ಅಧಿಕಾರ ಸ್ವೀಕರಿಸಿದ ಬಳಿಕ ಕೊಹ್ಲಿ- ಧೋನಿ ಬಗ್ಗೆ ಗಂಗೂಲಿ ಹೇಳಿದ್ದೇನು ಗೊತ್ತಾ..?

Sourav Ganguly: ಗಂಗೂಲಿ ಬಿಸಿಸಿಐ ಅಧ್ಯಕ್ಷ ಎಂದು ಕಳೆದ ವಾರವೇ ತೀರ್ಮಾನಿಸಲಾಗಿತ್ತು. ಅದಕ್ಕೀಗ ಅಧಿಕೃತ ಮುದ್ರೆ ಬಿದ್ದಿದೆ. ಈ ಮೂಲಕ 33 ತಿಂಗಳ ಸುಪ್ರೀಂ ಕೋರ್ಟ್ ನೇಮಿತ ಕ್ರಿಕೆಟ್ ಆಡಳಿತಾಧಿಕಾರಿ ಸಮಿತಿಯ (ಸಿಒಎ) ಆಡಳಿತಕ್ಕೂ ತೆರೆಬಿದ್ದಿದೆ.

Vinay Bhat | news18-kannada
Updated:October 24, 2019, 8:29 AM IST
ಅಧಿಕಾರ ಸ್ವೀಕರಿಸಿದ ಬಳಿಕ ಕೊಹ್ಲಿ- ಧೋನಿ ಬಗ್ಗೆ ಗಂಗೂಲಿ ಹೇಳಿದ್ದೇನು ಗೊತ್ತಾ..?
Sourav Ganguly
  • Share this:
ಬೆಂಗಳೂರು (ಅ. 23): ಬಿಸಿಸಿಐ ನೂತನ ಅಧ್ಯಕ್ಷನಾಗಿ ಇಂದು ಅಧಿಕಾರ ಸ್ವೀಕರಿಸಿದ ಸೌರವ್ ಗಂಗೂಲಿ ಹೊಸ ಇನ್ನಿಂಗ್ಸ್​ ಆರಂಭಿಸಿದ್ದಾರೆ. ಅಧಿಕಾರ ವಹಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಂಗೂಲಿ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಎಲ್ಲ ಮಾದರಿಯಲ್ಲಿ ಸಹಾಯ ಮಾಡಲು ನಾನು ಸಿದ್ಧ ಎಂದು ಹೇಳಿದ್ದಾರೆ.

"ಭಾರತೀಯ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ ಅತ್ಯಂತ ಪ್ರಮುಖ ವ್ಯಕ್ತಿ. ನಾಳೆ ಕೊಹ್ಲಿಯನ್ನು ಭೇಟಿಮಾಡಿ ಮಾತನಾಡಲಿದ್ದೇನೆ. ನಾಯಕತ್ವದ ಕಷ್ಟ ಏನು ಎಂಬುದು ನನಗೆ ತಿಳಿದಿದೆ. ನಾನುಕೂಡ ನಾಯಕನಾಗಿದ್ದವನು. ಹೀಗಿರುವಾಗ ಕೊಹ್ಲಿ ಜೊತೆ ಮಾತನಾಡಿ ತಂಡದ ಸ್ಥಿತಿಗತಿ ಬಗ್ಗೆ ತಿಳಿಯುತ್ತೇನೆ" ಎಂದಿದ್ದಾರೆ.

Virat Kohli most important man in Indian cricket: BCCI president Sourav Ganguly
ಸೌರವ್ ಗಂಗೂಲಿ, ಬಿಸಿಸಿಐ ಅಧ್ಯಕ್ಷ


ಬಿಸಿಸಿಐನಲ್ಲಿ ದಾದಾಗಿರಿ ಆರಂಭ; 39ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸೌರವ್ ಗಂಗೂಲಿ

"ಮುಂದಿನ ದಿನಗಳಲ್ಲಿ ಭಾರತಕ್ಕೆ ಸಾಕಷ್ಟು ಕ್ರಿಕೆಟ್ ಪಂದ್ಯಗಳಿವೆ. ಕೊಹ್ಲಿ ಜೊತೆ ಕೂತು ಅವರಿಗೆ ಏನೆಲ್ಲಾ ಅಗತ್ಯತೆ ಇದೆ ಎಂಬ ಬಗ್ಗೆ ಮಾತುಕತೆ ನಡೆಸಲಿದ್ದೇನೆ. ಕೊಹ್ಲಿ ಭಾರತ ಕ್ರಿಕೆಟ್ ತಂಡವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ" ಎಂದರು.

ಇನ್ನು ಎಂಎಸ್ ಧೋನಿ ಬಗ್ಗೆ ಮಾತನಾಡಿದ ಗಂಗೂಲಿ, "ಭಾರತ ಹೆಮ್ಮೆ ಪಡುವಂತಹ ಸಾಧನೆಯನ್ನು ಧೋನಿ ಮಾಡಿದ್ದಾರೆ. ನಾವು ಕುಳಿತು ಧೋನಿ ಬಗ್ಗೆ ಏನಾದರು ಬರೆಯಲು ಹೊರಟರೆ ಅದು ಅದ್ಭುತವಾಗಿರುತ್ತದೆ. ಚಾಂಪಿಯನ್ನರು ಆದಷ್ಟು ಬೇಗ ಯಾವುದನ್ನು ಮುಗಿಸುವುದಿಲ್ಲ. ನಾನು ಇವರನ್ನೆಲ್ಲ ತುಂಬಾ ಗೌರವಿಸುತ್ತೇನೆ. ಟೀಂ ಇಂಡಿಯಾಕ್ಕೆ ಧೋನಿ ಏನೆಲ್ಲಾ ಮಾಡಿದ್ದಾರೆಂದು ಇಡೀ ಜಗತ್ತಿಗೇ ಗೊತ್ತು. ಅವರ ಮನಸ್ಸಲ್ಲಿ ಏನಿದು ಎಂಇ ನನಗೆ ತಿಳಿದಿಲ್ಲ, ಧೋನಿ ಎಂಬ ಲೆಜೆಂಡ್" ಎಂಬುದು ಗಂಗೂಲಿ ಮಾತಾಗಿತ್ತು.

ಇದರ ಜೊತೆಗೆ "ಈ ಅಧಿಕಾರ ಸಿಕ್ಕಿರುವುದು ತುಂಬಾನೆ ಸಂತಸ ನೀಡಿದೆ. ನನಗೆ ಸಿಕ್ಕ ಜವಾಬ್ದಾರಿಯನ್ನು ಉತ್ತಮವಾಗಿ ಮುನ್ನಡೆಸುತ್ತೇನೆ. ಯಾವುದೇ ಭ್ರಷ್ಟಚಾರಕ್ಕೆ ಇಲ್ಲಿ ಜಾಗವಿಲ್ಲ. ನೇರವಾಗಿ ಇರುತ್ತೇನೆ" ಎಂದಿದ್ದಾರೆ. 



ಇಂಟರ್​ನೆಟ್​ನಲ್ಲಿ ಧೋನಿ ಅಂತ ಸರ್ಚ್​ ಮಾಡುವ ಮುನ್ನ ಯೋಚಿಸಿ; ಇಲ್ಲಿದೆ ಆಘಾತಕಾರಿ ಸುದ್ದಿ!

ಗಂಗೂಲಿ ಬಿಸಿಸಿಐ ಅಧ್ಯಕ್ಷ ಎಂದು ಕಳೆದ ವಾರವೇ ತೀರ್ಮಾನಿಸಲಾಗಿತ್ತು. ಅದಕ್ಕೀಗ ಅಧಿಕೃತ ಮುದ್ರೆ ಬಿದ್ದಿದೆ. ಈ ಮೂಲಕ 33 ತಿಂಗಳ ಸುಪ್ರೀಂ ಕೋರ್ಟ್ ನೇಮಿತ ಕ್ರಿಕೆಟ್ ಆಡಳಿತಾಧಿಕಾರಿ ಸಮಿತಿಯ (ಸಿಒಎ) ಆಡಳಿತಕ್ಕೂ ತೆರೆಬಿದ್ದಿದೆ.

ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಯ (ಸಿಎಬಿ) ಅಧ್ಯಕ್ಷರೂ ಆಗಿರುವ ಸೌರವ್ ಗಂಗೂಲಿ ಅಧ್ಯಕ್ಷರಾಗಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಪುತ್ರ, ಗುಜರಾತ್ ಕ್ರಿಕೆಟ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ಜಯ್ ಷಾ ಕಾರ್ಯದರ್ಶಿಯಾಗಿ ಅವಿರೋಧವಾಗಿ ಇಂದು ಆಯ್ಕೆಯಾಗಿದ್ದಾರೆ.
First published: October 23, 2019, 3:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading