HOME » NEWS » Sports » CRICKET KANNADA NEWS SACHIN TENDULKAR WINS LAUREUS SPORTING MOMENT AWARD FOR 2011 WORLD CUP TRIUMPH VB

Sachin Tendulkar: ಕ್ರಿಕೆಟ್ ದೇವರು ಸಚಿನ್​ಗೆ ಕ್ರೀಡಾ ಆಸ್ಕರ್ ಪ್ರಶಸ್ತಿ; ವೇದಿಕೆಯಲ್ಲಿ ಭಾವುಕರಾದ ತೆಂಡೂಲ್ಕರ್

Laureus Sporting Moment Award: ನೆಲ್ಸನ್ ಮಂಡೇಲಾ ಅವರಿಂದ ಮುಖ್ಯವಾಗಿ ನಾನು ಕ್ರೀಡೆ ಒಗ್ಗಟ್ಟನ್ನು ಪ್ರತಿನಿಧಿಸುತ್ತದೆ ಎಂಬ ವಿಚಾರವನ್ನು ಕಲಿತಿದ್ದೇನೆ. ಕ್ರೀಡೆಗೆ ಎಲ್ಲವನ್ನೂ ಒಂದುಗೂಡಿಸುವ ಶಕ್ತಿ ಇದೆ. ಈ ದಿನ ನಾನು ದೊಡ್ಡ ದೊಡ್ಡ ಆಟಗಾರರ ನಡುವೆ ನಿತ್ತಿದ್ದೇನೆ- ಸಚಿನ್ ತೆಂಡೂಲ್ಕರ್

news18-kannada
Updated:February 18, 2020, 3:14 PM IST
Sachin Tendulkar: ಕ್ರಿಕೆಟ್ ದೇವರು ಸಚಿನ್​ಗೆ ಕ್ರೀಡಾ ಆಸ್ಕರ್ ಪ್ರಶಸ್ತಿ; ವೇದಿಕೆಯಲ್ಲಿ ಭಾವುಕರಾದ ತೆಂಡೂಲ್ಕರ್
ಪ್ರಶಸ್ತಿ ಸ್ವೀಕರಿಸುತ್ತಿರುವ ಸಚಿನ್ ತೆಂಡೂಲ್ಕರ್.
  • Share this:
ಬರ್ಲಿನ್​ನಲ್ಲಿ ನಡೆದ 20ನೇ ಸಾಲಿನ 'ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿ'ಯನ್ನು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತಮ್ಮದಾಗಿಸಿಕೊಂಡಿದ್ದಾರೆ. ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿ ಕ್ರೀಡಾ ವಿಭಾಗದ ಆಸ್ಕರ್​ ಎಂದೇ ಕರೆಯಲಾಗುತ್ತದೆ. ಕ್ರೀಡಾ ವಿಭಾಗದಲ್ಲಿ  ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ.

2011 ಏಕದಿನ ವಿಶ್ವಕಪ್ ಗೆಲುವಿನ ಸಾಧನೆಗಾಗಿ 2000ದಿಂದ 2020ನೇ ಇಸವಿಯ ವರೆಗಿನ 'ಲಾರೆಸ್ ಕ್ರೀಡಾ ಕ್ಷಣ ಪ್ರಶಸ್ತಿ’ ಸಚಿನ್ ರಮೇಶ್ ತೆಂಡೂಲ್ಕರ್​ಗೆ ಒಲಿದಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಾಸ್ಟರ್ ಬ್ಲಾಸ್ಟರ್ ವೇದಿಕೆಯಲ್ಲಿ ಭಾವುಕರಾದರು.

ಭಾಜನವಾಗಿದ್ದಾರೆ.

 ICC T20 Rankings: ನಂಬರ್ ಒನ್ ಪಾಕ್ ಆಟಗಾರನಿಗೆ ಟಕ್ಕರ್ ಕೊಡಲು ರೆಡಿಯಾದ ರಾಹುಲ್; ಪಾತಳಕ್ಕೆ ಕುಸಿದ ಕೊಹ್ಲಿ!

"ದಕ್ಷಿಣ ಆಫ್ರಿಕಾ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರನ್ನು ನಾನು 19 ವರ್ಷ ಇದ್ದಾಗ ಭೇಟಿ ಆಗಿದ್ದೆ. ಇದು ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ಕ್ಷಣ. ಅವರ ಜೀವನದ ಕಷ್ಟದ ದಿನಗಳು ನಾಯಕತ್ವದ ಮೇಲೆ ಪರಿಣಾಮ ಬೀರಲಿಲ್ಲ. ಅನೇಕ ಸಂದೇಶಗಳನ್ನು ನಮಗೆ ನೀಡಿ ಹೋಗಿದ್ದಾರೆ," ಎಂದರು ಸಚಿನ್​.

 "ಕ್ರೀಡೆಯಲ್ಲಿ ಒಗ್ಗಟ್ಟು ಮುಖ್ಯ ಎಂಬುದನ್ನು ನಾನು ನೆಲ್ಸನ್ ಮಂಡೇಲಾ ಅವರಿಂದ ಕಲಿತಿದ್ದೇನೆ. ಕ್ರೀಡೆಗೆ ಎಲ್ಲವನ್ನೂ ಒಂದುಗೂಡಿಸುವ ಶಕ್ತಿ ಇದೆ. ಈ ದಿನ ನಾನು ದೊಡ್ಡ ದೊಡ್ಡ ಆಟಗಾರರ ನಡುವೆ ನಿಂತಿದ್ದೇನೆ. ನನಗೆ ಒಲಿದು ಬಂದ ಈ ಪ್ರಶಸ್ತಿ ಯುವಕರ ಒಲವು ಕ್ರೀಡೆಯತ್ತ ಮೂಡಲು ಪ್ರೇರಣೆ ನೀಡುವಂತಿದೆ" ಎಂದು ಸಚಿನ್ ಭಾವುಕರಾದರು.

Faf du Plessis: ಎಲ್ಲ ಮಾದರಿಯ ನಾಯಕತ್ವಕ್ಕೆ ದಿಢೀರ್ ಗುಡ್ ಬೈ ಹೇಳಿದ ಡುಪ್ಲೆಸಿಸ್!; ಕಾರಣ..?

 ಇನ್ನು ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು ರೇಸರ್​ ಹ್ಯಾಮಿಲ್ಟನ್ ಜೊತೆಗೆ ವರ್ಷದ ಲಾರೆಸ್ ವರ್ಲ್ಡ್ ಸ್ಪೋರ್ಟ್​ಮ್ಯಾನ್​ ಪ್ರಶಸ್ತಿ ಗೆದ್ದರು. ಮೆಸ್ಸಿ ಈ ಪ್ರಶಸ್ತಿ ಗೆದ್ದ ಮೊದಲ ಫುಟ್ಬಾಲ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

 

First published: February 18, 2020, 8:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories