್ಟಕ್ಕೂ ಆಗಿದ್ದೇನು?

ಅಲ್ಲದೆ ಆರ್ಸಿಬಿ ಈ ಹಿಂದೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬೆಂಗಳೂರು ಎಂಬ ಹೆಸರನ್ನು ಕಿತ್ತುಹಾಕಿ ಕೇವಲ ರಾಯಲ್ ಚಾಲೆಂಜರ್ಸ್ ಎಂದು ಬರೆದುಕೊಂಡಿತ್ತು.

ಅಲ್ಲದೆ ಆರ್ಸಿಬಿ ಈ ಹಿಂದೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬೆಂಗಳೂರು ಎಂಬ ಹೆಸರನ್ನು ಕಿತ್ತುಹಾಕಿ ಕೇವಲ ರಾಯಲ್ ಚಾಲೆಂಜರ್ಸ್ ಎಂದು ಬರೆದುಕೊಂಡಿತ್ತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ಪಂದ್ಯ ನಡೆಯುತ್ತಿದ್ದರೆ ಕಿಕ್ಕಿರಿದು ಬೆಂಗಳೂರಿನ ಅಭಿಮಾನಿಗಳು ಸೇರುತ್ತಾರೆ. ಕನ್ನಡಿಗರು ತಮ್ಮ ನೆಚ್ಚಿನ ತಂಡದ ಮೇಲೆ ಇಷ್ಟೆಲ್ಲಾ ಪ್ರೀತಿ ತೋರುವಾಗ ಬೆಂಗಳೂರು ಹೆಸರನ್ನೇ ಟ್ವಿಟ್ಟರ್​ನಲ್ಲಿ ತೆಗೆದು ಹಾಕಿರುವುದು ಅನೇಕರಿಗೆ ನೋವುಂಟು ಮಾಡಿದೆ.

ಮುಂದೆ ಓದಿ ...
  • Share this:

ಬೆಂಗಳೂರು (ನ. 25): ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅತಿ ಹೆಚ್ಚು ಎನರ್ಜಿ ಇರುವ ತಂಡವೆಂದರೆ ಅದು ರಾಯಲ್ ಚಾಲೆಂಜರ್ಸ್​ ಬೆಂಗಳೂರು. 12 ಆವೃತ್ತಿ ಕಳೆದರೂ ಕೊಹ್ಲಿ ಪಡೆ ಒಮ್ಮೆಯೂ ಕಪ್ ಗೆದ್ದಿಲ್ಲ. ಆದರೂ ಆರ್​ಸಿಬಿಗೆ ಅಭಿಮಾನಿಗಳೇ ದೇವರು. ಗೆದ್ದರು- ಸೋತರು ಸದಾ ಆರ್​ಸಿಬಿ ತಂಡಕ್ಕೆ ಬೆಂಬಲಿಸುತ್ತಾ ಬಂದಿದ್ದಾರೆ ಕನ್ನಡಿಗರು.

ಆದರೆ, ಸದ್ಯ ಆರ್​ಸಿಬಿ ಅಭಿಮಾನಿಗಳು ಆರ್​ಸಿಬಿ ತಂಡದ ವಿರದ್ಧವೇ ತಿರುಗಿ ಬಿದ್ದಿದ್ದಾರೆ. ಅಲ್ಲದೆ ನಾವಿನ್ನು ಆರ್​​ಸಿಬಿಗೆ ಬೆಂಬಲವನ್ನೇ ನೀಡುವುದಿಲ್ಲ ಎಂದು ಕೆಲವರು ಪಟ್ಟು ಹಿಡಿದು ಕೂತಿದ್ದಾರೆ. ಇದಕ್ಕೆ ಕಾರಣವಾದರೂ ಏನು..?

ಆರ್​ಸಿಬಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ 30 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದೆ. ಇಷ್ಟು ಫಾಲೋವರ್​​​ಗಳಲ್ಲಿ ಕನ್ನಡಿಗರ ಸಂಖ್ಯೆ ಕೊಂಚ ಹೆಚ್ಚಿದೆ ಎನ್ನಬಹುದು. ಹೀಗಿರುವಾಗ ಆರ್​ಸಿಬಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬೆಂಗಳೂರು ಪದ ಕೈಬಿಟ್ಟು ರಾಯಲ್ ಚಾಲೆಂಜರ್ಸ್​ ಎಂದು ಬದಲಾವಣೆ ಮಾಡಿಕೊಂಡಿದೆ. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಆರ್​ಸಿಬಿ ವಿರುದ್ಧ ತಿರುಗಿ ಬಿದ್ದಿದ್ದಾರೆ.

IPL 2020: ಈ ಬಾರಿ ಹರಾಜಿನಲ್ಲಿ ಕೋಟಿ ಕೋಟಿಗೆ ಸೇಲ್ ಆಗಲಿದ್ದಾರೆ ಈ 5 ಸ್ಟಾರ್ ಆಟಗಾರರು!

ಅನೇಕರು ಟ್ವೀಟ್ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಅದರಲ್ಲು ಸ್ಯಾಂಡಲ್​ವುಡ್​ನ ಖ್ಯಾತ ನಿರ್ದೇಶಕ ಸಿಂಪಲ್ ಸಿನಿ ಅವರು, "ಒಂದು ಕಪ್ ಗೆಲ್ಲದಿದ್ದರೂ, ಒಬ್ಬ ಕನ್ನಡಿಗನನ್ನೂ ಆಡಿಸದಿದ್ದರೂ, ನಾವು ನಿಮ್ಮನ್ನು ಇಷ್ಟಪಡಲು ಕಾರಣ ರಾಯಲ್ ಚಾಲೆಂಜರ್ ಅಲ್ಲ. ನಿಮ್ಮ ಊರು, ಸೂರು, ಕ್ರೀಡಾಂಗಣ ಮತ್ತು ನೀವೆ ಆಗಿದ್ದ 'ಬೆಂಗಳೂರು'. ಈಗ ಅದನ್ನೇ ಬಿಟ್ಟು ಮುನ್ನೆಡೆಯಲು ಹೊರಟರೆ ಅಭಿಮಾನಿಗಳ ಕೆಂಗಣ್ಣು ಬಿದ್ದೀತು. ದಯವಿಟ್ಟು ಬೆಂಗಳೂರು ಸೇರಿಸಿ, ಸೋಲೋ ಗೆಲುವೋ ಜೊತೆಗೇ ಇರುತ್ತೇವೆ" ಎಂದು ಟ್ವೀಟ್ ಮಾಡಿದ್ದಾರೆ.

 ದಾಖಲೆಯೊಂದಿಗೆ ಅಂತ್ಯಕಂಡ ಡೇ ನೈಟ್ ಟೆಸ್ಟ್; 3 ದಿನ ನಡೆದ ಐತಿಹಾಸಿಕ ಪಂದ್ಯ ಹೀಗಿತ್ತು!

ಇನ್ನೂ ಕೆಲವರು "ನಾವು ಆರ್‌ಸಿಬಿ ತಂಡಕ್ಕೆ ಸಪೋರ್ಟ್​ ಮಾಡುತ್ತಿರುವುದು ಬೆಂಗಳೂರು ಪದವಿದೆ ಎಂಬ ಕಾರಣಕ್ಕೆ. ಕೇವಲ ರಾಯಲ್‌ ಚಾಲೆಂಜರ್ಸ್‌ ಎಂದಾದರೆ ಈ ತಂಡ ನಮಗೆ ಬೇಡ. ಇಂತಹ ಕೆಲಸ ಮಾಡಿದ್ದಕ್ಕೆ ನಾಚಿಕೆಯಾಗಬೇಕು" ಎಂದು ಕಿಡಿ ಕಾರಿದ್ದಾರೆ.

 


ಐಪಿಎಲ್ 12 ಆವೃತ್ತಿ ಕೊನೆಗೊಂಡಿದ್ದರು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಪ್ರಶಸ್ತಿಗೆ ಮುತ್ತಿಕ್ಕುವಲ್ಲಿ ವಿಫಲವಾಗಿದೆ. ಇಷ್ಟಾದರು ಅಭಿಮಾನಿಗಳು ಮಾತ್ರ ಆರ್​ಸಿಬಿ ತಂಡವನ್ನು ಬೆಂಬಲಿಸುವುದರಲ್ಲಿ ಹಿಂದೆ ಸರಿದಿಲ್ಲ. ಪ್ರತಿ ಬಾರಿಯು ಕಪ್ ನಮ್ದೆ ಎಂದು ಪ್ರೋತ್ಸಾಹ ನೀಡುತ್ತಲೇ ಬರುತ್ತಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ಪಂದ್ಯ ನಡೆಯುತ್ತಿದ್ದರೆ ಕಿಕ್ಕಿರಿದು ಬೆಂಗಳೂರಿನ ಅಭಿಮಾನಿಗಳು ಸೇರುತ್ತಾರೆ. ಕನ್ನಡಿಗರು ತಮ್ಮ ನೆಚ್ಚಿನ ತಂಡದ ಮೇಲೆ ಇಷ್ಟೆಲ್ಲಾ ಪ್ರೀತಿ ತೋರುವಾಗ ಬೆಂಗಳೂರು ಹೆಸರನ್ನೇ ಟ್ವಿಟ್ಟರ್​ನಲ್ಲಿ ತೆಗೆದು ಹಾಕಿರುವುದು ಅನೇಕರಿಗೆ ನೋವುಂಟು ಮಾಡಿದೆ.

 


 

First published: