IND vs NZ: ಟೆಸ್ಟ್​ ಸರಣಿಗೆ ಸಜ್ಜಾಗುತ್ತಿದೆ ಕೊಹ್ಲಿ ಪಡೆ; ಮೊದಲ ಪಂದ್ಯ ಎಲ್ಲಿ?, ಯಾವಾಗ?; ಇಲ್ಲಿದೆ ಮಾಹಿತಿ

India vs New Zealand First Test Match: ಸದ್ಯ ನಾಲ್ವರು ವೇಗಿಗಳ ಜೊತೆ ಮತ್ತೊಬ್ಬ ಬೌಲರ್ ಇಶಾಂತ್ ಶರ್ಮಾ ಭಾರತ ತಂಡ ಸೇರಿಕೊಂಡಿದ್ದಾರೆ. ಇಂಜುರಿಯಿಂದ ಬಳಲುತ್ತಿದ್ದ ಇಶಾಂತ್ ಫಿಟ್​ನೆಸ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿ ನ್ಯೂಜಿಲೆಂಡ್​ ತಲುಪಿದ್ದಾರೆ.

Vinay Bhat | news18-kannada
Updated:February 18, 2020, 4:05 PM IST
IND vs NZ: ಟೆಸ್ಟ್​ ಸರಣಿಗೆ ಸಜ್ಜಾಗುತ್ತಿದೆ ಕೊಹ್ಲಿ ಪಡೆ; ಮೊದಲ ಪಂದ್ಯ ಎಲ್ಲಿ?, ಯಾವಾಗ?; ಇಲ್ಲಿದೆ ಮಾಹಿತಿ
ಭಾರತ ಹಾಗೂ ನ್ಯೂಜಿಲೆಂಡ್
  • Share this:
ಭಾರತ- ನ್ಯೂಜಿಲೆಂಡ್ ನಡುವಣ ಟಿ-20 ಮತ್ತು ಏಕದಿನ ಸರಣಿ ಮುಕ್ತಾಯಗೊಂಡಿದೆ. ಸದ್ಯ ಉಭಯ ತಂಡಗಳು ಟೆಸ್ಟ್​ ಸರಣಿಗೆ ಸಜ್ಜಾಗುತ್ತಿವೆ. ಈಗಾಗಲೇ ಮೂರು ದಿನಗಳ ಅಭ್ಯಾಸ ಪಂದ್ಯ ಕೂಡ ನಡೆದು ಡ್ರಾನಲ್ಲಿ ಅಂತ್ಯಕಂಡಿದೆ.

ಎರಡು ಪಂದ್ಯಗಳ ಟೆಸ್ಟ್​ ಸರಣಿ ಪೈಕಿ ಮೊದಲ ಪಂದ್ಯ ಫೆಬ್ರವರಿ 21 ರಿಂದ ಫೆ. 25 ವರೆಗೆ ವೆಲ್ಲಿಂಗ್ಟನ್​ನಲ್ಲಿ ನಡೆಯಲಿದೆ. ಭಾರತೀಯ ಕಾಲ ಮಾನದ ಪ್ರಕಾರ ಪಂದ್ಯ ಮುಂಜಾನೆ 4 ಗಂಟೆಗೆ ಪ್ರಾರಂಭವಾಗಲಿದೆ. ಎರಡನೇ ಟೆಸ್ಟ್​ ಫೆಬ್ರವರಿ 29 ರಿಂದ ಮಾರ್ಚ್​ 4 ವರೆಗೆ ಕ್ರಿಸ್ಟ್​ಚರ್ಚ್​ನಲ್ಲಿ ನಡೆಯಲಿದೆ.

India vs New Zealand: Virat Kohli's team to face sternest test with an eye on World Test Championship
ಭಾರತ ಹಾಗೂ ನ್ಯೂಜಿಲೆಂಡಗ ನಡುವಣ ಅಭ್ಯಾಸ ಪಂದ್ಯದ ಫೋಟೋ.


ಮೂರು ದಿನ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್​ಮನ್​ಗಳು ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ. ರೋಹಿತ್ ಶರ್ಮಾ ಅನುಪಸ್ಥಿತಿ ಎದ್ದು ಕಾಣುತ್ತಿದ್ದು, ಪೃಥ್ವಿ ಶಾ ಹಾಗೂ ಮಯಾಂಕ್ ಅಗರ್ವಾಲ್ ಜೋಡಿ ಮೋಡಿ ಮಾಡುತ್ತಿಲ್ಲ. ಶಾ-ಮಯಾಂಕ್ ಏಕದಿನದಲ್ಲೂ ವೈಫಲ್ಯ ಅನುಭವಿಸಿದ್ದರು.

Women T20 World Cup: ವಿಂಡೀಸ್ ವಿರುದ್ಧ ಜಯ ಸಾಧಿಸಿ ಟಿ-20 ವಿಶ್ವಕಪ್​ಗೆ ತಯಾರಾದ ಭಾರತೀಯ ಮಹಿಳೆಯರು!

ಶುಭ್ಮನ್ ಗಿಲ್ ಕೂಡ ಫಾರ್ಮ್​ ಕಳೆದುಕೊಂಡಿದ್ದಾರೆ. ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ. ಬದಲಾಗಿ ನೆಟ್​ನಲ್ಲಿ ತಾವೇ ಬೆವರು ಹರಿಸುತ್ತಿದ್ದರು. ಹನುಮಾ ವಿಹಾರಿ ಹಾಗೂ ಟೆಸ್ಟ್​ ಸ್ಪೆಷಲಿಸ್ಟ್​ ಚೇತೇಶ್ವರ್ ಪೂಜಾರ ಅಭ್ಯಾಸ ಪಂದ್ಯದಲ್ಲಿ ಗಮನ ಸೆಳೆದರು.

ಭಾರತೀಯ ಬೌಲಿಂಗ್ ಪಡೆ ಅತ್ಯುತ್ತಮ ಪ್ರದರ್ಶನ ನೀಡಿತು. ಅದರಲ್ಲು ವೇಗಿಗಳು ಮಿಂಚಿದರು. ಮೊಹಮ್ಮದ್ ಶಮಿ, ಜಸ್​ಪ್ರೀತ್ ಬುಮ್ರಾ, ಉಮೇಶ್ ಯಾದವ್ ಹಾಗೂ ನವ್​ದೀಪ್ ಸೈನಿ ಮಾರಕ ದಾಳಿ ಸಂಘಟಿಸಿದರು.ಸದ್ಯ ನಾಲ್ವರು ವೇಗಿಗಳ ಜೊತೆ ಮತ್ತೊಬ್ಬ ಬೌಲರ್ ಇಶಾಂತ್ ಶರ್ಮಾ ತಂಡ ಸೇರಿಕೊಂಡಿದ್ದಾರೆ. ಇಂಜುರಿಯಿಂದ ಬಳಲುತ್ತಿದ್ದ ಇಶಾಂತ್ ಫಿಟ್​ನೆಸ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿ ನ್ಯೂಜಿಲೆಂಡ್​ ತಲುಪಿದ್ದಾರೆ. ಹೀಗಾಗಿ ಭರ್ಜರಿ ಫಾರ್ಮ್​ನಲ್ಲಿರುವ 5 ಜನ ವೇಗಿಗಳ ಪೈಕಿ ಯಾರೆಲ್ಲ ಕಣಕ್ಕಿಳಿಯುತ್ತಾರೆ ಎಂಬುದೆ ಕುತೂಹಲ.

ಸ್ಟಾರ್ ಕ್ರಿಕೆಟಿಗ ಪ್ರಯಾಣಿಸುತ್ತಿದ್ದ ಕಾರು ಅಪಘಾತ; ಸಾವಿನಂಚಿನಿಂದ ಪಾರಾದ ವಿಂಡೀಸ್ ದೈತ್ಯ

ಇತ್ತ ನ್ಯೂಜಿಲೆಂಡ್ ಕೂಡ ಎರಡು ಟೆಸ್ಟ್​ ಪಂದ್ಯಕ್ಕೆ ಬಲಿಷ್ಠ ತಂಡವನ್ನು ಪ್ರಕಟ ಮಾಡಿದೆ. ಗಾಯದಿಂದ ಸಂಪೂರ್ಣವಾಗಿ ಚೇತರಿಕೆಗೊಂಡಿರುವ ಎಡಗೈ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಕಮ್‌ಬ್ಯಾಕ್ ಮಾಡಿದ್ದಾರೆ. ಆಕ್ಲೆಂಡ್ ವೇಗದ ಬೌಲರ್ ಕೈಲ್ ಜೇಮಿಸನ್ ಸಹ ಟೆಸ್ಟ್ ತಂಡಕ್ಕೆ ಚೊಚ್ಚಲ ಬುಲಾವ್ ಪಡೆದಿದ್ದಾರೆ.

ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ, ವೃದ್ದಿಮಾನ್ ಸಾಹ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಆರ್. ಅಶ್ವಿನ್, ಉಮೇಶ್ ಯಾದವ್, ಮಯಾಂಕ್ ಅಗರ್ವಾಲ್, ಮೊಹಮ್ಮದ್ ಶಮಿ, ಹನುಮಾ ವಿಹಾರಿ, ಜಸ್​ಪ್ರೀತ್​​ ಬುಮ್ರಾ, ನವ್​ದೀಪ್​​ ಸೈನಿ, ರಿಷಭ್ ಪಂತ್, ಶುಭ್ಮನ್ ಗಿಲ್, ಪೃಥ್ವಿ ಶಾ, ಇಶಾಂತ್ ಶರ್ಮಾ.

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಬ್ಲಂಡೆಲ್, ಟ್ರೆಂಟ್ ಬೌಲ್ಟ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕೈಲ್ ಜೇಮಿಸನ್, ಟಾಮ್ ಲೇಥಮ್, ಡ್ಯಾರೆಲ್ ಮಿಚೆಲ್, ಹೆನ್ರಿ ನಿಕೋಲಸ್, ಅಜಾಜ್ ಪಟೇಲ್, ಟಿಮ್ ಸೌಥಿ, ರಾಸ್ ಟೇಲರ್, ನೀಲ್ ವ್ಯಾಗ್ನರ್ ಮತ್ತು ಬಿಜೆ ವಾಟ್ಲಿಂಗ್.

First published:February 18, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ