ICC World Cup 2019: ವಿಶ್ವಕಪ್​ನಲ್ಲಿ ಹೊಸ ದಾಖಲೆ ಬರೆದ ನ್ಯೂಜಿಲೆಂಡ್ ನಾಯಕ ವಿಲಿಯಮ್ಸನ್

ICC World Cup 2019: ಸದ್ಯ ಈ ಬಾರಿಯ ವಿಶ್ವಕಪ್​ನಲ್ಲಿ ಅತ್ಯಧಿಕ ರನ್​ ಬಾರಿಸಿದವರ ಪಟ್ಟಿಯಲ್ಲಿ ಟೀಂ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ (648) ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ಓಪನರ್ ಡೇವಿಡ್ ವಾರ್ನರ್​(647) ದ್ವಿತೀಯ ಸ್ಥಾನದಲ್ಲಿದ್ದಾರೆ.

zahir | news18
Updated:July 14, 2019, 5:53 PM IST
ICC World Cup 2019: ವಿಶ್ವಕಪ್​ನಲ್ಲಿ ಹೊಸ ದಾಖಲೆ ಬರೆದ ನ್ಯೂಜಿಲೆಂಡ್ ನಾಯಕ ವಿಲಿಯಮ್ಸನ್
ICC World Cup 2019
zahir | news18
Updated: July 14, 2019, 5:53 PM IST
ಇಂಗ್ಲೆಂಡ್ ವಿರುದ್ಧದ ವಿಶ್ವಕಪ್​ ಫೈನಲ್​ನಲ್ಲಿ 1 ರನ್​ಗಳಿಸುವ ಮೂಲಕ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ವರ್ಲ್ಡ್​​ಕಪ್​ನಲ್ಲಿ ಹೊಸ ದಾಖಲೆ ಬರೆದರು. ನಾಯಕವಾಗಿ ವಿಶ್ವಕಪ್ ಟೂರ್ನಿಯೊಂದರಲ್ಲಿ ಅತ್ಯಧಿಕ ರನ್​ ಬಾರಿಸಿದ ಕೀರ್ತಿಗೆ ಕಿವೀಸ್ ಕ್ಯಾಪ್ಟನ್ ಪಾತ್ರರಾಗಿದ್ದಾರೆ.

ಇದಕ್ಕೂ ಮುನ್ನ2007ರ ವಿಶ್ವಕಪ್​ನಲ್ಲಿ​ ಶ್ರೀಲಂಕಾ ತಂಡವನ್ನು ಮುನ್ನಡೆಸಿದ್ದ ಮಹೇಲ ಜಯವರ್ಧನೆ 548 ರನ್​ ಸಿಡಿಸಿರುವುದು ದಾಖಲೆಯಾಗಿತ್ತು. ಆದರೆ ಭಾನುವಾರದ ಪಂದ್ಯದಲ್ಲಿ 30 ರನ್​ಗಳಿಸಿದ ವಿಲಿಯಮ್ಸನ್ 578 ರನ್​ಗಳೊಂದಿಗೆ ವಿಶ್ವಕಪ್​ ನಾಯಕನ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.

ಇನ್ನು ಟೂರ್ನಿಯಲ್ಲಿ 600 ರನ್​ಗಳ ಗಡಿ ದಾಟುವ ಅವಕಾಶವಿತ್ತಾದರೂ ವಿಲಿಯಮ್ಸನ್ ಅಂತಿಮ ಪಂದ್ಯದಲ್ಲಿ ಕೀಪರ್​ಗೆ ಕ್ಯಾಚಿತ್ತು ಹೊರ ನಡೆದರು. ಸದ್ಯ ಈ ಬಾರಿಯ ವಿಶ್ವಕಪ್​ನಲ್ಲಿ ಅತ್ಯಧಿಕ ರನ್​ ಬಾರಿಸಿದವರ ಪಟ್ಟಿಯಲ್ಲಿ ಟೀಂ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ (648) ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ಓಪನರ್ ಡೇವಿಡ್ ವಾರ್ನರ್​(647) ದ್ವಿತೀಯ ಸ್ಥಾನದಲ್ಲಿದ್ದಾರೆ.

ಹಾಗೆಯೇ ಇಂಗ್ಲೆಂಡ್ ತಂಡದ ಜೋ ರೂಟ್ ಈಗಾಗಲೇ 549 ರನ್​ಗಳೊಂದಿಗೆ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದು, ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿದರೆ ಅಗ್ರಸ್ಥಾನಕ್ಕೇರಲಿದ್ದಾರೆ.

ಇದನ್ನೂ ಓದಿ: ಸಚಿನ್ ಸಾರ್ವಕಾಲಿಕ ದಾಖಲೆ: ರೋಹಿತ್-ವಾರ್ನರ್ ವಿಫಲ: ಎಲ್ಲರ ಚಿತ್ತ ವಿಲಿಯಮ್ಸನ್-ರೂಟ್​ರತ್ತ..!
First published:July 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...